ದೊಡ್ಡಬಳ್ಳಾಪುರ: ಬೆಸ್ಕಾಂ ಗ್ರಾಮೀಣ ಉಪವಿಭಾಗ ವ್ಯಾಪ್ತಿಗೆ ಒಳಪಡುವ ಕನಸವಾಡಿ ವಿದ್ಯುತ್ (Power) ಉಪಕೇಂದ್ರ ವ್ಯಾಪ್ತಿಯಲ್ಲಿ ನಾಳೆ ಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಬೆಸ್ಕಾಂ ಗ್ರಾಮಾಂತರ ವಿಭಾದ ಎಇಇ ಮಂಜುನಾಥ್ ಪ್ರಕಟಣೆ ನೀಡಿದ್ದು, ನಾಳೆ (ಆ.18) ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕನಸವಾಡಿ ಉಪ ಕೇಂದ್ರ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ ಎಚ್.ಟಿ. ಮತ್ತು ಎಲ್.ಟಿ. ಗ್ರಾಹಕರು ಸೇರಿದಂತೆ ಸಾರ್ವಜನಿಕರು ನಿರ್ವಹಣಾ ಕಾರ್ಯಕ್ಕೆ ಸಹಕರಿಸುವಂತೆ ಕೋರಿದ್ದಾರೆ.
ವಿದ್ಯುತ್ ಅಡಚಣೆಯಾಗುವ ಗ್ರಾಮಗಳು: ಕನಸವಾಡಿ, ಮದುರೆ, ಕಾಡನೂರು, ನಾಗೇನಹಳ್ಳಿ, ಕಾಡನೂರುಪಾಳ್ಯ, ಚನ್ನದೇವಿ ಅಗ್ರಹಾರ, ಕಾರೇಪುರ, ಮಾದಗೊಂಡನಹಳ್ಳಿ, ಹೊನ್ನಾದೇವಿಪುರ, ಹೊನ್ನಾವರ, ರಾಮದೇವನಹಳ್ಳಿ, ಗಂಡ್ರಗೋಳಿಪುರ, ಕನ್ನಮಂಗಲ, ಬೀರಯ್ಯನಪಾಳ್ಯ, ಕೇಂಜಿಗನಹಳ್ಳಿ.
ಬಂಡಯ್ಯನಪಾಳ್ಯ, ಕೋಡಿಹಳ್ಳಿ, ಭದ್ರಾಪುರ, ಶಾಸ್ತ್ರೀಪಾಳ್ಯ, ಮುಪ್ಪಡಿಘಟ್ಟ, ಕಮ್ಮಸಂದ್ರ, ಹಾಲೇನಹಳ್ಳಿ, ಕಲ್ಲೋಡು, ದೊಡ್ಡಕುಕ್ಕನಹಳ್ಳಿ, ಯಲ್ಲಾದಹಳ್ಳಿ, ಇಸ್ತೂರು, ಪುರುಶನಹಳ್ಳಿ, ಬಿಟಿಎಸ್ ಮಿಲ್, ಮಲ್ಲೋಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಸೂಚನೆ: ಕೊನೆಯ ಕ್ಷಣದ ಬದಲಾವಣೆ ಹೊರತುಪಡಿಸಿ