
ಕೋಲ್ಕತಾ: ಚುನಾವಣೆ ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ (West Bengal) ರಾಜಕೀಯ ಕೋಭೆ ತೀವ್ರಗೊಂಡಿದೆ. ಬಿಜೆಪಿ (BJP) ಕಾರ್ಯಕರ್ತರು ಎನ್ನಲಾಗುತ್ತಿರುವವರು ನಡೆಸುತ್ತಿರುವ ರಾಜಕೀಯ ಹಿಂಸಾಚಾರ ತಾರಕಕ್ಕೇರಿದೆ ಎಂಬ ಆರೋಪ ವ್ಯಾಪಕವಾಗಿದೆ.
Where are central forces ? Where are @AmitShah’s massive security forces ? Brutal open attacks on @AITCofficial on the streets. Whats happening ?? pic.twitter.com/DC3cv2dBsV
— Sagarika Ghose (@sagarikaghose) May 6, 2026
ಮತ್ತೊಂದೆಡೆ ಬುಧವಾರ ರಾತ್ರಿ ಕೋಲ್ಕತಾದ ಹೊರವಲಯದಲ್ಲಿರುವ ಮಧ್ಯಮ ಗ್ರಾಮದಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಸುವೇಂದು ಅಧಿಕಾರಿಯ ಆಪ್ತ ಸಹಾಯಕ ಚಂದ್ರನಾಥ ದತ್ತರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಫಲಿತಾಂಶ ಬಂದ ಎರಡೇ ದಿನದಲ್ಲಿ ಸಾವಿನ ಸಂಖ್ಯೆ ಐದಕ್ಕೇರಿದೆ. ಹತ್ಯೆಗೆ ಕಾರಣವೇನು, ಗುಂಡಿಕ್ಕಿದವರು ಯಾರು ಎಂದು ಇನ್ನೂ ಖಚಿತವಾಗಿಲ್ಲ.
Chandranath Rath, PA to BJP leader Suvendu Adhikari, was targeted by bike-borne assailants who pulled up close to his vehicle and fired multiple rounds at point-blank range. https://t.co/rIaOvKmsLO pic.twitter.com/aMbN3uMRvJ
— زماں (@Delhiite_) May 6, 2026
ಮೂಲಗಳ ಪ್ರಕಾರ ಚಂದ್ರನಾಥ ದತ್ತರ ಸಮೀಪದಿಂದಲೇ ನಾಲ್ಕು ಸುತ್ತು ಗುಂಡು ಹಾರಿಸಲಾಗಿದೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿದರೂ ಉಪಯೋಗವಾಗಿಲ್ಲ. ದಾರಿ ಮಧ್ಯೆಯಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
PA of Suvendu Adhikari suffers a bullet injury in Madhyamgram and later succumbs. Further details are awaited. pic.twitter.com/33WBSsav1q
— Piyali Mitra (@Plchakraborty) May 6, 2026
ಪೊಲೀಸರು ತೀವ್ರ ಶೋಧ ಶುರು ಮಾಡಿದ್ದಾರೆ. ಸದ್ಯದ ಅಂದಾಜಿನ ಪ್ರಕಾರ ರಾಜಕೀಯ ದ್ವೇಷದಿಂದಲೇ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂಗಾಳ ದಲ್ಲೇ ಬೀಡು ಬಿಟ್ಟಿರುವ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಹಿಂಸೆಗೆ 5 ಬಲಿ
ಚುನಾವಣೆ ಮುಗಿದ ಮೇಲೆ ಬಂಗಾಳದಲ್ಲಿ ಹಿಂಸಾಚಾರ ತೀವ್ರವಾಗಿದೆ. ಕೋಲ್ಕತಾದ ಬೆಲೆ ಘಟದಲ್ಲಿ, ಬೀರ್ಭೂಮ್ನ ನಾನೂರ್ ನಲ್ಲಿ ಇಬ್ಬರು ಟಿಎಂಸಿ ಕಾರ್ಯಕರ್ತರು, ಉತ್ತರ ಪರಗಣ ಜಿಲ್ಲೆ, ಉದಯ ನಾರಾಯಣಪುರದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಮೃತಪಟ್ಟಿದ್ದಾರೆಂದು ಹೇಳಲಾಗಿದೆ.
ಈ ಹಿಂಸಾಚಾರದ ನಡುವೆಯೇ ಸುವೇಂದು ಆಪ್ತ ಬಲಿ ಯಾಗಿದ್ದಾರೆ. ಬಿಜೆಪಿ ಕಾರ್ಯಕರ್ತರು ಕಚೇರಿಗಳಿಗೆ ಬೆಂಕಿ ಹಚ್ಚಿದ ಘಟನೆಗಳೂ ನಡೆದಿವೆ.
Ache Din in West Bengal!🚩 pic.twitter.com/QeGhAh7LZF
— Dhruv Rathee (@dhruv_rathee) May 6, 2026

