ದೊಡ್ಡಬಳ್ಳಾಪುರ: ಕೃಷ್ಣಜನ್ಮಾಷ್ಟಮಿ (Krishnajanmashtami) ಅಂಗವಾಗಿ ಆ.16 ರಂದು ಗಾಂಧಿ ನಗರದ ಖಿಲ್ಲೇ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್‍ಯಕ್ರಮಗಳನ್ನು ಏರ್ಪಡಿಸಲಾಗಿದೆ.
ದೇವಾಲಯದಲ್ಲಿ ಬೆಳಿಗ್ಗೆ 9ಕ್ಕೆ ಅಭಿಷೇಕ, ವಿಶೇಷ ಅಲಂಕಾರ, 10.30ಕ್ಕೆ ಭಜನೆ, ಸಂಜೆ 4.30ಕ್ಕೆ ಸಂಗೀತ ಕಾರ್‍ಯಕ್ರಮ, 6 ಗಂಟೆಗೆ ಬಾಲ ಕೃಷ್ಣ ಲೀಲ ಅಂಗವಾಗಿ ಮಕ್ಕಳ ಕೃಷ್ಣ ರಾಧೆ ವೇಷಭೂಷಣ ಪ್ರದರ್ಶನ, 7 ಗಂಟೆ ಭರತ ನಾಟ್ಯ ಮೊದಲಾದ ಕಾರ್‍ಯಕ್ರಮಗಳಿವೆ.
ನಗರದ ಕೆರೆಬಾಗಿಲು ರಸ್ತೆಯಲ್ಲಿನ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಕೃಷ್ಣಜನ್ಮಾಷ್ಟಮಿ ಅಂಗವಾಗಿ ಆ.16 ರಂದು ವಿಶೇಷ ತೊಟ್ಟಿಲು ಅಲಂಕಾರ ಪೂಜಾ ಕಾರ್‍ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆ.16 ರಂದು ಬೆಳಿಗ್ಗೆ 10.30ಕ್ಕೆ ಕೃಷ್ಣಜನ್ಮಾಷ್ಟಮಿ ಕಾರ್‍ಯಕ್ರಮ ನಡೆಯಲಿದೆ.