ದೆಹಲಿ: ಭ್ರಷ್ಟಾಚಾರವನ್ನು ಮಟ್ಟಹಾಕುವ ಪ್ರಯತ್ನವಾಗಿ 500 ರು. ನೋಟುಗಳನ್ನು ಹಿಂಪಡೆಯುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರ ಬಾಬು ನಾಯ್ಡು (Chandrababu Naidu) ಕೇಂದ್ರದ ಮೋದಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಿಜೆಪಿ ಮಿತ್ರ ಪಕ್ಷ ವಾದ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷರೂ ಆಗಿರುವ ಚಂದ್ರ ಬಾಬು ನಾಯ್ಡು, ಕಡಪ ಜಿಲ್ಲೆಯಲ್ಲಿ ನಡೆದ ಟಿಡಿಪಿ ಮಹಾನಾಡು ಪಕ್ಷದ ವಾರ್ಷಿಕ ಮೂರು ದಿನಗಳ ಬೃಹತ್ ಸಮಾವೇಶದ ಉದ್ಘಾಟನಾ ಭಾಷಣದಲ್ಲಿ ಈ ಒತ್ತಾಯ ಮಾಡಿದ್ದಾರೆ.
ಕೇಂದ್ರ ಸರಕಾರವು ದೇಶದಲ್ಲಿ ಡಿಜಿಟಲ್ ಕರೆನ್ಸಿಯನ್ನು ಪರಿಚಯಿಸಬೇಕು ಮತ್ತು 500 ಮತ್ತು 2,000 ರು.ನೋಟುಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.