ದೇವನಹಳ್ಳಿ: ಸಾಂಬಾರ್ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಗಲಾಟೆಯಾಗಿದ್ದು, ಇದರಿಂದ ಮನನೊಂದ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ (Suicide) ದಾರುಣ ಘಟನೆ ತಾಲೂಕಿನ ಸಾವಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು 38 ವರ್ಚದ ನಾಗರತ್ನ ಎಂದು ಗುರುತಿಸಲಾಗಿದೆ.
ಸಾಂಬಾರ್ ವಿಚಾರಕ್ಕೆ ಗಂಡ ಹೆಂಡತಿಯ ನಡುವೆ ಜಗಳವಾಗಿದೆ. ಇದರಿಂದ ಮನನೊಂದ ಮಹಿಳೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮೃತಪಟ್ಟ ನಾಗರತ್ನಮ್ಮ ಕಳೆದ 24 ವರ್ಷಗಳಿಂದೆ ಸೋದರ ಮಾವ ಚಿಕ್ಕಹನುಮಪ್ಪನನ್ನ ಪ್ರೀತಿಸಿ ಮದುವೆಯಾಗಿದ್ದರು.
ಇನ್ನೂ ದೇವನಹಳ್ಳಿಯಲ್ಲಿ ಟೈಲರಿಂಗ್ ಕೆಲಸಕ್ಕೆ ಹೋಗ್ತಿದ್ದ ಈಕೆ ರಾತ್ರಿ ಮನೆಗೆ ಬಂದವಳು ಮನೆಯಲ್ಲಿ ಮಾಡಿದ್ದ ಸಾಂಬರ್ ವಿಚಾರಕ್ಕೆ ಖ್ಯಾತೆ ತೆಗೆದು ಗಂಡನ ಜೊತೆ ಗಲಾಟೆ ಮಾಡಿಕೊಂಡಿದ್ದಳಂತೆ. ಮನೆಯಲ್ಲಿ ಮಾಡಿದ್ದ ಬಸ್ಸಾರು ನನಗೆ ಹಾಗೋದಿಲ್ಲ ಅಂತಾ ಗಂಡನ ಜೊತೆ ಗಲಾಟೆ ಮಾಡಿ ವಿಕೋಪಕ್ಕೆ ಹೋಗಿದ್ದು, ಈಕೆಯ ಶವ ಬಾತ್ ರೂಂನ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಆದ್ರೆ ಇದು ಆತ್ಮಹತ್ಯೆಯಲ್ಲ ಹಣಕಾಸಿನ ವಿಚಾರಕ್ಕೆ ಗಂಡನೇ ಹೆಂಡತಿಯನ್ನ ಕೊಲೆ ಮಾಡಿದ್ದಾನೆ ಅಂತಾ ತವರು ಮನೆಯವರು ಆರೋಪಿಸಿ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇನ್ನೂ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.