ಅಹಮದಾಬಾದ್: ಗುಜರಾತ್ನ ಅಹಮದಾಬಾದ್ನಲ್ಲಿ ಇಂದು ಮಧ್ಯಾಹ್ನ ಏರ್ ಇಂಡಿಯಾ (AI171) ವಿಮಾನ ಪತನವಾಗಿತ್ತು. ಈ ದುರಂತದಲ್ಲಿ ವಿಮಾನದಲ್ಲಿದ್ದ 241 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅಹಮದಾಬಾದ್ನಿಂದ ಇಂದು ಮಧ್ಯಾಹ್ನ 3.38ಕ್ಕೆ ಹೊರಟ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನದಲ್ಲಿ 242 ಪ್ರಯಾಣಿಕರು ಮತ್ತು ಸಿಬ್ಬಂದಿ ಪ್ರಯಾಣಿಸುತ್ತಿದ್ದರು.
The full sequence from take-off to crash—final moments of Air India 171 captured on CCTV. Clear catastrophic lack of lift just seconds after liftoff. pic.twitter.com/l6UAzZ3wtJ
— Shiv Aroor (@ShivAroor) June 12, 2025
ಈ ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, 1 ಕೆನಡಾ ಪ್ರಜೆ ಮತ್ತು 7 ಪೋರ್ಚುಗೀಸ್ ಪ್ರಜೆಗಳು ಇದ್ದರು.
ಏರ್ ಇಂಡಿಯಾ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ 40 ವಿಶ್ವಶ್ಕುಮಾರ್ ರಮೇಶ್ ವಿಮಾನದಿಂದ ಹಾರಿ ಪಾರಾಗಿದ್ದಾರೆಂದು ಇಂಡಿಯಾ ಟುಡೇ ವಿಡಿಯೋ ಮೂಲಕ ವರದಿ ಮಾಡಿದೆ.
Ramesh Viswashkumar, The sole survivor of the Air India crash escaped by jumping from the plane. He was on seat number 11A. #AirIndia #AhmedabadNews #Gujarat #PlaneCrash #ITReel pic.twitter.com/NsMBeZOkbX
— IndiaToday (@IndiaToday) June 12, 2025
ಅವರು ಸೀಟು ಸಂಖ್ಯೆ 11A ನಲ್ಲಿದ್ದರು ಎನ್ನಲಾಗಿದೆ.
ಇವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
NEW: Viswashkumar Ramesh, a British national, is the only known survivor of Air India Flight 171.
— BNO News Live (@BNODesk) June 12, 2025
He's quoted as saying: "30 seconds after takeoff there was a loud noise and then the plane crashed. It all happened so quickly. When I got up there were bodies all around me" pic.twitter.com/cwq0xPKI7E
ಇನ್ನೂ ವಿಮಾನ ಪತನದ ಬೆನ್ನಲ್ಲೇ ಏರ್ ಇಂಡಿಯಾ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೊಶದ ಮಾತುಗಳು ವ್ಯಕ್ತವಾಗುತ್ತಿದೆ.