ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ಇಂದು (ಮಂಗಳವಾರ) ಬೆಳ್ಳಂಬೆಳಗ್ಗೆ ಭ್ರಷ್ಟಾಚಾರದ ಆರೋಪದ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ (Lokayukta Raids).
ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಜ್ಯದ ಏಳು ಜಿಲ್ಲೆಗಳಲ್ಲಿ ಎಂಟು ಮಂದಿ ಸರ್ಕಾರಿ ಅಧಿಕಾರಿಗಳ ನಿವಾಸ ಕಚೇರಿಗಳ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ವಿವಿಧ ಇಲಾಖೆ ಅಧಿಕಾರಿಗಳ ನಿವಾಸಗಳ ಮೇಲೆ ರೇಡ್ ನಡೆದಿದ್ದು ಬ್ಯಾಂಕ್ ವ್ಯವಹಾರ ಹಾಗೂ ಹಣ ವರ್ಗಾವಣೆ ಕುರಿತು ಸಮಗ್ರ ಪರಿಶೀಲನೆ ನಡೆಸಲಾಗುತ್ತಿದೆ.
ಪ್ರಮುಖವಾಗಿ ಬೆಂಗಳೂರಲ್ಲಿ ಬಿಬಿಎಂಪಿ ಎಇಇ ಪ್ರಕಾಶ್ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗಿದ್ದು, ಒಟ್ಟು ಐದು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಗೋವಿಂದರಾಜನಗರ ವಿಭಾಗದ ಎಈ ಪ್ರಕಾಶ್ ಅವರ ನಾಗರಬಾವಿ, ಗೋವಿಂದರಾಜನಗರ, ಯಲಹಂಕ ಭಾಗದಲ್ಲಿ ದಾಳಿ ನಡೆಸಲಾಗಿದ್ದು, ಪರಿಶೀಲನೆ ನಡೆಸಲಾಗ್ತಿದೆ.
ಅಲ್ಲದೆ ರಾಜ್ಯದ ಏಳು ಮಂದಿ ಸರ್ಕಾರಿ ಅಧಿಕಾರಿಗಳ ಮೇಲೆ 8 ಕಡೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ.
ವರದಿ ಲತಾಮಣಿ, ಅಕೌಂಟ್ಸ್ ಆಫೀಆರ್, ಟೌನ್ ಮುನಿಸಿಪಾಲಿಟಿ, ಚಿಕ್ಕಮಗಳೂರು, ಕೆ.ಜಿ.ಅಮರನಾಥ್, ಚೀಫ್ ಆಫೀಸರ್, ಟೌನ್ ಮುನಿಸಿಪಾಲಿಟಿ, ಆನೇಕಲ್, ಧೃವರಾಜ್, ಗದಗ ಟೌನ್ ಪೊಲೀಸ್ ಇನ್ಸ್ಪೆಕ್ಟರ್, ಅಶೋಕ್ ವಲಸಂದ್, ಎಂಜಿನಿಯರ್, ಮಲಪ್ರಭಾ ಪ್ರಾಜೆಕ್ಟ್ ಧಾರವಾಡ, ಮಲ್ಲಿಕಾರ್ಜುನ್ ಅಲಿಪುರ್, ನಿವೃತ್ತ ಎಂಜಿನಿಯರ್, ಆರ್.ಡಿ.ಪಿ.ಆರ್ ಕಲ್ಬುರ್ಗಿ, ರಾಮಚಂದ್ರ ಪಿಡಿಒ ಕಲ್ಬುರ್ಗಿ, ಬೆಂಗಳೂರು.