ಬೆಂಗಳೂರು: ರಾಜ್ಯದ ಸರಕಾರಿ ವೈದ್ಯಾಧಿಕಾರಿಗಳ 13 ಬೇಡಿಕೆಗಳ ಈಡೇರಿಕೆಗೆ ಸರಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ವೈದ್ಯರು ಮುಷ್ಕರ (Doctors’ strike) ವಾಪಸ್ ಪಡೆದಿದ್ದು, ಎಂದಿನಂತೆ ಹೊರರೋಗಿಗಳ ವಿಭಾಗ ಸೇವೆ ಮುಂದುವರಿಯಲಿದೆ.
ವಿಧಾನಸೌಧದಲ್ಲಿ ಮಂಗಳವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಸಚಿವ ಎಚ್.ಸಿ. ಮಹದೇವಪ್ಪ ಹಾಗೂ ವೈದ್ಯರ ಸಂಘದ ನಡುವೆ ನಡೆದ ಸಂಧಾನಸಭೆ ಯಶಸ್ವಿಯಾಗಿದೆ.
14ರಲ್ಲಿ 13 ಬೇಡಿಕೆಗಳನ್ನು ಮೂರು ತಿಂಗಳಲ್ಲಿ ಈಡೇರಿಸುವು ದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ವಾಪಸ್ ಪಡೆಯಲಾಗಿದೆ.
ಗೋದಿ ಮೀಡಿಯಾಗಳಿಗೆ ನಿರಾಸೆ
ಇನ್ನೂ ವೈದ್ಯರ ಪ್ರತಿಭಟನೆ ಕುರಿತು ಸಂಧಾನ ವಿಫಲ, ಒಪಿಡಿ ಸೇವೆ ಬಂದ್, ಸರ್ಕಾರದ ವಿರುದ್ಧ ಸಿಡಿದ ವೈದ್ಯರು ಎಂಬಂತೆ ರೋಚಕ ವರದಿ ಪ್ರಸಾರ ಮಾಡಿ, ಆಸ್ಪತ್ರೆಗಳ ಬಳಿ ವರದಿಗಾರರ ನಿಯೋಜನೆಗೆ ಸಿದ್ದವಾಗಿದ್ದ ಗೋದಿ ಮೀಡಿಯಾಗಳಿಗೆ ವೈದ್ಯರು ಪ್ರತಿಭಟನೆ ಕೈಬಿಟ್ಟಿದ್ದು ನಿರಾಸೆಗೆ ಕಾರಣವಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.