ಅತ್ತಿಬೆಲೆ: ಬಂಧಿಸಲು ಬಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಪೊಲೀಸರು ಕಾಲಿಗೆ ಗುಂಡು ಹೊಡೆದು ಆರೋಪಿಯನ್ನು ಬಂಧಿಸಿ 7 ಕೆ ಜಿ ಗಾಂಜಾ ಜಫ್ತಿ ಮಾಡಿರುವ ಘಟನೆ ಅತ್ತಿಬೆಲೆ ಬಳಿ ನಡೆದಿದೆ.
ಬಂಧಿತ ವ್ಯಕ್ತಿಯನ್ನು ಅಯೂಬ್ ಖಾನ್ ಅಲಿಯಾಸ್ ಇಸ್ಮಾಯಿಲ್ ಖಾನ್ ಎಂದು ಗುರುತಿಸಲಾಗಿದೆ.ಬಂಧಿತ ಆರೋಪಿ 8 ಕ್ಕೂ ಅಧಿಕ ಅಕ್ರಮ ಗಾಂಜಾ ಸಾಗಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಮಂಗಳವಾರ ಅತ್ತಿಬೆಲೆ ಸಿಪಿಐ ಸತೀಶ್ ಮತ್ತು ತಂಡ ಆತನನ್ನ ಬಂಧಿಸಲು ತೆರಳಿದ ವೇಳೆ ಸತೀಶ್ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ಈ ವೇಳೆ ಸತೀಶ್ ಆಯೂಬ್ ಖಾನ್ ಗೆ ಪಿಸ್ತೂಲಿನಿಂದ ಕಾಲಿಗೆ ಗುಂಡಿಕ್ಕುವ ಮೂಲಕ ಬಂಧಿಸಿದ್ದಾರೆ.
ಈ ವೇಳೆ ಆಯೂಬ್ ಕಾಲಿಗೆ ಗಾಯವಾಗಿದ್ದು, ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಸರ್ಜಾಪುರ ಪಿಎಸ್ ಐ ಹರೀಶ್ ರೆಡ್ಡಿ ಅವರಿಗೂ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

