ದೊಡ್ಡಬಳ್ಳಾಪುರ: ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಹಾಗೂ ಒಡಿಶಾ ಕರಾವಳಿ ಸಮೀಪ ಚಂಡಮಾರುತ ಪ್ರಸರಣವುಂಟಾಗಿದ್ದು, ಈ ಭಾಗದಿಂದ ಕರ್ನಾಟಕದ ಮೇಲೆ ಬಿರುಗಾಳಿ ಬೀಸುವ ಜೊತೆಗೆ ಭಾರಿ ಮಳೆಯಾಗುತ್ತಿದೆ (Rain).
ಇದರ ಪ್ರಭಾವದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಕಳೆದೊಂದು 10 ದಿನಗಳಿಂದ ಸುರಿಯುತ್ತಿರುವ ಮಳೆಯು ಮುಂದಿನ ಒಂದು ವಾರಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬುಧವಾರ ದೊಡ್ಡಬಳ್ಳಾಪುರ ನಗರ ಮತ್ತು ತಾಲೂಕಿನ ಹಲವು ಭಾಗಗಳಲ್ಲಿ ಮೋಡ ಮುಸುಕಿದ ವಾತಾವರಣ ಕಂಡು ಬಂದಿದ್ದು, ಮಧ್ಯಾಹ್ನದ ವೇಳೆಗೆ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿಯಲು ಆರಂಭಿಸಿತು. ಸಂಜೆಯ ಬಳಿಕವೂ ಮಳೆ ಮುಂದುವರಿದಿತ್ತು.
ತಾಲೂಕಿನಲ್ಲಿ ಇಂದು ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಕಂಡು ಬರಲಿದ್ದು, ಹೆಚ್ಚಿನ ಮಳೆ ನಿರೀಕ್ಷೆ ಇದೆ. ಅಷ್ಟು ಮಾತ್ರವಲ್ಲದೆ ಸೆ.7ರವರೆಗೆ ತುಂತುರು ಮಳೆ ಆಗಬಹುದು.
ಗರಿಷ್ಠ ತಾಪಮಾನ 27 ಮತ್ತು ಕನಿಷ್ಟ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.