ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಎತ್ತಿನ ಹೊಳೆ ನೀರು ಬಂದಿಲ್ಲ: ಹೋರಾಟ ರೂಪಿಸಿಲು ಬಸವರಾಜ ಬೊಮ್ಮಾಯಿ ಕರೆ

Doddaballapur, Chikkaballapur constituency did not receive water: Basavaraj Bommai

ಚಿಕ್ಕಬಳ್ಳಾಪುರ: ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಎತ್ತಿನ ಹೊಳೆ ನೀರು ಬರಬೇಕೆಂದರೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಮೂರು ಜಿಲ್ಲೆಗಳಲ್ಲಿ ಸಕಾರಾತ್ಮಕ ರಾಜಕಾರಣದ ಮೂಲಕ ಹೋರಾಟ ರೂಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಏರ್ಪಡಿಸಿದ್ದ ಪಂ. ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ 2026 ರ ಅಂಗವಾಗಿ ನಡೆದ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಂಡಿತ್ ದೀನದಯಾಳ ಉಪಾಧ್ಯಾಯರು ಜನಸಂಘವನ್ನು ಕಟ್ಟಿದರು. ಅದರ ಮೊದಲನೇ ಅಧ್ಯಕ್ಷರಾಗಿದ್ದರು. ಅವರಿಗೆ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವುದು ಒಂದು. ಚುನಾವಣೆಗೆ ಅಥವಾ ಒಂದು ರಾಜಕೀಯ ಪಕ್ಷ ಕಟ್ಟಿದರೆ ಸಾಲದು ರಾಷ್ಟ್ರೀವಾದಿ ರಾಜಕೀಯ ಪಕ್ಷ ಕಟ್ಟಬೇಕು.

ರಾಜಕಾರಣ ಮಾಡುವುದೇ ರಾಷ್ಟ್ರಕ್ಕಾಗಿ, ಭಾರತ ಮಾತೆಗೋಸ್ಕರ ರಾಜಕಾರಣ ಮಾಡಬೇಕು. ಆದರೆ, ಈ ವಿಚಾರವನ್ನು ಸ್ವಾತಂತ್ರ ಬಂದಾಗ ಹೇಳುವುದು ಕಷ್ಟವಾಗಿತ್ತು. ಆಗ ಬಿಜೆಪಿ ನಾಯಕರಿಗೆ ಪ್ರಶಿಕ್ಷಣ ವರ್ಗದ ಮೂಲಕ ಪಕ್ಷವನ್ನು ಕಟ್ಟುವ ದೀನದಯಾಳ ಉಪಾಧ್ಯಾಯ ಅವರ ಯುಕ್ತಿಯಿಂದ ಬಂದಿದೆ. ಹೇಗೆ ಒಬ್ಬ ವ್ಯಕ್ತಿ ಜೀವನದ ಉದ್ದಕ್ಕೂ ವಿದ್ಯಾರ್ಥಿ ಆಗಿರುತ್ತಾನೆ. ಅವರು ಯಶಸ್ವಿಯಾಗುತ್ತಾರೆ.

ನಾನು ಡಿಗ್ರಿ ಮುಗಿಸಿದ್ದೇನೆ ಎಂದು ಬಿಟ್ಟರೆ ಅವರು ಯಶಸಿಯಾಗುವುದಿಲ್ಲ. ರಾಜಕೀಯ ಪಕ್ಷದಲ್ಲಿ ಕೂಡ ಕಾರ್ಯಕರ್ತರು ರಾಜಕಾರಣ ತಿಳಿದುಕೊಂಡು ಅದನ್ನು ಜನಪರವಾಗಿ ಇರುವಂತ ರಾಜಕಾರಣ ಮಾಡುವ ಮೂಲಕ ಅನುಭವ ಪಡೆದುಕೊಂಡಾಗ ನಾಯಕತ್ವ ಬರುತ್ತದೆ ಎಂದು ಹೇಳಿದರು.

ಜನಪರ ರಾಜಕಾರಣ

ಒಂದು ಜನಪರ ರಾಜಕಾರಣ ಇನ್ನೊಂದು ಅಧಿಕಾರದ ರಾಜಕಾರಣ ಬಹಳಷ್ಟು ಜನರು ಅಧಿಕಾರದ ರಾಜಕಾರಣ ಮಾಡುತ್ತಾರೆ. ಆದರೆ, ಜನರ ರಾಜಕಾರಣ ಮಾಡಿದರೆ ಅಧಿಕಾರ ಇಲ್ಲದಿದ್ದರೂ, ರಾಜಕಾರಣ ನಡೆಯುತ್ತದೆ. ನಾನು ಎರಡು ಉದಾಹರಣೆ ನಿಮ್ಮ ಮುಂದೆ ಕೊಡುತ್ತೇನೆ.

ಜನರ ರಾಜಕಾರಣವನ್ನು ಶಿಸ್ತಿನಿಂದ ಮಾಡಿರುವ ಇಬ್ಬರು ನಾಯಕರು ಒಬ್ಬರು ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿ ಅಮೆರಿಕಾಕ್ಕೆ ಹೋದಾಗ ನೀವು ಹಿಂದು ಪ್ರಧಾನಿನಾ ಅಂತ ಕೇಳಿದರು. ನೀವು ಆರ್ ಎಸ್ಎಸ್ ಸದಸ್ಯರು ಅಂತ ಕೇಳಿದರು. ಅವರು ನಾನು ಆರ್ ಎಸ್ಸೆಸ್ ಸ್ವಯಂ ಸೇವಕ‌ ಆ ಮೇಲೆ ನಾನು ಪ್ರಧಾನ ಮಂತ್ರಿ ಎಂದು ಸ್ಪಷ್ಟವಾಗಿ ಹೇಳಿದರು. ನಾನು ಎಷ್ಟೇ ಎತ್ತರಕ್ಕೂ ಹೋದರೂ ನನ್ನ ಮೂಲ ವಿಚಾರ ಬದಲಾಗಬಾರದು. ಒಮ್ಮೆ ಸ್ವಯಂ ಸೇವಕ ಆದ ಮೇಲೆ ಕೊನೆವರೆಗೂ ಸ್ವಯಂ ಸೇವಕ ಅದೇ ರೀತಿ ಈಗಿನ ಪ್ರಧಾನ ಮಂತ್ರಿಯವರನ್ನು ಕೇಳಿದಾಗ ಅವರು ನಾನು ಸ್ವಯಂ ಸೇವಕ ಈಗ ಪ್ರಧಾನ ಸೇವಕ ಸೇವೆ ಮಾಡುವುದನ್ನು ಮನಸಿನಲ್ಲಿ ಇಟ್ಟು ಕೊಂಡು ಕೆಲಸ ಮಾಡಬೇಕು.

ಪ್ರಶಿಕ್ಷಣ ಅಂದರೆ ನಮ್ಮ ಬೇರುಗಳ ಬಳಿ, ನಾವುಹೋಗಬೇಕು. ನಾವು ಮೊದಲು ಏನಾಗಿದೆವು ರಾಜಕೀಯ ಕಾರ್ಯಕರ್ತರರು ಆಗುವ ಮೊದಲು ಏನಾಗಿದ್ದೆವು. ಬಿಜೆಪಿ ಕಾರ್ಯಕರ್ತರು ಯಾಕೆ ಆಗಿದ್ದೇವೆ. ಹೇಗೆ ಬೆಳೆಯಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ನಾವು ಜನರ ಪರ, ರಾಷ್ಟ್ರದ ರಾಜಕಾರಣ ಮತ್ತು ನಮ್ಮ ಧರ್ಮದ ರಕ್ಷಣೆ ಮಾಡುವ ರಾಜಕಾರಣ ಮಾಡುತ್ತೇವೆ ಎನ್ನುವ ಸ್ಪಷ್ಟತೆಯಿಂದ ಹೋದಾಗ ನಮ್ಮ ಭವ್ಯ ಭಾರತದ ಕನಸು ನನಸಾಗುತ್ತೆ, ಅದಕ್ಕೆ ಈ ರೀತಿಯ ಪ್ರಶಿಕ್ಷಣ ಅವಶ್ಯಕತೆ ಇದೆ.

ಮನುಷ್ಯನಿಗೆ ಅನುಕೂಲ ಇದ್ದಲ್ಲಿ ಹೋಗುವ ಸ್ವಭಾವ, ಆರಂಭದ ದಿನಗಗಳಲ್ಲಿ ಇರುವ ಆದರ್ಶ ಅಧಿಕಾರ ಬಂದಾಗ ಹೋಗಿ ಬಿಡುತ್ತದೆ. ಪ್ರಶಿಕ್ಷಣದಲ್ಲಿ ನೀವು ಕಲಿತಿದ್ದನ್ನು ಅಧಿಕಾರಕ್ಕೆ ಬಂದಾಗ ಅದು ಗೌರವಿಸುತ್ತದೆ. ಕೆಲವೇ ಕೆಲವು ಜನರು ಆದರ್ಶವನ್ನು ಅಧೀಕಾರಕ್ಕೆ ಬಳಕೆ ಮಾಡುತ್ತಾರೆ ಅವರು ನಾಯಕರಾಗಿ ಹೊರ ಹೊಮ್ಮುತ್ತಾರೆ ಎಂದರು.

ಪಕ್ಷ ಸಂಘಟನೆ ಮುಖ್ಯ

ಚಿಕ್ಕಬಳ್ಳಾಪುರ ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಬೆಳೆಸಬೇಕಿದೆ. ಬಿಜೆಪಿ ಕಟ್ಟುತ್ತೇವೆ ಎಂದು ಬಂದಿದ್ದೀರಿ ನಿಮ್ಮನ್ನು ನೋಡಿ ಖುಷಿಯಾಗುತ್ತದೆ. ಬೆಂಗಳೂರು ನಗರದಲ್ಲಿ ಪಕ್ಷ ಕಟ್ಟುವುದು ಶಾಸಕರಾಗುವುದು ಬಹಳ ಸುಲಭ, ಅನೇಕರು ಮೂರು ಬಾರಿ ಶಾಸಕರಾಗಿ ಆಯ್ಕೆಯಾದರೂ ಜನರ ಸಂಪರ್ಕ ಇಲ್ಲ. ಆದರೂ, ಜನರು ಅವರಿಗೆ ಮತ ಹಾಕುತ್ತಾರೆ.

ಕೋಲಾರ ಭಾಗದಲ್ಲಿ ಕಮ್ಯುನಿಷ್ಟರು ಮತ್ತು ಕಾಂಗ್ರೆಸ್ ಪ್ರಭಾವ ಇದೆ. ಇವತ್ತು ಪಶ್ಚಿಮ ಬಂಗಾಲದ ಫಲಿತಾಂಶ ಬಂದಿದೆ, ಅಲ್ಲಿ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಕಳೆದ ಹತ್ತು ವರ್ಷದಲ್ಲಿ ಹೋರಾಟ ಜೋರಾಗಿದೆ. ಅಲ್ಲಿ ಅಮಿತ್ ಶಾ ಹಾಗೂ ನರೇಂದ್ರ ಮೋದಿಯವರ ಪ್ರಯತ್ನದ ಫಲ ಈಗ ಸಿಕ್ಕಿದೆ. ಯಾಕೆಂದರೆ ಪಶ್ಚಿಮ ಬಂಗಾಲಕ್ಕೆ ನಾಯಕತ್ವದ ಅವಶ್ಯಕತೆ ಇತ್ತು. ಸುವೇಂದು ಅಧಿಕಾರಿ ಅವರು ಟಿಎಂಸಿ ಬಿಟ್ಟು ಬಿಜೆಪಿಗೆ ಬಂದರು.

ಸಂಘಟನೆಯ ಬಲ ಮತ್ತು ನಾಯಕತ್ವದ ಫಲವಾಗಿ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಅದೇ ರೀತಿ ಕೋಲಾರ ಚಿಕ್ಕಬಳ್ಳಾಪುರ ಭಾಗದಲ್ಲಿ ಅವಕಾಶ ಇದೆ. ಇಲ್ಲಿ ಜನಸಂಘದ ಕಾಲದಿಂದಲೂ ಅನೇಕ ಮುಖಂಡರು ಇದ್ದಾರೆ. ಅವರೆಲ್ಲ ಅಧಿಕಾರ ಇಲ್ಲದೇ ಹೋಗಿದ್ದಾರೆ. ಇಲ್ಲಿಯೂ ರಾಜಕೀಯ ಮುಖಂಡರ ಅವಶ್ಯಕತೆ ಇದೆ.

ಹಿಂದೆಯೂ ಎರಡು ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದೆವು. ಆದರೆ, ನಾಯಕತ್ವ ಇರಲಿಲ್ಲ ಈಗ ಸುಧಾಕರ ಅವರು ಬಿಜೆಪಿಗೆ ಬಂದ ಮೇಲೆ ಕೇವಲ ತಮ್ಮ ಕ್ಷೇತ್ರಕ್ಕೆ ಸೀಮಿತ ಆಗದೇ ಬೇರೆ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬಂದರು. ವಿಧಾನಸಭೆಯ ಚುನಾವಣೆಯಲ್ಲಿ ಅನೇಕ ಕಾರಣಗಳಿಂದ ಸೋತಿರಬಹುದು. ಜನ ಸೋಲಿಸಲಿಲ್ಲ, ಕುತಂತ್ರದಿಂದ ಸೋತಿದ್ದಾರೆ. ಯಾಕೆಂದರೆ ಒಂದೇ ವರ್ಷದಲ್ಲಿ ಚಿಕ್ಕಬಳ್ಳಾಪುರದಲ್ಲಿ ಅವರಿಗೆ ಬಂದಿರುವ ಲೀಡ್ ಕಾರಣ, ಕೋಲಾರದಲ್ಲಿ ನಮ್ಮ ಮೈತ್ರಿ ಪಕ್ಷ ಗೆದ್ದರೆ ಚಿಕ್ಕಬಳ್ಳಾಪುರದಲ್ಲಿ ಸುಧಾಕರ ಗೆಲ್ಲುವಾಯಿತು.

ಸುಧಾಕರ ಬಿಜೆಪಿಗೆ ಬರುವಾಗ ಕೆಲವು ಕಂಡಿಷನ್ ಹಾಕಿದ್ದರು. ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು, ಮೆಗಾ ಡೈರಿ ಮಾಡಬೇಕೆಂದು ಕೇಳಿದ್ದರು. ಭೂಮಿ ಇಲ್ಲದವರಿಗೆ ಸೈಟ್ ಕೊಡುವ ಕೆಲಸ ಮಾಡಬೇಕು.

ಎತ್ತಿನ ಹೊಳೆ ನೀರು ಹರಿಸಬೇಕು, ಕಾಂಗ್ರೆಸ್ ಡ್ರೈನೇಜ್ ನೀರು ಹರಿಸುವ ಕೆಲಸ ಮಾಡುತ್ತಿದೆ ಅದನ್ನು ಶುದ್ದೀಕರಣ ಮಾಡಬೇಕು ಎಂದು ಕೇಳಿದ್ದರು. ಅವರ ಮೇಲೆ ಬಹಳ ಒತ್ತಡ ಇತ್ತು, ಈ ಪ್ರದೇಶದಲ್ಲಿ ಬದಲಾವಣೆ ತರಲು ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಬಂದರು. ಅವರಿಗೆ ಅಲ್ಲಿ ಒಳ್ಳೆಯ ಭವಿಷ್ಯ ಇತ್ತು. ಆದರೆ, ಅಧಿಕಾರ ಇದ್ದರೆ ಸಾಲದು. ಅವರು ಬಂದ ಮೇಲೆ ನಾವು ಅವರನ್ನು ವೈದ್ಯಕೀಯ ಶಿಕ್ಷಣ ಸಚಿವರನ್ನಾಗಿ ಮಾಡಿ ಅವರ ಕಡೆಯಿಂದಲೇ ಮೆಡಿಕಲ್ ಕಾಲೇಜ್ ಮಾಡಿದೆವು. ಅವರ ಜೊತೆಗೆ ನಮ್ಮ ಜಿಲ್ಲೆ ಹಾವೇರಿಗೂ ಬಂತು, ಚಿಕ್ಕಮಗಳೂರಿ ಯಾದಗಿರಿಗೂ ಮೆಡಿಕಲ್ ಕಾಲೇಜು ಬಂತು.

ಹಾಲು ಒಕ್ಕೂಟದ ವಿಚಾರದಲ್ಲಿ ಬಹಳ ಸಮಸ್ಯೆಯಾಯಿತು, ಕಾಂಗ್ರೆನ್‌ನವರು ವಿರೋಧ ಮಾಡಿದರು. ಆದರೆ, ನಾವು ವಚನ ಕೊಟ್ಟಿದ್ದೇವೆ. ನಾವು ಮಾಡೇ ಮಾಡುತ್ತೇವೆ ಎಂದು ಮಾಡಿದೆವು. ಸುಧಾಕರ ಒತ್ತಡದ ಕಾರಣದಿಂದ ಹಾವೇರಿ ಜಿಲ್ಲೆಗೂ ಪ್ರತ್ಯೇಕ ಹಾಲು ಒಕ್ಕೂಟ ಬಂತು. ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿರೋಧಿಸಿ ಕೋರ್ಟ್ ಗೆ ಹೋಗಿದ್ದರು. ನಿಮಗೆ ನ್ಯಾಯ ಸಿಕ್ಕಿದೆ. ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದರು

ಸಂಸದ ಸುಧಾಕರ ಹಿಡಿದ ಕೆಲಸ ಬಿಡುವುದಿಲ್ಲ. ಚಿಕ್ಕಬಳ್ಳಾಪುರ ಮಂಡಳದ ಸುಮಾರು 20 ಸಾವಿರ ಜನರಿಗೆ ಒಂದೇ ಬಾರಿಗೆ ಹಕ್ಕುಪತ್ರ ವಿತರಿಸುವ ಕೆಲಸ ಬೇರೆ ಯಾವುದೇ ಕ್ಷೇತ್ರದಲ್ಲಿ ಆಗಿಲ್ಲ. ಯಾರು ಕೆಲಸ ಮಾಡಿಸಿಕೊಂಡಿರುತ್ತಾರೆ ಅವರು ಮೌನವಾಗಿರುತ್ತಾರೆ. ಯಾರು ಕೆಲಸ ಮಾಡಿಸಿಕೊಂಡಿರುವುದಿಲ್ಲ ಅವರ ಧ್ವನಿ ದೊಡ್ಡದಾಗಿರುತ್ತದೆ.

20 ಸಾವಿರ ಜನರು ಪ್ರಾಮಾಣಿಕವಾಗಿ ಮತ ಹಾಕಿದ್ದರೆ ಸುಧಾಕರ ಸೋಲುತ್ತಿರಲಿಲ್ಲ. ಇವತ್ತು ಈ ರೀತಿಯ ರಾಜಕಾರಣ ನಡೆಯುತ್ತಿದೆ. ನಾನು ನಮ್ಮ ಕ್ಷೇತ್ರದಲ್ಲಿ 5 ಲಕ್ಷದ 15 ಸಾವಿರ ಮನೆ ನೀಡಿದ್ದೆ, 5 ಸಾವಿರ ಹಕ್ಕು ಪತ್ರ ನಿಡಿದ್ದೇವೆ. ಆದರೂ, ನನ್ನ ಮಗ ಚುನಾವಣೆಯಲ್ಲಿ ಸೋಲುವಂತಾಯಿತು. ಹೀಗಾಗಿ ಪ್ರಶಿಕ್ಷಣದಲ್ಲಿ ಸಕಾರಾತ್ಮಕ ರಾಜಕಾರಣ ಮಾಡುವುದನ್ನು ಹೇಗೆ ಮಾಡಬೇಕೆಂದು ಕಲಿಯಬೇಕು. ಸಕಾರಾತ್ಮಕ ರಾಜಕಾರಣದ ಫಲವನ್ನು ಪಕ್ಷದ ಅನುಕೂಲಲಕ್ಕೆ ಹೇಗೆ ಬಳಸಿಕೊಳ್ಳಬೇಕೆಂದು ಕಲಿಯಬೇಕು ಎಂದು ಹೇಳಿದರು.

ಹೋರಾಟ ಅಗತ್ಯ

ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಎತ್ತಿನ ಹೊಳೆ ನೀರು ಬಂದಿಲ್ಲ, ಕೊರಟಗೆರೆಯಲ್ಲಿ ಕಾಂಗ್ರೆಸ್ ನವರು ವಿರೋಧ ಮಾಡಿದ್ದರಿಂದ ನೀರಿನ ಸಂಗ್ರಹಕ್ಕೆ ಅವಕಾಶ ಇಲ್ಲ. ಇನ್ನೂ ಹೀಗೆ ಮುಂದುವರೆಸುತ್ತಾರೆ, ಡಿಸಿಎಂ ಡಿ.ಕೆ. ಶಿವಕುಮಾರ್ ನೀರಾವರಿ ಸಚಿವರಾಗಿರುವುದರಿಂದ ಸಿದ್ದರಾಮಯ್ಯ ಹಣ ಕೊಡುವುದಿಲ್ಲ.

ಎತ್ತಿನ ಹೊಳೆ ಯೋಜನೆ ಮತ್ತೆ ಪ್ರಾರಂಭ ಆಗಬೇಕೆಂದರೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಆದ್ದರಿಂದ ಹೋರಾಟ ರೂಪಿಸಬೇಕಿದೆ. ಯಡಿಯೂರಪ್ಪ ಅವರು ಹೇಗೆ ಹೋರಾಟ ಮಾಡಿದ್ದರೂ ಅದೇ ರೀತಿ ಈ ಮೂರು ಜಿಲ್ಲೆಗಳಲ್ಲಿ ಜನಪರ ಹೋರಾಟ ಕಟ್ಟ ಬೇಕು.

ಯಾವಾಗ ರಾಜಶಕ್ತಿ ಮತ್ತು ಜನಶಕ್ತಿ ನಡುವೆ ಸಂಘರ್ಷ ನಡೆಯುತ್ತದೆ. ಆಗ ಜನಶಕ್ತಿಗೆ ಜಯ ಸಿಕ್ಕಿದೆ. ನೀರಿನ ಶುದ್ದೀಕರಣಕ್ಕೆ ನಾವು ಹಣ ಇಟ್ಟಿದ್ದೇವು ಕಾಂಗ್ರೆಸ್ ರವರು ಅದನ್ನು ಖಾಲಿ ಮಾಡಿದ್ದಾರೆ. ಇದರ ವಿರುದ್ಧ ಹೋರಾಟ ರೂಪಿಸಬೇಕಿದೆ.

ಪಕ್ಷವನ್ನು ಬದ್ಧತೆಯಿಂದ ಆದರ್ಶದಿಂದ ಕಟ್ಟಿ ಈ ಭಾಗದಲ್ಲಿ ಈ ಪಕ್ಷ ಹೆಮ್ಮರವಾಗಿ ಬೆಳೆದು ಸಾಕಷ್ಟು ಜನರಿಗೆ ಬದುಕು ಕೊಡಲಿ, ರೈತರ ಬದುಕು ಹಸನಾಗಲಿ, ಕೈಗಾರಿಕೆಗಳು ಬೆಳೆಯಲ್ಲಿ ಅದರಲ್ಲಿ ಬಿಜೆಪಿಯ ಪಾತ್ರ ಇರಬೇಕು. ಎಲ್ಲಿ ಗುರಿ ಇದೆ. ಎಲ್ಲಿ ಛಲ ಇದೆ. ಎಲ್ಲಿ ಶ್ರಮ ಇದೆ ಅಲ್ಲಿ ಜಯ ಇದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸದ ಡಾ. ಸುಧಾಕರ ಹಾಗೂ ಮತ್ತಿತರರು ಹಾಜರಿದ್ದರು.

ರಾಜ್ಯದಲ್ಲಿ ಹಣ ಮತ್ತು ಹೆಂಡದ ಬಲದಿಂದ ಕಾಂಗ್ರೆಸ್ ಗೆ ಜಯ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಕರ್ನಾಟಕದಲ್ಲಿ ದಾವಣೆಗೆರೆ ಮತ್ತು ಬಾಗಲಕೊಟೆಯಲ್ಲಿ ಹಣ ಮತ್ತು ಹೆಂಡದ ಬಲದಿಂದ ಕಾಂಗ್ರೆಸ್ ಗೆ ಜಯ ಆಗಿದೆ. ಆದರೆ, ರಾಜ್ಯದ ವಾಸ್ತವಿಕ ಸ್ಥಿತಿಯೇ ಬೇರೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಕುರಿತು ಎಕ್ಸ್ ಮಾಡಿರುವ ಅವರು, ಆಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಅಲ್ಲಿನ ಜನರು ಪ್ರಧಾನಿ ನರೇಂದ್ರ ಮೋದಿ, ಹಾಗೂ ಕೇಂದ್ರ ಗೃಹ ಸಚಿವ ಅಮಿತಾ ಅವರ ನಾಯಕತ್ವಕ್ಕೆ ಕೊಟ್ಟಿರುವ ಮನ್ನಣೆ ಮತ್ತು ಬೆಂಬಲ. ಹೀಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಲ್ಲದೇ ಆಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾಸ್ ಶರ್ಮಾ ಮತ್ತು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೆಂಧು ಅಧಿಕಾರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ರಾಜಕೀಯ

ಮುನೇಗೌಡರ ಮನೆಗೆ JDS ದೊಡ್ಡಬಳ್ಳಾಪುರ ಅಧ್ಯಕ್ಷ ಹರೀಶ್ ಗೌಡ ಭೇಟಿ..!

ಮುನೇಗೌಡರ ಮನೆಗೆ JDS ದೊಡ್ಡಬಳ್ಳಾಪುರ ಅಧ್ಯಕ್ಷ ಹರೀಶ್ ಗೌಡ ಭೇಟಿ..!

ಜೆಡಿಎಸ್ (JDS) ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಹರೀಶ್ ಗೌಡ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಬಿ.ಮುನೇಗೌಡ ಅವರ ಸ್ವ ಗೃಹಕ್ಕೆ ಭೇಟಿ ನೀಡಿದ್ದಾರೆ.

[ccc_my_favorite_select_button post_id="121727"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ (IPL) ಪಂದ್ಯದ ವೇಳೆ ವ್ಯಾಪಿಂಗ್ ಮಾಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಿಯಾನ್ ಪರಾಗ್‌ಗೆ (Riyan Parag) ಪಂದ್ಯ ಶುಲ್ಕದ 25% ದಂಡ ವಿಧಿಸಿದೆ, ರಾಜಸ್ಥಾನ ರಾಯಲ್ಸ್ ನಾಯಕ ಕಠಿಣ

[ccc_my_favorite_select_button post_id="121572"]
ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ಜಿಂಕೆಬಚ್ಚಹಳ್ಳಿ ಸಮೀಪ ಶನಿವಾರ ಬೆಂಕಿಗೆ ಆಹುತಿಯಾಗಿದ್ದ ಕಾರಿನಲ್ಲಿ (Car) ಅನುಮಾನಸ್ಪದ ರೀತಿಯಲ್ಲಿ ಸುಟ್ಟು ಹೋಗಿದ್ದ ಮಹಿಳೆಯ (Woman) ಅಸ್ಥಿಪಂಜರ ಪತ್ತೆಯಾಗಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

[ccc_my_favorite_select_button post_id="121693"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]