Harithalekhani; ಒಮ್ಮೆ ಪ್ರಾಣಿಗಳಿಗೆ ಮತ್ತು ಪಕ್ಷಿಗಳಿಗೆ ಯುದ್ಧವಾಯಿತು. ಯಾರಿಗೆ ಜಯವಾಗುತ್ತದೆ ಎಂದು ತಿಳಿಯಲಿಲ್ಲ. ಆಗ ಬಾವಲಿ ಎರಡೂ ಕಡೆ ಸೇರದೆ ತಟಸ್ಥವಾಗಿತ್ತು.
ಸ್ವಲ್ಪ ಹೊತ್ತಿನಲ್ಲಿ ಪ್ರಾಣಿಗಳ ಕೈ ಮೇಲಾಯಿತು. ಆಗ ಬಾವಲಿಯು ಮರಿ ಹಾಕಿ ಹಾಲುಣಿಸುವುದರಿಂದ ತಾನು ಪ್ರಾಣಿ ಎಂದು ಹೇಳಿ ಪ್ರಾಣಿಗಳೊಂದಿಗೆ ಸೇರಿ ಬಿರುಸಿನಿಂದ ಹೋರಾಡಿತು.
ಹೊತ್ತು ಕಳೆದಂತೆ ಪಕ್ಷಿಗಳ ತಂಡ ಮುಂದೆ ಬಂತು. ಆಗ ಬಾವಲಿ ತಾನು ರೆಕ್ಕೆಗಳನ್ನು ಉಪಯೋಗಿಸಿ ಹಾರುವುದರಿಂದ ತಾನು ಒಂದು ಪಕ್ಷಿಯೇ ಎಂದು ವಾದಿಸಿ ಗೆದ್ದ ಪಕ್ಷಿಗಳೊಂದಿಗೆ ಸೇರಿಕೊಂಡಿತು.
ಸ್ವಲ್ಪ ಸಮಯದ ನಂತರ ಸಮಾಧಾನ ಒಡಂಬಡಿಕೆ ಜರುಗಿದಾಗ ಎರಡೂ ತಂಡಗಳು ಬಾವಲಿಯನ್ನು ಧಿಕ್ಕರಿಸಿದವು. ಈ ಕಾರಣ ಬಾವಲಿ ಸದ್ದಿಲ್ಲದೆ ಹೊರ ಹೋಗಬೇಕಾಯಿತು.
ಅಂದಿನಿಂದ ಬಾವಲಿ ಕತ್ತಲ್ಲಿನಲ್ಲಿಯೇ ವಾಸ ಮಾಡುತ್ತದೆ. ಹಗಲು ಹೊತ್ತಿನಲ್ಲಿ ಮುಖ ತೋರಿಸಲು ನಾಚಿಕೆಯಾಗಿ ಕತ್ತಲಾದ ನಂತರವೇ ಹೊರಗೆ ಬರುತ್ತದೆ.
ಕೃಪೆ: ಕೆ ನಿರುಪಮಾ. (ಸಾಮಾಜಿಕ ಜಾಲತಾಣ)