
ದೊಡ್ಡಬಳ್ಳಾಪುರ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತದ (PLD Bank) ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಇಂದು ನಡೆಯಲಿದೆ.

ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತಕ್ಕೆ ಫೆಬ್ರವರಿ 16 ರಿಂದ ಮುಂದಿನ 05 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಚುನಾವಣೆ ನಡೆಸಲಾಗುತ್ತಿದೆ.
ಇಂದು 11ರಿಂದ 12 ನಾಮಪತ್ರ ಸಲ್ಲಿಕೆ ಸಮಯ ನಿಗದಿಯಾಗಿದ್ದು, 12-15ಕ್ಕೆ ಸಭೆ ನಡೆಯಲಿದೆ. ಬಳಿಕ 12-30ಕ್ಕೆ ನಾಮಪತ್ರ ಹಿಂಪಡೆಯಲು ಅವಕಾಶ, ಅಂತಿಮವಾಗಿ ಚುನಾವಣೆ ಅಗತ್ಯವಿದ್ದರೆ 1 ಗಂಟೆ ಚುನಾವಣೆ ನಡೆಯಲಿದೆ.
ಗೋವಾ ಪ್ರವಾಸ: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಮೂರು ಪಕ್ಷಗಳಲ್ಲಿ ತೀವ್ರ ಕಸರತ್ತು ಕಂಡು ಬಂದಿದೆ. ರೈತರ ಉದ್ಧಾರ ಮಾಡಲೆಂದು ಆಯ್ಕೆಯಾಗಿರುವ ಸದಸ್ಯರಲ್ಲಿ ಕೆಲವರು ಈಗಾಗಲೇ ಗೋವಾ, ಊಟಿ ಜಾಲಿ ಜಾಲಿ ಟ್ರಿಪ್ ಮುಗಿಸಿ ನಿನ್ನೆ ರಾತ್ರಿ ಖಾಸಗಿ ರೆಸಾರ್ಟ್ ಸೇರಿದ್ದಾರೆಂಬ ಮಾಹಿತಿ ಸಾರ್ವಜನಿಕ ವಲಯದಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ.
15 ಸದಸ್ಯತ್ವ ಬಲದ PLD. ಬ್ಯಾಂಕ್ ಬಿಜೆಪಿ 5, ಜೆಡಿಎಸ್ 5 ಹಾಗೂ ನಾಮಿನಿ ಸದಸ್ಯ ಸೇರಿ 5 ಮಂದಿ ಕಾಂಗ್ರೆಸ್ ಸದಸ್ಯರು ಇದ್ದಾರೆ.
ಪ್ರಸ್ತುತ ಮಾಹಿತಿ ಅನ್ವಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಸಿಡಿ ಅಶ್ವಥ್ ನಾರಾಯಣ ಗೌಡ, ಬಿಜೆಪಿಯಿಂದ ಟಿವಿ ಲಕ್ಷ್ಮೀನಾರಾಯಣ್, ಜೆಡಿಎಸ್ ನಿಂದ ರಾಜಘಟ್ಟ ಶಿವಣ್ಣ ಅವರ ಹೆಸರುಗಳು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ಅವರು ಯಾವ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆಂಬ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಹೆಂಡತಿಯ ಮೂಗು ಸುಂದರವಾಗಿದೆ ಎಂದು ಕಚ್ಚಿ ತಿಂದ ಗಂಡ..!
ಇನ್ನೇನು ಕೆಲವೇ ಗಂಟೆಗಳಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದ್ದು, ಫಲಿತಾಂಶ ತಿಳಿದು ಬರಲಿದೆ.


