ದೊಡ್ಡಬಳ್ಳಾಪುರ: ನಗರದ ನ್ಯಾಯಾಲಯದ ಆವರಣದಲ್ಲಿನ ವಕೀಲರ ಸಂಘದ ಸಭಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು (Shri Krishna Janmashtami) ಸಂಭ್ರಮದಿಂದ ಆಚರಿಸಲಾಯಿತು.
ಶ್ರೀ ಕೃಷ್ಣ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಪ್ರಸಾದ ವಿನಿಯೋಗ ಮಾಡುವ ಮೂಲಕ ಜನ್ಮಾಷ್ಟಮಿಯನ್ನು ಸಂಭ್ರಮಿಸಲಾಯಿತು.
ಈ ವೇಳೆ ನ್ಯಾಯಾಧೀಶರಾದ ನಿರ್ಮಲ ಕೆ., ಶಿಲ್ಪ ಹೆಚ್.ಎ., ಪ್ರವೀಣ್ ಆರ್. ಜೆ.ಎಸ್., ಡಿ.ಕ್ರಾಂತಿ ಕಿರಣ್, ಪ್ರೀತಿ ಕೆ., ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನಕುಂಟೆ, ವಕೀಲರಾದ ಕೃಷ್ಣಮೂರ್ತಿ, ಸುನೀಲ್ ಕುಮಾರ್, ಮುನಿರಾಜು, ಪ್ರವೀಣ್, ಪ್ರಭಾಕರ್, ಶಿವಕುಮಾರ್, ಸೈಯ್ಯದ್, ಮಮ್ತಾಜ್, ರೇಣುಕಾ ಮೂರ್ತಿ, ನಾಗರಾಜ್, ಕನಕರಾಜ್, ನರೇಂದ್ರ, ನಗರಾಜ್ ಗೌಡ, ಮೋಹನ್, ಲಕ್ಷ್ಮಿ, ಅರುಣ, ಸಂಜೀವಪ್ಪ ಸೇರಿದಂತೆ ಅನೇಕರಿದ್ದರು.