ಹರಿತಲೇಖನಿ ದಿನಕ್ಕೊಂದು ಕಥೆ: ಸಾಮಾನ್ಯ ಫೋಟೋಗ್ರಾಫರ್..!

Harithalekhani: Ordinary photographer

Harithalekhani: ನೀವು ಬ್ರಾಂಡನ್ ಸ್ಟಾಂಟನ್ ಬಗ್ಗೆ ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ, ತೀರಾ ಸಾಮಾನ್ಯವೆನಿಸುವ ಕೆಲಸಗಳಿಂದಲೂ ಹೇಗೆ ಜಗತ್ತಿನ ಗಮನವನ್ನು ಸೆಳೆಯಬಹುದು ಎಂಬುದಕ್ಕೆ ಆತನೊಬ್ಬ ನಿದರ್ಶನವಾಗಿ ನನಗೆ ಕಾಣುತ್ತಾನೆ.

ಮೂಲತಃ ಅಮೆರಿಕದ ಅಟ್ಲಾಂಟಾದವನಾದ ಸ್ಟಾಂಟನ್, ಹೆಚ್ಚು ಓದಿದವನಲ್ಲ. ಇತಿಹಾಸ ವಿಷಯದಲ್ಲಿ ಸಾಮಾನ್ಯ ಅಂಕ ಗಳಿಸಿ ಪದವೀಧರನಾದವ. ಕಮಿಷನ್ ಏಜೆಂಟ್ ಆಗಿ ಕೆಲಸ ಮಾಡುವಾಗ, ತಂದೆಗೆ ಕಾಡಿ ಬೇಡಿ ಒಂದು ಸಾಮಾನ್ಯ ಕೆಮರಾ ಖರೀದಿಸಿದ. ಎಲ್ಲೆಂದರಲ್ಲಿ ಕಂಡಕಂಡವರ ಫೋಟೋ ತೆಗೆಯುವುದು ಅವನ ಹವ್ಯಾಸ.

ಒಮ್ಮೆ ತಡವಾಗಿ ಬಂದುದಕೆ ಕೋಪಗೊಂಡ ಆತನ ಬಾಸ್, ಸ್ಟಾಂಟನ್ ನನ್ನು ತರಾಟೆಗೆ ತೆಗೆದುಕೊಂಡ. ಅದಕ್ಕೆ ಕಾರಣ ಕೇಳಿದ್ದಕ್ಕೆ, ‘ಆಫೀಸಿನಿಂದ ಬರುವಾಗ ಕೆಲವು ವ್ಯಕ್ತಿಗಳ ಫೋಟೋ ತೆಗೆಯುತ್ತಿದ್ದೆ. ಅದಕ್ಕೆ ತಡವಾಯಿತು’ ಎಂದು ಹೇಳಿದ. ಅಷ್ಟಕ್ಕೇ ವ್ಯಗ್ರನಾದ ಆತನ ಬಾಸ್, ‘ಒಂದೋ ಕೆಲಸ ಮಾಡು, ಇಲ್ಲವೇ ಈ ಕೆಲಸ ಬಿಟ್ಟು ಫೋಟೋ ತೆಗೆ, ಹೋಗು’ ಎಂದು ಬಿಟ್ಟ.

ಸ್ಟಾಂಟನ್ ಎರಡನೇಯದನ್ನೇ ಆಯ್ಕೆ ಮಾಡಿಕೊಂಡ. ಪೂರ್ಣಾವಧಿ ಫೋಟೋಗ್ರಾಫರ್ ಆದ. ಇನ್ನು ಮುಂದೆ ಫೋಟೋ ತೆಗೆಯುವುದನ್ನೇ ಕಾಯಕ ಮಾಡಿಕೊಳ್ಳುತ್ತೇನೆ ಎಂದು ನಿರ್ಧರಿಸಿದ. ನ್ಯೂಯಾರ್ಕ್ ನಗರದ ಹಾದಿಬೀದಿಯಲ್ಲಿ ಹೋಗುವವರ, ಬರುವವರ, ಕುಂತವರ, ಮಲಗಿದವರ.. ಹೀಗೆ ಎಲ್ಲರ ಫೋಟೋಗಳನ್ನು ತೆಗೆದು, ಅವರ ಕಿರು ಸಂದರ್ಶನವನ್ನು ಸಂಗ್ರಹಿಸುತ್ತಾ ಹೋದ. ಈ ರೀತಿ ಸುಮಾರು ಹತ್ತು ಸಾವಿರ ಜನರ ಭಾವಚಿತ್ರ ಫೋಟೋ ತೆಗೆದ, ಸಂದರ್ಶನ ಮಾಡಿದ.

ಅನಂತರ ಸ್ನೇಹಿತರ ಸಹಾಯದಿಂದ ಒಂದು ಫೋಟೋ ಪ್ರದರ್ಶನ ಏರ್ಪಡಿಸಿದ. ಅಲ್ಲಿ ತಾನು ತೆಗೆದ ಹತ್ತು ಸಾವಿರ ಜನರ ಫೋಟೋಗಳನ್ನು ಪ್ರದರ್ಶಿಸಿದ. ಆತನ ಕೃತಿ ಅಪಾರ ಜನಮನ್ನಣೆಗೆ ಪಾತ್ರವಾಯಿತು. ಇದಕ್ಕಾಗಿ Humans of New York ಎಂಬ ಫೇಸ್ ಬುಕ್ ಪೇಜ್ ನ್ನು ತೆರೆದ. ಅದರಿಂದ ಆತನಿಗೆ ಜಾಗತಿಕ ಪ್ರಚಾರ ಲಭಿಸಿತು. ನಂತರ ಅದೇ ಹೆಸರಿನಲ್ಲಿ (Humans of New York) ಪುಸ್ತಕವನ್ನೂ ಪ್ರಕಟಿಸಿದ. ಈ ಪುಸ್ತಕ ಮಾರುಕಟ್ಟೆಗೆ ಬರುವುದಕ್ಕಿಂತ ಮುನ್ನವೇ ಮೂವತ್ತು ಸಾವಿರ ಪ್ರತಿಗಳಿಗೆ ಬೇಡಿಕೆ ಬಂದಿತು. 2013 ರಲ್ಲಿ ‘ನ್ಯೂಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲರ್ಸ್’ ಪುಸ್ತಕಗಳ ಪಟ್ಟಿಯಲ್ಲಿ ಈ ಕೃತಿ ಸತತ ಇಪ್ಪತ್ತಾರು ವಾರಗಳ ಕಾಲ ಮೊದಲ ಸ್ಥಾನದಲ್ಲಿತ್ತು.

ಅದೇ ವರ್ಷ ಪ್ರತಿಷ್ಠಿತ ‘ಟೈಮ್ಸ್’ ಮ್ಯಾಗಜಿನ್, “30 Under 30 People Changing The World” ಸರಣಿಯಲ್ಲಿ ಸ್ಟಾಂಟನ್ ನನ್ನೂ ಸೇರಿಸಿತು. ಇದರಿಂದ ಆತನಿಗೆ ಮತ್ತು ಅವನ ಕೃತಿಗೆ ಮತ್ತಷ್ಟು ಮಾನ್ಯತೆ ಸಿಕ್ಕಿತು. ಅದೇ ವರ್ಷ ವಿಶ್ವಸಂಸ್ಥೆ ಸ್ಟಾಂಟನ್ ನನ್ನು ಐವತ್ತು ದಿನಗಳ ಮಟ್ಟಿಗೆ ಮಧ್ಯ ಪ್ರಾಚ್ಯದ ಹತ್ತು ದೇಶಗಳಿಗೆ ಫೋಟೋ ತೆಗೆಯಲೆಂದೇ ಕಳುಹಿಸಿಕೊಟ್ಟಿತು. ಈ ಪ್ರವಾಸದಲ್ಲಿ ಕೊನೆಯಲ್ಲಿ, ತಾನು ಸಂಗ್ರಹಿಸಿದ 23 ಲಕ್ಷ ಡಾಲರ್ ಗಳನ್ನು ಆತ ಪಾಕಿಸ್ತಾನದ ಜೀತದಾಳುಗಳ ಕ್ಷೇಮಾಭಿವೃದ್ಧಿಗೆ ದಾನವಾಗಿ ನೀಡಿದ.

2015 ರಲ್ಲಿ ಸ್ಟಾಂಟನ್ ಗೆ ಒಂದು ಅಚ್ಚರಿ ಕಾದಿತ್ತು. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ತಮ್ಮನ್ನು ಸಂದರ್ಶಿಸಿ, ಫೋಟೋ ತೆಗೆಯುವಂತೆ ಓವಲ್ ಆಫೀಸಿಗೆ ಸ್ಟಾಂಟನ್ ನನ್ನು ಆಮಂತ್ರಿಸಿದ್ದರು..

ಇಂದು ಸ್ಟಾಂಟನ್ ಕೆಮರಾ ಹಿಡಿದರೆ ಯಾರಾದರೂ ಪೋಸು ಕೊಡುತ್ತಾರೆ, ಜೋಳಿಗೆ ಹಿಡಿದರೆ ಕೈ ತುಂಬಾ ಹಣ ಕೊಡುತ್ತಾರೆ. ಆತ ಅದನ್ನು ಒಳ್ಳೆಯ ಉದ್ದೇಶಗಳಿಗೆ ದಾನ ಮಾಡುತ್ತಾನೆ. ಒಬ್ಬ ಸಾಮಾನ್ಯ ಬೀದಿ ಫೋಟೋಗ್ರಾಫರ್ ಇಂದು ‘ಏಕ ವ್ಯಕ್ತಿ ಪರೋಪಕಾರಿ’ಯಾಗಿದ್ದಾನೆ. ಈತನನ್ನು Emperor Of Empathy (ಪರಾನುಭೂತಿಯ ಚಕ್ರವರ್ತಿ) ಎಂದು ಮಾಧ್ಯಮಗಳು ಸಂಬೋಧಿಸುತ್ತವೆ.

ಅಗಾಧ ಸಾಧನೆ ಮಾಡಲು ಅಸಾಮಾನ್ಯ ಕೆಲಸಗಳನ್ನೇ ಮಾಡಬೇಕಿಲ್ಲ.

ಕೃಪೆ: ಖ್ಯಾತ ಸಂಪಾದಕರಾದ ವಿಶ್ವೇಶ್ವರ ಭಟ್, ‘ಫೇಸ್‌ಬುಕ್‌ ಪೇಜ್ ಪುಟ’

ರಾಜಕೀಯ

ಮುನೇಗೌಡರ ಮನೆಗೆ JDS ದೊಡ್ಡಬಳ್ಳಾಪುರ ಅಧ್ಯಕ್ಷ ಹರೀಶ್ ಗೌಡ ಭೇಟಿ..!

ಮುನೇಗೌಡರ ಮನೆಗೆ JDS ದೊಡ್ಡಬಳ್ಳಾಪುರ ಅಧ್ಯಕ್ಷ ಹರೀಶ್ ಗೌಡ ಭೇಟಿ..!

ಜೆಡಿಎಸ್ (JDS) ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಹರೀಶ್ ಗೌಡ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಬಿ.ಮುನೇಗೌಡ ಅವರ ಸ್ವ ಗೃಹಕ್ಕೆ ಭೇಟಿ ನೀಡಿದ್ದಾರೆ.

[ccc_my_favorite_select_button post_id="121727"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ (IPL) ಪಂದ್ಯದ ವೇಳೆ ವ್ಯಾಪಿಂಗ್ ಮಾಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಿಯಾನ್ ಪರಾಗ್‌ಗೆ (Riyan Parag) ಪಂದ್ಯ ಶುಲ್ಕದ 25% ದಂಡ ವಿಧಿಸಿದೆ, ರಾಜಸ್ಥಾನ ರಾಯಲ್ಸ್ ನಾಯಕ ಕಠಿಣ

[ccc_my_favorite_select_button post_id="121572"]
ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ಜಿಂಕೆಬಚ್ಚಹಳ್ಳಿ ಸಮೀಪ ಶನಿವಾರ ಬೆಂಕಿಗೆ ಆಹುತಿಯಾಗಿದ್ದ ಕಾರಿನಲ್ಲಿ (Car) ಅನುಮಾನಸ್ಪದ ರೀತಿಯಲ್ಲಿ ಸುಟ್ಟು ಹೋಗಿದ್ದ ಮಹಿಳೆಯ (Woman) ಅಸ್ಥಿಪಂಜರ ಪತ್ತೆಯಾಗಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

[ccc_my_favorite_select_button post_id="121693"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]