ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಚುರುಕಾಗಿದ್ದು, ಹಳ್ಳ-ಕೊಳ್ಳ ನದಿಗಳು ಸೇರಿ ಜಲಮೂಲಗಳು ಭರ್ತಿ ಆಗುತ್ತಿವೆ. ಇದರ ಬೆನ್ನಲ್ಲೇ ಪ್ರತ್ಯೇಕ ಪ್ರಕರಣಗಳಲ್ಲಿ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ನೀರಲ್ಲಿ ಮುಳುಗಿ 6 ಮಂದಿ ಮೃತಪಟ್ಟಿದ್ದಾರೆ (Died).
ದೇವನಹಳ್ಳಿ: ಕೃಷಿ ಹೊಂಡದಲ್ಲಿ ತಾಯಿ ಮಗಳ ಮೃತದೇಹಗಳು ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಇಂಡರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 30 ವರ್ಷದ ಮಾಲಾ ಹಾಗೂ 8 ವರ್ಷದ ಅನುಶ್ರೀ ಮೃತರು.
ಮೃತ ಮಾಲಾ ಜಮೀನು ಭಾಗ ಮಾಡಿಕೊಳ್ಳುವಂತೆ ಗಂಡನಿಗೆ ಒತ್ತಡ ಹಾಕಿದ್ದಳಂತೆ ಹಾಗಾಗಿ ಕುಟುಂಬಸ್ಥರಲ್ಲಿ ಜಮೀನು ವಿಚಾರದಲ್ಲಿ ಮನಸ್ತಾಪಗಳು ಮೂಡಿದ್ದವು. ಇದೇ ವಿಚಾರದಲ್ಲಿ ಗಂಡ ನಾಗರಾಜ್ ಅತ್ತೆ ಮೈದುನ ಮುನಿರಾಜು, ಅತ್ತೆ ಅಂಜಿನಮ್ಮ ಸೇರಿ ನಾದಿನಿ ವಿರುದ್ದ ಕೊಲೆ ಆರೋಪ ಕೇಳಿಬಂದಿದೆ.
ಮೃತ ಮಾಲಾ ತಂದೆ-ತಾಯಿ ಸಂಬಂಧಿಕರು ಗಂಡನ ಮನೆಯವರ ಜೊತೆ ಗಲಾಟೆ ನಡೆಸಿ ಮನೆಯ ಮುಂದೆಯೇ ಮೃತ ದೇಹ ಅಂತ್ಯಕ್ರಿಯೆ ಮಾಡಿ ಮಣ್ಣು ಮಾಡಲು ಮುಂದಾಗಿದ್ದಾರೆ.
ಈ ವೇಳೆ ಗಲಾಟೆ ನಡೆದು ಸ್ಥಳಕ್ಕೆ ವಿಶ್ವನಾಥಪುರ ಪೊಲೀಸರು ಆಗಮಿಸಿ ಕ್ರಮ ಕೈಗೊಂಡಿದ್ದಾರೆ.
ಹಳ್ಳದಲ್ಲಿ ಬಿದ್ದು ಮಾವ-ಅಳಿಯ ಸಾವು
ಬಾಗಲಕೋಟೆ: ಹಳ್ಳದಲ್ಲಿ ಮೀನು ಹಿಡಿಯಲು ಹೋದ ಬಿದ್ದು ಮಾವ- ಅಳಿ ಯ ನೀರು ಪಾಲಾದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲೂಕಿನ ಚಿಕನಾಳ ಗ್ರಾಮದಲ್ಲಿ ಜರುಗಿದೆ.
ಕೊಪ್ಪಳ ಜಿಲ್ಲೆ ಮೂಲದ ಬಳುಟಗಿಯ ಮಂಜುನಾಥ ಬಾಲಪ್ಪ ಬಂಡಿ (13 ವರ್ಷ) ಅಳಿಯ ಹಾಗೂ ಚಿಕ್ಕ ನಾಳ ಗ್ರಾಮದ ಷಣ್ಮುಖಪ್ಪ ತಪ್ಪನ್ನ ವರ್ (30 ವರ್ಷ) ಮಾವ ಮೃತ ದುರ್ದೈವಿಗಳು.
ಮಂಜುನಾಥ ಮೀನು ಹಿಡಿಯಲು ಹೋಗಿ ಹಳ್ಳದಲ್ಲಿ ಜಾರಿ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಹೋಗಿ ಷಣ್ಮುಖಪ್ಪ ತೆರಳಿದ್ದು, ಇಬ್ಬರು ನೀರು ಪಾಲಾಗಿದ್ದಾರೆ.
ಈ ಕುರಿತು ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕರ ದುರ್ಮರಣ
ಶಿವಮೊಗ್ಗ; ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಶಿವಮೊಗ್ಗ ತಾಲೂಕಿನ ಯಡವಾಲ ಗ್ರಾಮದಲ್ಲಿ ನಡೆದಿದೆ.
ಗೌತಮ್ ನಾಯ್ಕ (22 ವರ್ಷ) ಮತ್ತು ಚಿರಂಜೀವಿ (22 ವರ್ಷ) ಮೃತರು.
ಗೌತಮ್ ನಾಯ್ಕ ಯಡವಾಲ ಗ್ರಾಮದ ಕುಮಾರನಾಯ್ ಎಂಬುವರ ಪುತ್ರನಾಗಿದ್ದು, ಚಿರಂಜೀವಿ ಶಿವಮೊಗ್ಗದ ಮಂದಿ ಶನಿವಾರ ರಾತ್ರಿ ಗೌತಮ್ ಜಮೀನಿಗೆ ಹೋಗಿ ಪಾರ್ಟಿ ಮಾಡಿದ್ದಾರೆ.
ಪಾರ್ಟಿ ಮುಗಿದ ಮೇಲೆ ಗೌತಮ್ ನಾಯ್ಕ ಅವರ ತೋಟದ ಪಕ್ಕದಲ್ಲಿರುವ ಕೃಷಿ ಹೊಂಡದಲ್ಲಿ ಈಜಲು ಹೋದಾಗ ಈ ದುರ್ಘಟನೆ ನಡೆದಿದೆ.
ಕುಂಸಿ ಪೊಲೀಸರು ಮೃತರ ಸ್ನೇಹಿತರನ್ನು ವಿಚಾರಣೆ ಮಾಡಿದ್ದಾರೆ.