ವಿಶಾಖಪಟ್ಟಣಂ; 25 ವರ್ಷದ ಯುವಕನಿಗೆ ಇನ್‌ಸ್ಟಾಗ್ರಾಮ್ ಮೂಲಕ (Instagram) 40 ವರ್ಷದ ವಿವಾಹಿತ ಮಹಿಳೆಯೊಂದಿಗೆ ಆದ ಪ್ರೇಮ. ಮದುವೆ ಬಳಿಕ, ಇಬ್ಬರೂ ಜಗಳವಾಡಿಕೊಂಡು ಆತ್ಮಹತ್ಯೆಯಲ್ಲಿ (Suicide) ಅಂತ್ಯಗೊಂಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.
ಯುವಕ ಬೈದನೆಂದು ಬೇಸತ್ತು ಆಂಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ, ಇದರ ಭಯದಿಂದ ಯುವಕ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಶಾಖಪಟ್ಟಣಂನ ವಿವಾಹಿತ ಮಹಿಳೆ ಪದ್ಮಾ (40 ವರ್ಷ) ಅವರಿಗೆ ಪತಿ, ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡುವ ಮಗ ಮತ್ತು ಪದವಿಯ ಅಂತಿಮ ವರ್ಷದಲ್ಲಿರುವ ಮಗಳು ಇದ್ದಾರೆ.
ಪದ್ಮಾ ಅವರು ಶ್ರೀಕಾಳಹಸ್ತಿಯ ಸುರೇಶ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದರಂತೆ. ಆ ಪರಿಚಯ ಪ್ರೀತಿಗೆ ತಿರುಗಿ, ಪದ್ಮಾ ಸುರೇಶ್ ನನ್ನು ಹುಡುಕಿಕೊಂಡು ಶ್ರೀಕಾಳಹಸ್ತಿಗೆ ತೆರಳಿದ್ದಾಳೆ.
ಇನ್ನೂ ಪದ್ಮ ಕಾಣೆಯಾದ ಕುರಿತು ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪತ್ತೆ ಹಚ್ಚಿ ಪದ್ಮಾಳನ್ನು ಮನೆಗೆ ಕರೆತಂದರು. ಆದರೆ ಪದ್ಮ 9 ತಿಂಗಳ ಬಳಿಕ ಸುರೇಶ್‌ನನ್ನು ಭೇಟಿಯಾಗಿ ಮದುವೆಯಾದಳು.
ಮದುವೆಯಾದ ನಂತರ, ದಂಪತಿಗಳು ಕೈಲಾಸಗಿರಿ ಕಾಲೋನಿಯಲ್ಲಿ ಮನೆಯೊಂದರಲ್ಲಿ ಸಂಸಾರ ನಡೆಸುತ್ತಿದ್ದರು ಎನ್ನಲಾಗಿದೆ.
ಮದುವೆಯಾದಾಗಿನಿಂದಲೂ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು.. ತಿಂಡಿ ಮತ್ತು ಊಟವನ್ನು ವ್ಯರ್ಥ ಮಾಡಿದ್ದಕ್ಕಾಗಿ ಸುರೇಶ್ ಪದ್ಮಾಳೊಂದಿಗೆ ಜಗಳವಾಡಿದ್ದನಂತೆ.
ಇದರಿಂದ ಮನನೊಂದ ಪದ್ಮಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇತಾಡುತ್ತಿದ್ದ ಪದ್ಮಾಳನ್ನು ಕೆಳಗೆ ಇಳಿಸಿದ ಸುರೇಶ್ ಭಯಭೀತನಾಗಿ ಯಾರಿಗೂ ಹೇಳದೆ ಮನೆಯಲ್ಲೇ ಇದ್ದನಂತೆ.
ಕೊನೆಗೆ ಸುರೇಶ್ ಕೀಟನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಪ್ರಜ್ಞೆ ತಪ್ಪಿ ಬಿದ್ದಿದ್ದು, ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತೀವ್ರವಾಗಿ ಉಸಿರಾಡುತ್ತಿದ್ದ ಸುರೇಶ್ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ, ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ ಎಂದು ವರದಿಯಾಗಿದೆ.