ತಿರುಪತಿ: 300 ವರ್ಷಗಳ ಬಳಿಕ ತಿರುಮಲದ (Tirumala) ಪ್ರಸಿದ್ದ ವೆಂಕಟೇಶ್ವರ ದೇಗುಲಕ್ಕೆ ಮೈಸೂರು (Mysore) ರಾಜವಂಶಸ್ಥೆ ರಾಜಮಾತಾ ಪ್ರಮೋದಾದೇವಿ ಒಡೆಯರ್ (Rajmata Pramoda Devi) ಅವರು 2 ಬೃಹತ್ ಬೆಳ್ಳಿಯ ದೀಪಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.
ಈ ಕುರಿತು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಸಮಿತಿ ಮಾಹಿತಿ ನೀಡಿದೆ.
ತಲಾ 50 ಕೇಜಿ ತೂಕದ 2 ಬೆಳ್ಳಿ ದೀಪ ಗಳನ್ನು ದೇವಸ್ಥಾನದ ರಂಗನಾಯಕಕುಲ ಮಂಟಪದಲ್ಲಿ ಪ್ರಮೋದಾದೇವಿ ಅವರು ಹಸ್ತಾಂತರಿಸಿದರು.
300 ವರ್ಷಗಳ ಹಿಂದೆಯೂ ಅಂದಿನ ಮೈಸೂರು ಮಹಾರಾಜರು ದೇವಸ್ಥಾನಕ್ಕೆ ದೀಪಗಳನ್ನು ದಾನ ಮಾಡಿದ್ದರು ಎಂದು ಟಿಟಿಡಿ ತಿಳಿಸಿದೆ.
