ಆದಿಲಾಬಾದ್: ಶರ್ಟ್ ಒಳಗೆ ಜಾಕೆಟ್ ಧರಿಸಿ ಬರೋಬ್ಬರಿ 24 ಬಾಟಲಿ ಮದ್ಯದ ಬಾಟಲ್‌ಗಳನ್ನು (Alcohol Bottles) ಸಾಗಿಸುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಅಧಿಕಾರಿಗಳು ಹಿಡಿದಿದ್ದಾರೆ.
ಮಹಾರಾಷ್ಟ್ರದಿಂದ ತೆಲಂಗಾಣಕ್ಕೆ ಅಕ್ರಮವಾಗಿ ದೇಶಿ ನಿರ್ಮಿತ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಈ ಆದಿಲಾಬಾದ್ ಜಿಲ್ಲೆಯ ಭೋರಾಜ್ ಮಂಡಲದ ಪೆಂಡಲ್ವಾಡಾದ ಕರ್ಡೆ ಅಶೋಕ್ ಎಂದು ಗುರುತಿಸಲಾಗಿದೆ
ಶರ್ಟ್ ಒಳಗೆ ಜಾಕೆಟ್ ಧರಿಸಿ, ಜೇಬುಗಳನ್ನು ಹೊಲಿಸಿ, ಮುಚ್ಚಿದ 24 ದೇಶಿ ನಿರ್ಮಿತ ಮದ್ಯದ ಬಾಟಲಿಗಳನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಅಬಕಾರಿ ಅಧಿಕಾರಿಗಳು ಹಿಡಿದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						