ವಾಷಿಂಗ್ಟನ್: ಭಾರತದಲ್ಲಿ (India) ಅತ್ಯಾಚಾರ, ಅಪರಾಧ ಪ್ರಕರಣ ಹೆಚ್ಚು ಎಂಬಂತೆ ತನ್ನ ನಾಗರೀಕರಿಗೆ ಅಮೇರಿಕ (America) ಎಚ್ಚರಿಕೆ ನೀಡಿರುವುದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು ಅಮೇರಿಕಾ ತನ್ನ ಪ್ರಜೆಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಭಾರತದಲ್ಲಿ ಅಪರಾಧ ಮತ್ತು ಭಯೋತ್ಪಾದನೆ ಹೆಚ್ಚುತ್ತಿರುವ ಕಾರಣ ಹೆಚ್ಚಿನ ಎಚ್ಚರಿಕೆ ವಹಿಸಿ ಎಂದಿದೆ.
ಕೆಲವು ಪ್ರದೇಶಗಳಲ್ಲಿ ಅಪಾಯ ಹೆಚ್ಚಾಗಿದೆ. ಭಾರತದಲ್ಲಿ ಹಿಂಸಾತ್ಮಕ ಅಪರಾಧ ಮತ್ತು ಭಯೋತ್ಪಾದನೆ ಸಂಭವಿಸುತ್ತದೆ.
ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಅಪರಾಧಗಳಲ್ಲಿ ಅತ್ಯಾಚಾರವೂ ಒಂದಾಗಿದೆ. ಲೈಂಗಿಕ ದೌರ್ಜನ್ಯ ಸೇರಿದಂತೆ ಹಿಂಸಾತ್ಮಕ ಅಪರಾಧಗಳು ಪ್ರವಾಸಿ ತಾಣಗಳು ಮತ್ತು ಇತರ ಸ್ಥಳಗಳಲ್ಲಿ ನಡೆಯುತ್ತವೆ.
ಭಯೋತ್ಪಾದಕರು ಸ್ವಲ್ಪ ಅಥವಾ ಯಾವುದೇ ಎಚ್ಚರಿಕೆ ನೀಡದೆ ದಾಳಿ ಮಾಡಬಹುದು. ಅವರು ಪ್ರವಾಸಿಗರನ್ನು ಗುರಿಯಾಗಿಸಿಕೊಳ್ಳುತ್ತಾರೆ
ಪ್ರವಾಸಿ ಸ್ಥಳಗಳು, ಸಾರಿಗೆ ಕೇಂದ್ರಗಳು, ಮಾರುಕಟ್ಟೆಗಳು, ಶಾಪಿಂಗ್ ಮಾಲ್‌ಗಳು, ಸರ್ಕಾರದ ಕೇಂದ್ರಗಳ ಮೇಲೆ ದಾಳಿ ಸಾಧ್ಯತೆ ಇದೆ ಎಂದು ಅಮೇರಿಕಾ ರಾಯಭಾರ ಕಚೇರಿ ಪೋಸ್ಟ್ ಮಾಡಿದೆ.

ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.