ದೊಡ್ಡಬಳ್ಳಾಪುರ: ತಾಲೂಕು ಆಡಳಿತ ಬಿಡುಗಡೆ ಮಾಡಿರುವ ಮಂಗಳವಾರ ಬುಲೆಟಿನ್ ಮಾಹಿತಿಯಂತೆ ತಾಲೂಕಿನ 50 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿಗೆ ಒಳಗಾಗಿ ಚಿಕಿತ್ಸೆಗೆ ದಾಖಲಾಗಿದ್ದ ನಾಲ್ಕು ಜನ ಸಾವನಪ್ಪಿದ್ದಾರೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ,ಮಂಗಳವಾರದ ಸಂಜೆಯ ವರಗೆ.ದೊಡ್ಡಬಳ್ಳಾಪುರ ತಾಲ್ಲೂಕಿನ 32 ಪುರುಷರು ಹಾಗೂ 18 ಮಹಿಳೆಯರು ಸೇರಿ 50 ಜನರಿಗೆ ಸೋಂಕು ದೃಡಪಟ್ಟಿದ್ದು, ಆಕಾಶ್ ಆಸ್ಪತ್ರೆಗೆ ದಾಖಲಾಗಿದ್ದ ಗಾಣಿಗರಪೇಟೆಯ 60 ವರ್ಷದ ಪುರುಷ, 71 ವರ್ಷದ ಮಹಿಳೆ, ರಾಜಘಟ್ಟ ಗ್ರಾಮದ 54 ವರ್ಷದ ಮಹಿಳೆ ಹಾಗೂ ಕರೇನಹಳ್ಳಿಯ 54 ವರ್ಷದ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಸಾವನಪ್ಪಿದ್ದಾರೆ.
ಹರಿತಲೇಖನಿಗೆ ದೊರೆತಿರುವ ಮಾಹಿತಿಯಂತೆ. ಏಕಾಶಿಪುರ 4, ಕರೇನಹಳ್ಳಿ, ಕುಚ್ಚಪ್ಪನಪೇಟೆ, ಶಾಂತಿನಗರ, ಹುಸ್ಕೂರು ತಲಾ 3, ಹೇಮಾವತಿ ಪೇಟೆ, ವೀರಾಪುರ, ವಿನಾಯಕನಗರ, ಕೋಟೆ ರಸ್ತೆ, ಗಾಣಿಗರಪೇಟೆ ತಲಾ 2, , ರಾಜಘಟ್ಟ, ಬ್ಯಾಂಕ್ ಸರ್ಕಲ್, ನಗರ ಪೊಲೀಸ್ ಠಾಣೆ, ವೀರಭದ್ರಪ್ಪನ ಪೇಟೆ, ಹಾಡೋನಹಳ್ಳಿ, ಇಸ್ಲಾಂಪುರ, ಕೆಂಪೇಗೌಡ ನಗರ, ಕನಸವಾಡಿ, ಗುಂಡಮಗೆರೆ, ವೀರಭದ್ರನ ಪಾಳ್ಯ, ಧರ್ಮರಾಯ ಸ್ವಾಮಿ ನಗರ, ಸಿನಿಮಾ ರಸ್ತೆ, ತೂಬಗೆರೆ ಪೇಟೆ, ಶ್ರೀನಗರ, ವರದನಹಳ್ಳಿ, ಹಸನ್ ಘಟ್ಟ, ಹೊಸಹಳ್ಳಿ, , ಕಲ್ಕಿ ಟ್ರಾವೆಲ್ಸ್ ಸಮೀಪ, ದೊಡ್ಡತಿಮ್ಮನಹಳ್ಳಿ, ಬ್ರಾಹ್ಮಣರ ಬೀದಿ, ಪ್ಲಾಂಟೇಷನ್, ಕೊಂಗಾಡಿಯಪ್ಪ ಕಾಲೇಜು ರಸ್ತೆ, ಮುತ್ತೂರು, ಸಂಜಯನಗರದ ತಲಾ ಒಬ್ಬರಲ್ಲಿ ಸೊಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 1718 ಮಂದಿಗೆ ಸೋಂಕು ತಗುಲಿದ್ದು, 1110ಮಂದಿ ಗುಣಮುಖರಾಗಿದ್ದರೆ 62 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 56 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 490 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

