ಚಿಕ್ಕಬಳ್ಳಾಪುರ: ಆಟವಾಡುವ ವೇಳೆ ನೀರಿನ ಹೊಂಡದಲ್ಲಿ (Pit) ಬಿದ್ದು ನಾಲ್ಕು ವರ್ಷದ ಮಗು ಸಾವನಪ್ಪಿರುವ (Death) ಘಟನೆ ಗುಡಿಬಂಡೆ ತಾಲೂಕಿನ ಲಗುಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ನಾಲ್ಕು ವರ್ಷದ ಅರ್ಷಿತ್ ರೆಡ್ಡಿ ಎಂದು ಗುರುತಿಸಲಾಗಿದೆ.
ಹಳೇಗುಡಿಬಂಡೆ ಗ್ರಾಮ ವಾಸಿಗಳಾದ ದಂಪತಿಗಳಾದ ನರಸಿಂಹಮೂರ್ತಿ ಹಾಗೂ ಭಾಗ್ಯಮ್ಮ ಅವರ ಒಬ್ಬನೇ ಮಗ ಅರ್ಷಿತ್ ರೆಡ್ಡಿ.
ಲಗುಮೇನಹಳ್ಳಿಯ ಜಮೀನಿನಲ್ಲಿ ಜೋಳ ಬಿತ್ತನೆ ಮಾಡಲು ದಂಪತಿ ಮಗುವಿನೊಂದಿಗೆ ಹೋಗಿದ್ದ ವೇಳೆ ಆಟವಾಡುತ್ತಾ ಹೋಗಿ ನೀರಿನ ಸಂಪಿನಲ್ಲಿ ಮಗು ಬಿದ್ದಿದೆ.
ಹಲವು ಗಂಟೆಗಳ ಕಾಲ ಯಾರೂ ನೋಡಿಕೊಂಡಿಲ್ಲವಾದ್ದರಿಂದ ಉಸಿರುಗಟ್ಟಿ ಮಗು ಸಾವನಪ್ಪಿದೆ.
ಮಗು ಕಾಣದೇ ಇದ್ದಕ್ಕೆ ಎಲ್ಲೆಡೆ ಹುಡುಕಾಡಿದ್ದ ಕುಟುಂಬಸ್ಥರು, ನಂತರ ಜಮೀನಿನ ಬಳಿಯ ನಿರ್ಮಾಣ ಹಂತದ ಮನೆ ಮುಂದೆ ನೀರಿನ ಸಂಪಿನಲ್ಲಿ ನೋಡಿದಾಗ ಮಗುವಿನ ಶವ ಪತ್ತೆಯಾಗಿದೆ.
ತಕ್ಷಣ ಮಗುವನ್ನು ಪೋಷಕರು ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ಹೊತ್ತೋಯ್ದರಾದರೂ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
ದಂಪತಿಗೆ ಮದುವೆಯಾಗಿ 14 ವರ್ಷಗಳ ನಂತರ ಅರ್ಷಿತ್ ರೆಡ್ಡಿ ಹುಟ್ಟಿದ್ದು, ಮಗು ಸಾವನ್ನಪ್ಪಿದ್ದಕ್ಕೆ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.