ದೊಡ್ಡಬಳ್ಳಾಪುರ: ಬೆಸ್ಕಾಂ ನಗರದ ಉಪವಿಭಾಗದ ವತಿಯಿಂದ ಆಗಸ್ಟ್ 22 ಮತ್ತು 24 ರಂದು ದೊಡ್ಡಬಳ್ಳಾಪುರ ತಾಲೂಕಿನ ವಿವಿಧೆಡೆ ನಡೆಯಬೇಕಿದ್ದ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಮುಂದೂಡಲಾಗಿದೆ (No power outage).
ಈ ಕುರಿತಂತೆ ಬೆಸ್ಕಾಂ ನಗರ ವಿಭಾಗದ ಎಇಇ ವಿನಯ್ ಕುಮಾರ್ ಹೆಚ್.ಪಿ ಅವರು ಪ್ರಕಟಣೆ ನೀಡಿದ್ದಾರೆ.
ಇದರನ್ವಯ ಆಗಸ್ಟ್ 22 ರಂದು 66/11ಕೆವಿ ಡಿ.ಕ್ರಾಸ್ ಉಪಕೇಂದ್ರದಲ್ಲಿ ನಡೆಯಬೇಕಿದ್ದ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಆಗಸ್ಟ್ 30 ಕ್ಕೆ ಹಾಗೂ ಆಗಸ್ಟ್. 24 ರಂದು 66/11ಕೆವಿ ಕೆಐಎಡಿಬಿ ಹಾಗೂ 66/11ಕೆವಿ ಅಪೇರಲ್ ಪಾರ್ಕ್ ಉಪಕೇಂದ್ರದಲ್ಲಿ ನಡೆಯಬೇಕಿದ್ದ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಆಗಸ್ಟ್ 31ಕ್ಕೆ ಮುಂದೂಡಲಾಗಿದೆ.