ತಿರುಪತಿ; ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ತೆರಳಿದ ಭಕ್ತರಿಗೆ ತ್ವರಿತವಾಗಿ ದರ್ಶನ ಭಾಗ್ಯ ದೊರಕಿಸದ TTD ಆಡಳಿತ ಮಂಡಳಿಯ ಅವ್ಯವಸ್ಥೆಯಿಂದಾಗಿ ಭಕ್ತರು ನರಕ ಯಾತನೆ ಅನುಭವಿಸಿದ್ದಾರೆ.
ಗಂಟೆಗಟ್ಟಲೆ ಸರದಿಯಲ್ಲಿ ನಿಂತ ಭಕ್ತರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂದು ಆರೋಪಿಸಿ ಟಿಟಿಡಿ ವಿರುದ್ಧ ಭಕ್ತರು ಪ್ರತಿಭಟನೆ ನಡೆಸಿದರು.
ತಿರುಮಲ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುತ್ತಿರುವ ಸಾಮಾನ್ಯ ಭಕ್ತರಿಗೆ ಬದಲಾಗಿ ವಿಐಪಿ ದರ್ಶನಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.
ಸರದಿಯಲ್ಲಿ ಕಾಯುತ್ತಿರುವ ಮಕ್ಕಳು ಮತ್ತು ಮಹಿಳೆಯರಿಗೆ ಮೂಲಭೂತ ಸೌಲಭ್ಯಗಳನ್ನು ಸಹ ಒದಗಿಸುತ್ತಿಲ್ಲ ಎಂದು ಆರೋಪಿಸಿ ಟಿಟಿಡಿ ವಿರುದ್ಧ ಭಕ್ತರು ಪ್ರತಿಭಟನೆ ನಡೆಸಿದರು.
🚨 #BRNaiduUnfitForTTD
— YSR Congress Party (@YSRCParty) May 30, 2025
తిరుమల క్యూ లైన్లలో గంటల తరబడి నరకయాతన అనుభవిస్తున్న భక్తులు ఆగ్రహం కట్టలు తెంచుకొని “డౌన్ డౌన్ టీటీడీ ఈవో శ్యామలరావు ” “డౌన్ డౌన్ ఛైర్మన్ బీఆర్ నాయుడు” అంటూ నినాదాలు
క్యూ లైన్లలో భక్తులకు సౌకర్యాలు కల్పించడంలో టీటీడీ చైర్మన్ బీఆర్ నాయుడు, ఈవో శ్యామలరావు… pic.twitter.com/RFqEyD7gMv
ಇನ್ನೂ ಈ ಕುರಿತಂತೆ ವೈಎಸ್‌ಆರ್ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ತಿರುಮಲ ಸರತಿ ಸಾಲಿನಲ್ಲಿ ನರಕಯಾತನೆ ಅನುಭವಿಸುತ್ತಿರುವ ಭಕ್ತರು ತಮ್ಮ ಆಕ್ರೋಶವನ್ನು ಹೊರಹಾಕಿದ್ದು, “ಡೌನ್, ಟಿಟಿಡಿ ಇಒ ಶ್ಯಾಮಲಾ ರಾವ್”, “ಡೌನ್, ಚೇರ್ಮನ್ ಬಿ.ಆರ್. ನಾಯ್ಡು” ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ.
ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಮತ್ತು ಇಒ ಶ್ಯಾಮಲಾ ರಾವ್ ಅವರು ಸರತಿ ಸಾಲುಗಳಲ್ಲಿ ಭಕ್ತರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಭಕ್ತರು ಆಹಾರ, ಮಕ್ಕಳಿಗೆ ಹಾಲು ಮತ್ತು ಶುದ್ಧ ನೀರಿಲ್ಲದೆ ಕಷ್ಟಪಡುತ್ತಿದ್ದಾರೆ.
ವಿಐಪಿ ದರ್ಶನಗಳಲ್ಲಿ ನಿರತರಾಗಿರುವ ಇಒ ಶ್ಯಾಮಲಾ ರಾವ್ ಮತ್ತು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರು ಈಗಲಾದರೂ ಸ್ಪಂದಿಸಬೇಕು ಮತ್ತು ಸಾಮಾನ್ಯ ಭಕ್ತರಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಇದೇನಾ ಒಳ್ಳೆ ಸರ್ಕಾರ ಎಂದು ಕುಟುಕಿದೆ.