ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಶುಕ್ಲ ನವಮಿ ಜ.8.2024 Astrology: ಸೂರ್ಯನಾರಾಯಣನಿಗೆ ಕೆಂಪು ಹೂಗಳಿಂದ ಪೂಜೆ ಮಾಡಿ ಆರತಿಯನ್ನು ಸ್ವೀಕರಿಸಿದರೆ ದಿನ ಅತ್ಯಂತ ಶುಭವಾಗುತ್ತದೆ.
ಮೇಷ ರಾಶಿ: ಮನಸ್ಸಿನಲ್ಲಿ ನಾನಾ ವಿಕಾರಗಳು, ಸ್ವಲ್ಪ ಚಿಂತೆ, ನೆಮ್ಮದಿಯ ಮಾತುಕತೆ. ಆದರೆ ಸಣ್ಣಪುಟ್ಟ ಕಲಹಗಳು, ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರವಾದ, ದೃಢವಾದ ನಿರ್ಧಾರ. (ಪರಿಹಾರಕ್ಕಾಗಿ ಅಮ್ಮನವರಿಗೆ ಕೆಂಪು ಹೂಗಳಿಂದ ಪೂಜೆ ಮಾಡಿ)
ವೃಷಭ ರಾಶಿ: ಆರೋಗ್ಯವನ್ನು ನಿರ್ಲಕ್ಷಿಸಬೇಡಿ ಅಧಿಕ ತಿರುಗಾಟ ವಾಹನ ಸೌಖ್ಯ ಮನಸ್ಸಿಗೆ ಬೇಸರ ದುಃಖ ಅಥವಾ ನಿರ್ಧಾರಗಳು ಬೇಡ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯನ್ನು ಸ್ಮರಣೆ ಮಾಡಿ ಅನುಕೂಲವಾಗುತ್ತದೆ)
ಮಿಥುನ ರಾಶಿ: ಇಚ್ಚಿಸಿದ ಕಾರ್ಯಗಳಲ್ಲಿ ಯಶಸ್ಸು. ಆದರೆ ಏಕೋ ಮನಸ್ಸಿನ ಕಳವಳ, ಆರೋಗ್ಯಕ್ಕಾಗಿ ಸ್ವಲ್ಪ ಆಸ್ಪತ್ರೆಗೆ ತಿರುಗಾಟ. ಧನವ್ಯಯ, ದುಃಖ, ಸ್ವಲ್ಪ ಮಟ್ಟಿಗೆ ಅನಾರೋಗ್ಯ, ವಿಪರೀತವಾಗಿ ಮೈ ಕೈಯಲ್ಲಿ ನೋವು. (ಪರಿಹಾರಕ್ಕಾಗಿ ಶಿವನಿಗೆ ಅಭಿಷೇಕ ಮಾಡಿಸಿ)
ಕಟಕ ರಾಶಿ: ಅಧಿಕವಾದ ಯೋಚನೆ, ಅಧಿಕವಾಗಿ ಕೂಗಾಟ, ಅನಾವಶ್ಯಕ ತಿರುಗಾಟ, ವ್ಯರ್ಥ ಪ್ರಲಾಪ, ಪ್ರಯೋಜನವಿಲ್ಲದ ಸ್ಥಿತಿ, ಆಯಾಸ, ಸ್ವಲ್ಪ ಅನಾರೋಗ್ಯ. (ಪರಿಹಾರಕ್ಕಾಗಿ ಧನ್ವಂತರಿ ಮಹಾವಿಷ್ಣು ಜಪವನ್ನು ಮಾಡಿಕೊಳ್ಳಿ)
ಸಿಂಹ ರಾಶಿ: ಮೃತ ಚಿಂತೆ ಮಾನಸಿಕ ತಳಮಳ ಸ್ವಲ್ಪ ಧನಸಹಾಯ ಅವಕಾಶಕ್ಕಾಗಿ ಆಲೋಚನೆ ಚಿಂತೆ ಒಳಗೊಳಗೆ ಯೋಚನೆ ಆಚಲ ನಿರ್ಧಾರ ಮಾಡಬೇಕು. (ಪರಿಹಾರಕ್ಕಾಗಿ ಹನುಮಂತನ ದೇವಸ್ಥಾನದಲ್ಲಿ ಪೂಜೆ ಮಾಡಿಸಿ)
ಕನ್ಯಾ ರಾಶಿ: ಅದೃಷ್ಟ, ಶೀಘ್ರ ಧನದ ಆಗಮನ, ಅವಕಾಶ ಹುಡುಕಿಕೊಂಡು ಬರುತ್ತದೆ. ಅದೃಷ್ಟವಿದ್ದಾಗ ಜೊತೆಯಲ್ಲಿ ಸೇರಿಕೊಳ್ಳಿ ಶುಭವಾಗುತ್ತದೆ. ಯಾವುದೇ ಕಾರಣಕ್ಕೂ ದೂರ ತಳ್ಳಬೇಡಿ, ವಿದ್ಯಾರ್ಥಿಗಳಿಗೆ ವಿದ್ಯಾಲಾಭ ಯಶಸ್ಸು. (ಪರಿಹಾರಕ್ಕಾಗಿ ಅಮ್ಮನವರನ್ನು ಧ್ಯಾನ ಮಾಡಿ)
ತುಲಾ ರಾಶಿ: ಒಳ್ಳೆಯದಾಗುತ್ತದೆ ಅನ್ಯಥಾ ಯೋಚನೆ ಮಾಡಬೇಡಿ. ಸುಮ್ಮ ಸುಮ್ಮನೆ ಯೋಚಿಸಿದ್ದಾರೆ ಪ್ರಯೋಜನವಿಲ್ಲ, ದೀರ್ಘವಾದ ನೋವುಗಳು, ಸ್ವಲ್ಪ ಆಯಾಸ, ದೇಹದಲ್ಲಿ ಇರುತ್ತದೆ. ಚಿಂತೆ ಬೇಡ, ಆರೋಗ್ಯ ನಿಧಾನವಾಗಿ ಸರಿ ಹೋಗುತ್ತದೆ ಒಳ್ಳೆಯದಾಗುತ್ತದೆ. (ಪರಿಹಾರಕ್ಕಾಗಿ ಯೋಗ ಧ್ಯಾನ ಅನುಸರಣೆ ಮಾಡಿ)
ವೃಶ್ಚಿಕ ರಾಶಿ: ಕೆಲವರನ್ನು ಬಿಡಲು ಆಗುವುದಿಲ್ಲ, ಇಟ್ಟುಕೊಳ್ಳಲು ಆಗುವುದಿಲ್ಲ. ನುಂಗಲಾರದ ತುಪ್ಪದ ಪರಿಸ್ಥಿತಿ ನಿಮ್ಮದು, ಯೋಚಿಸಿ ನಿರ್ಧಾರ ಮಾಡಿ, ಇಲ್ಲವಾದರೆ ಕಷ್ಟವಾಗುತ್ತದೆ. (ಪರಿಹಾರಕ್ಕಾಗಿ ಸುಬ್ರಮಣ್ಯನ ದೇವಸ್ಥಾನದಲ್ಲಿ ಪೂಜೆ ಮಾಡಿಸಿ)
ಧನಸ್ಸು ರಾಶಿ: ಈ ದಿನ ತುಂಬಾ ಸರಳವಾದ ಆಲೋಚನೆ, ಸರಳವಾದು ದೃಷ್ಟಿ. ಆದರೆ ಮನಸ್ಸಿನಲ್ಲಿ ಸ್ವಲ್ಪ ಅಂಜಿಕೆ, ಭಯ. ವಿದ್ಯಾರ್ಥಿಗಳಿಗೆ ಅನುಕೂಲ, ಮನೆಯಲ್ಲಿರುವವರಿಗೆ ಕೆಲಸ ಮಾಡಬೇಕೆಂಬ ಬಯಕೆ ಆಸೆ, ಶ್ರದ್ಧೆ ಉಂಟಾಗುತ್ತದೆ. (ಪರಿಹಾರಕ್ಕಾಗಿ ಶ್ರೀ ಕೃಷ್ಣನ ಧ್ಯಾನವನ್ನು ಮಾಡಿ)
ಮಕರ ರಾಶಿ: ಅತಿಯಾದ ನಿರಾಸಕ್ತಿ, ಒಳ್ಳೆಯದಾಗುತ್ತದೆ ಎಂಬ ಮುನ್ಸೂಚನೆ ಇದ್ದರೂ ಭಯ, ಆತಂಕ, ದುಗುಡ. 10 ಕಡೆಯಲ್ಲಿ ಕೆಲಸ ಮಾಡಿ ಯಾವುದು ಪೂರ್ಣವಾಗುವುದಿಲ್ಲ ಹಾಗಾಗಿ ಒಂದೇ ಕಡೆ ಹಿಡಿದ ಕೆಲಸವನ್ನು ಸಾಧಿಸಿ. (ಪರಿಹಾರಕ್ಕಾಗಿ ಮಹಾಗಣಪತಿಯ ಪೂಜೆ ಮಾಡಿ)
ಕುಂಭ ರಾಶಿ: ದೊಡ್ಡ ದೊಡ್ಡ ಸಮಸ್ಯೆಗಳು ನೀರಿನಂತೆ ಕರಗಿ ಹೋಗುತ್ತವೆ. ಆದರೆ ನಿಮಗೆ ಹತ್ತಿರವಾದ ವ್ಯಕ್ತಿಯಿಂದ ಸಮಸ್ಯೆ ಹೊಸದಾಗಿ ಬರಬಹುದು ಎಚ್ಚರಿಕೆ. ಧನವು ನಿಧಾನವಾಗಿ ಬಂದು ಸೇರುತ್ತದೆ. (ಪರಿಹಾರಕ್ಕಾಗಿ ಮಹಾಕಾಳಿ ಅಮ್ಮನವರ ದೇವಸ್ಥಾನದಲ್ಲಿ ಪೂಜೆ ಮಾಡಿಸಿ)
ಮೀನ ರಾಶಿ: ಅತಿಯಾಗಿ ಹಾರಾಡಿದರೆ ಪ್ರಯೋಜನವಿಲ್ಲ. ಆದರೆ ಕಾರ್ಯವನ್ನು ಸಾಧನೆ ಮಾಡಬೇಕು, ಈಗಲ್ಲ ಮುಂದೆ ಅನುಕೂಲವಾಗುತ್ತದೆ. ಮನಸ್ಸಿನಲ್ಲಿ ದೃಢವಾದ ನಿರ್ಧಾರವನ್ನು ಮಾಡಿ ಆಗುತ್ತದೆ. (ಪರಿಹಾರಕ್ಕಾಗಿ ಗುರುಗಳಾದ ದತ್ತರ ದರ್ಶನವನ್ನು ಮಾಡಿ)
ರಾಹುಕಾಲ: 12-13PM ರಿಂದ 1-39PM
ಗುಳಿಕಕಾಲ: 10-30AM ರಿಂದ 12-00PM
ಯಮಗಂಡಕಾಲ: 7-30AMರಿಂದ 9-00AM
ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572