ಮಂಡೌರ್: ನಡು ರಸ್ತೆಯಲ್ಲಿ ಮಹಿಳೆಯೊಂದಿಗೆ ಸೆಕ್ಸ್ ಮಾಡುವ ಮೂಲಕ, ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಮುಜುಗರಕ್ಕೆ ಕಾರಣವಾಗಿದ್ದ ಮಧ್ಯಪ್ರದೇಶದ ಮಂಡೌರ್ ಜಿಲ್ಲೆಯ ಬಿಜೆಪಿ ನಾಯಕ (BJP leader) ಮನೋಹರ್ ಲಾಲ್ ಧಾಕರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶದ ಮಂದ್ಸೌರ್ ಮೂಲಕ ಹಾದುಹೋಗುವ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ -8 ರ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Video Viral) ಆಗಿದೆ
ಇದರಲ್ಲಿ ವ್ಯಕ್ತಿಯೊಬ್ಬ ತನ್ನ ಕಾರನ್ನು ನಿಲ್ಲಿಸಿ ತನ್ನ ಮಹಿಳಾ ಸ್ನೇಹಿತೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವುದು ಕಂಡುಬಂದಿದೆ.
ವಿಡಿಯೋದಲ್ಲಿ ಆಕ್ಷೇಪಾರ್ಹ ಸ್ಥಿತಿಯಲ್ಲಿ ಕಾಣಿಸಿಕೊಂಡ ವ್ಯಕ್ತಿಯನ್ನು ಬಿಜೆಪಿ ನಾಯಕ ಮನೋಹರ್ ಧಕಾಡ್ ಎಂದು ಹೇಳಲಾಗಿದೆ. ಧಕಾಡ್ ಅವರ ಪತ್ನಿ ಮಂದ್ಸೌರ್‌ನ ವಾರ್ಡ್ ಸಂಖ್ಯೆ 8 ರ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದಾರೆ.
ಈ ಘಟನೆಯು ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಅಳವಡಿಸಲಾದ ಹೈ ಸೆಕ್ಯುರಿಟಿ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಆ ನಾಯಕ MP14CC4782 ಸಂಖ್ಯೆಯ ಬಿಳಿ ಬಣ್ಣದ ಬಲೆನೊ ಕಾರಿನಲ್ಲಿ ಪ್ರಯಾಣಿಸುತ್ತಿದ್ದ.
ಈ ವಿಡಿಯೋ ಎಷ್ಟು ಅಶ್ಲೀಲವಾಗಿದೆ ಎಂದರೆ ವಿಡಿಯೋ ತೋರಿಸಲೂ ಸಾಧ್ಯವಿಲ್ಲ ಅಥವಾ ಅದರ ಬಗ್ಗೆ ಹೇಳಲೂ ಸಾಧ್ಯವಿಲ್ಲ.
ವೀಡಿಯೊ ವೈರಲ್ ಆದ ನಂತರ ನಾಯಕ ಕಾಣೆಯಾಗಿದ್ದ, ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿದೆ.
ಸಾರ್ವಜನಿಕ ಸ್ಥಳದಲ್ಲಿ ತನ್ನ ಗೆಳತಿಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಪತ್ತೆಯಾದ ವೀಡಿಯೊ ವೈರಲ್ ಆದ ನಂತರ, ಬಿಜೆಪಿಯ ರಾಜ್ಯ ವಕ್ತಾರ ಯಶ್ಪಾಲ್ ಸಿಂಗ್ ಸಿಸೋಡಿಯಾ ಕೂಡ ಈ ವಿಷಯದ ಬಗ್ಗೆ ಮಾತನಾಡಿ, ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಯಾರಾದರೂ ತಪ್ಪು ಮಾಡಿದ್ದರೆ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರತ್ಲಂ ವಲಯದ ಡಿಐಜಿ ಮನೋಜ್ ಸಿಂಗ್ ಮಾತನಾಡಿ, ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಅದು ಬಹುಶಃ 8 ಪಥದ ರಸ್ತೆಯದ್ದಾಗಿರಬಹುದು. ಈ ರಸ್ತೆಯನ್ನು ಹೊಸದಾಗಿ ನಿರ್ಮಿಸಲಾಗಿದೆ, ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಇಂತಹ ಕೃತ್ಯ ಖಂಡನೀಯ ಎಂದಿದ್ದರು.
ಇದರ ಬೆನ್ನಲ್ಲೇ ಬಿಜೆಪಿ ನಾಯಕ ಮನೋಹರ್ ಲಾಲ್ ಧಕಾಡ್ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.