ಬೆಂಗಳೂರು: ನಾಡಹಬ್ಬ ದಸರಾ 2025ರ (Dasara 2025) ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ (Banu Mushtaq) ಅವರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಡೆಯನ್ನು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಆದರೆ ಮೈಸೂರು ಬಿಜೆಪಿ ಸಂಸದ, ರಾಜಮನೆತನದ ಸದಸ್ಯ ಯದುವೀರ್ ಒಡೆಯರ್ ಅವರು ಭಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆಗೆ ತಮ್ಮಗೇನು ಸಮಸ್ಯೆ ಅಥವಾ ಬಿನ್ನಾಭಿಪ್ರಾಯ ಇಲ್ಲ ಎನ್ನುವ ಮೂಲಕ, ಆಕ್ಷೇಪ ವ್ಯಕ್ತಪಡಿಸಿದ್ದ ಬಿಜೆಪಿ ನಾಯಕರಿಗೆ ಮುಜುಗರ ತಂದಿದ್ದಾರೆ.
ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾನು ಮುಸ್ತಾಕ್ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಸಾಮಜಿಕ ಹಕ್ಕಿಗಾಗಿ ಏನು ಮುಸ್ಲಿಂ ಮಹಿಳೆಯರು ಮಸೀದಿಗೆ ಪ್ರವೇಶ ನೀಡಲು ಸಾಕಷ್ಟು ಹೋರಾಟ ಮಾಡಿದ್ದಾರೆ. ಅವರನ್ನು ಆಹ್ವಾನ ನೀಡಿರುವುದು ನನಗೆ ಯಾವುದೇ ಸಮಸ್ಯೆ, ಭಿನ್ನಾಭಿಪ್ರಾಯ ಇಲ್ಲ.
ಸರಕಾರ ಆಧುನಿಕ ಜಗತ್ತಿನಲ್ಲಿ ಸಂವಿಧಾನದ ಚೌಕಟ್ಟಿನಲ್ಲಿ ಜಾತ್ಯಾತೀತ ತತ್ವದ ಅಡಿಯಲ್ಲಿ ದಸರಾ ಆಯೋಜನೆ ಮಾಡುತ್ತದೆ, ಆದರೂ ಸಹ ಇದರ ಹಿನ್ನಲೆ ಧಾರ್ಮಿಕ ಪದ್ಧತಿ, ಧಾರ್ಮಿಕ ವಿಧಿ, ಧಾರ್ಮಿಕ ಪಾರಂಪರೆಯಾಗಿದೆ. ಆದೃಷ್ಟಿಯಲ್ಲಿ ಅವರು ತಾಯಿ ಚಾಮುಂಡೇಶ್ವರಿ ಗೌರವ ಕೊಟ್ಟರೆ ನಮ್ಮದೇನು ತಕರಾರು ಇಲ್ಲ. ಚಾಮುಂಡೇಶ್ವರಿಗೆ ಗೌರವ ಕೊಡಬೇಕು ಅದಷ್ಟೇ ನಮ್ಮ ಅಭಿಪ್ರಾಯ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.