ಕ್ಷಯ ರೋಗ ಪತ್ತೆ ಹಚ್ಚುವಿಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್.ಕೆ.ನಾಯಕ್ ಸೂಚನೆ

ಬೆಂಗಳೂರು: ಕ್ಷಯರೋಗ ಪತ್ತೆ ಹಚ್ಚುವಿಕೆಗೆ ಅಗತ್ಯವಿರುವ ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ್  ಸೂಚಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ “ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವ ಆಂದೋಲನ”ದ ಜಿಲ್ಲಾ ಮಟ್ಟದ ಇಲಾಖೆಗಳ ಸಮನ್ವಯ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ “ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ”ವನ್ನು 2020ರ ಡಿಸೆಂಬರ್ 01 ರಿಂದ ಡಿಸೆಂಬರ್ 31 ರವರೆಗೆ ಹಮ್ಮಿಕೊಂಡಿದ್ದು, 2025ರ ವೇಳೆಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ ಎಂದು ತಿಳಿಸಿದರಲ್ಲದೆ, ವಾರಕ್ಕೆ ಒಂದು ಕಾರ್ಯಕ್ರಮಗಳಂತೆ ವೇಳಾಪಟ್ಟಿ ತಯಾರಿಸಿ ಸಪ್ತಾಹದಂತೆ ಆಂದೋಲನವನ್ನು ಯಶಸ್ವಿಗೊಳಿಸಿ ಎಂದು ತಿಳಿಸಿದರು.

ಕಿಶೋರಿ, ಹದಿಹರೆಯದ ಮಕ್ಕಳಿಗೆ ಪೌಷ್ಟಿಕತೆ ಕುರಿತು ಮಾಹಿತಿ ನೀಡುವಾಗ ಕ್ಷಯ ರೋಗದ ಕುರಿತು ಒಂದಷ್ಟು ಮಾಹಿತಿ ನೀಡಿ ಎಂದರಲ್ಲದೆ, ಆನ್‍ಲೈನ್ ತರಗತಿಗಳ ವೇಳೆ ವಿದ್ಯಾರ್ಥಿಗಳಿಗೆ ಕ್ಷಯರೋಗದ ಲಕ್ಷಣಗಳ ಕುರಿತು ಅರಿವು ಮೂಡಿಸಿ ಎಂದು ತಿಳಿಸಿದರು.

ಪ್ರತಿ ಗ್ರಾಮಗಳಲ್ಲೂ ಧ್ವನಿವರ್ಧಕಗಳನ್ನು ಬಳಸಿ, ಸಕ್ರಿಯ ಕ್ಷಯರೋಗ ಮತ್ತು ಚಿಕಿತ್ಸಾ ಆಂದೋಲನದ ಕುರಿತು ಜಾಗೃತಿ ಮೂಡಿಸಲು ಹಾಗೂ ಸಭೆಗಳಲ್ಲಿ ಕ್ಷಯರೋಗದ ಆಂದೋಲನದ ಕುರಿತು ಪ್ರಸ್ತಾಪ ಮಾಡುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಿಗೆ ಸೂಚಿಸಿದರು.

ನಗರಸಭೆ ಹಾಗೂ ಪುರಸಭೆಯವರು ಪೌರ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಕ್ಷಯರೋಗ ತಪಾಸಣೆ ಕಡ್ಡಾಯವಾಗಿ ಮಾಡಲು ತಿಳಿಸಿದರಲ್ಲದೆ, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಲ್ಲಿರುವ ವಿದ್ಯಾರ್ಥಿಗಳ ಸ್ಕ್ರೀನಿಂಗ್ ಮಾಡಲು ತಿಳಿಸಿದರು.

ಜಿಲ್ಲೆಯಲ್ಲಿನ ಕ್ವಾರಿಗಳಲ್ಲಿ ಧೂಳು ಮತ್ತು ಪ್ರದೂಷಣೆ ಹೊಂದಿರುವ ವಾತಾವರಣದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಲ್ಲಿ ಉಸಿರಾಟದ ಸಮಸ್ಯೆ ಹೆಚ್ಚು ಕಂಡು ಬರುವುದು ಹಾಗಾಗಿ ಅಂತಹ ಪ್ರದೇಶಗಳನ್ನು ಗುರುತಿಸಿ ಅಲ್ಲಿನ ಕಾರ್ಮಿಕರನ್ನು ಸ್ಕ್ರೀನಿಂಗ್ ಮಾಡಿ, ಕ್ಷಯರೋಗದ ಲಕ್ಷಣಗಳಿದ್ದಲ್ಲಿ, ಚಿಕಿತ್ಸೆಗೆ ಕ್ರಮ ವಹಿಸಿ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗೆ ತಿಳಿಸಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣ ಘಟಕದ ಸಂಚಾಲಕಿ ಶಕೀಲಾ ಅವರು ಮಾತನಾಡಿ ಒಂದು ಮಾಹೆ ಅಂತ್ಯದವರೆಗೂ ನಡೆಯುವ ಕಾರ್ಯಕ್ರಮ ಇದಾಗಿದ್ದು, 9,82,072 ಜನಸಂಖ್ಯೆ ತಲುಪುವ ಗುರಿಯನ್ನು ಹೊಂದಿ ಎಂದರಲ್ಲದೆ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಸಂಘ-ಸಂಸ್ಥೆಗಳನ್ನೊಳಗೊಂಡ 447 ಗುಂಪುಗಳನ್ನು ರಚಿಸಲಾಗಿದೆ ಹಾಗೂ ಕ್ಷಯರೋಗದ ಆಂದೋಲನದಲ್ಲಿ ಎಂ.ವಿ.ಜೆ. ಮತ್ತು ಆಕಾಶ್ ಮೆಡಿಕಲ್ ಕಾಲೇಜಿನವರು, ಖಾಸಗಿ ಔಷಧಿ ಅಂಗಡಿಯವರು ಭಾಗವಹಿಸಲಿದ್ದಾರೆ ಎಂದರಲ್ಲದೆ, ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಕ್ಷಯರೋಗಿಗಳಿಗೆ ಕ್ಷ-ಕಿರಣ ಪರೀಕ್ಷೆಯನ್ನು ಉಚಿತವಾಗಿ ಮಾಡುವ ಮೂಲಕ ಸಹಕಾರ ನೀಡಿದ್ದಾರೆಂದು ಮಾಹಿತಿ ನೀಡಿದರು.

ಜಲಜನಕಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ, ನೆಲಮಂಗಲ ಹಾಗೂ ಹೊಸಕೋಟೆ ತಾಲ್ಲೂಕು ಆರೋಗ್ಯಾಧಿಕಾರಿಗಳು, ಆಕಾಶ್ ಮೆಡಿಕಲ್ ಕಾಲೇಜು ಹಾಗೂ ಎಂ.ವಿ.ಜೆ ಆಸ್ಪತ್ರೆ ವೈದ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಎನ್.ಎಸ್.ಎಸ್ ಅಧಿಕಾರಿಗಳು, ಶಾಲಾ ಕಾಲೇಜು ಪ್ರಾಂಶುಪಾಲರು, ಸಂಘ ಸಂಸ್ಥೆಯವರು ಉಪಸ್ಥಿತರಿದ್ದರು.

ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

ರಾಜಕೀಯ

ಮದ್ದೂರು ಗಲಭೆ ಪ್ರಕರಣ: ಮಂಡ್ಯ ಜಿಲ್ಲೆಗೆ ಬೆಂಕಿ ಹಾಕುವ ಕೆಲಸವನ್ನು ಕೆಲ ಶಕ್ತಿಗಳು ಮಾಡುತ್ತಿವೆ; ಹೆಚ್.ಡಿ. ಕುಮಾರಸ್ವಾಮಿ ಆರೋಪ

ಮದ್ದೂರು ಗಲಭೆ ಪ್ರಕರಣ: ಮಂಡ್ಯ ಜಿಲ್ಲೆಗೆ ಬೆಂಕಿ ಹಾಕುವ ಕೆಲಸವನ್ನು ಕೆಲ ಶಕ್ತಿಗಳು

ಕೆಲ ದುಷ್ಟಶಕ್ತಿಗಳು ಬೆಂಕಿ ಹಾಕುವ ಕೆಲಸ ಮಾಡಿದವು. ಈಗ ಮದ್ದೂರಿನಲ್ಲಿಯೂ ಅಂಥ ಶಕ್ತಿಗಳೇ ಜನರ ನೆಮ್ಮದಿ ಕೆಡಿಸುವ ಹುನ್ನಾರ ನಡೆಸಿವೆ: ಹೆಚ್.ಡಿ. ಕುಮಾರಸ್ವಾಮಿ ( H.D. Kumaraswamy)

[ccc_my_favorite_select_button post_id="113691"]
ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ

ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ

ಆಲಮಟ್ಟಿಯಯಲ್ಲಿರುವ ಲಾಲ್ ಬಹುದ್ದೂರ್ ಶಾಸ್ತ್ರೀ ಸಾಗರದ ಕೃಷ್ಣೆಯ ಜಲಧಿಗೆ ಗಂಗಪೂಜೆ ಹಾಗೂ ಬಾಗಿನ ವನ್ನು ಅರ್ಪಣೆ CM

[ccc_my_favorite_select_button post_id="113575"]
7 ವರ್ಷಗಳ ಬಳಿಕ ಮೋದಿ ಚೀನಾ ಭೇಟಿ.. ಭಾರತಕ್ಕೆ ದೊರೆತಿದ್ದೇನು..! ವಿಶ್ಲೇಷಣೆ

7 ವರ್ಷಗಳ ಬಳಿಕ ಮೋದಿ ಚೀನಾ ಭೇಟಿ.. ಭಾರತಕ್ಕೆ ದೊರೆತಿದ್ದೇನು..! ವಿಶ್ಲೇಷಣೆ

ಪ್ರಧಾನಿ ನರೇಂದ್ರ ಮೋದಿ (Narendra modi) ಅವರು ತಮ್ಮ 2 ದಿನಗಳ ಚೀನಾ ಭೇಟಿಯನ್ನು ಮುಗಿಸಿ ದೇಶಕ್ಕೆ ಮರಳಿದ್ದಾರೆ. ಇದನ್ನು ಅವರು 'ಉತ್ಪಾದಕ' ಭೇಟಿ ಎಂದು ಬಣ್ಣಿಸಿದ್ದಾರೆ.

[ccc_my_favorite_select_button post_id="113432"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರ: R.L.ಜಾಲಪ್ಪ ಕಾಲೇಜಿನಲ್ಲಿ ಮೇಜರ್ ಧ್ಯಾನ್‌ ಚಂದ್ ಜನ್ಮದಿನಾಚರಣೆ

ದೊಡ್ಡಬಳ್ಳಾಪುರ: R.L.ಜಾಲಪ್ಪ ಕಾಲೇಜಿನಲ್ಲಿ ಮೇಜರ್ ಧ್ಯಾನ್‌ ಚಂದ್ ಜನ್ಮದಿನಾಚರಣೆ

ಹಾಕಿ ದಂತಕಥೆ ಮೇಜರ್ ಧ್ಯಾನ್‌ ಚಂದ್ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ನಗರದ ಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ (R.L. Jalappa Technical College) ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಯಿತು.

[ccc_my_favorite_select_button post_id="113312"]
ಯುವತಿ ಮೊಬೈಲ್ ನಂಬರ್ ಬ್ಲಾಕ್ ಮಾಡಿದಕ್ಕೆ ಯುವಕ ಆತ್ಮಹತ್ಯೆ..!

ಯುವತಿ ಮೊಬೈಲ್ ನಂಬರ್ ಬ್ಲಾಕ್ ಮಾಡಿದಕ್ಕೆ ಯುವಕ ಆತ್ಮಹತ್ಯೆ..!

'ಐ ಡಿಡ್ ನಾಟ್ ಸ್ಟಾಪ್ ಎನಿಥಿಂಗ್ ಅನ್‌ಟಿಲ್, ಐ ಆಲ್ ವೇಸ್ ಲವ್ ಫಾರ್‌ಎವೆರ್, *** ಯೂ ಆರ್‌ಮೈ ಫಸ್ಟ್ ಆ್ಯಂಡ್ ಯೂ ಆರ್‌ಮೈ ಲಾಸ್ಟ್ ' Suicide

[ccc_my_favorite_select_button post_id="113685"]
ಅಪಘಾತ: ಬಾಲಕಿ ದುರ್ಮರಣ

ಅಪಘಾತ: ಬಾಲಕಿ ದುರ್ಮರಣ

ಟಿಪ್ಪ‌ರ್ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ (Accident) ಹೊಡೆದ ಹಿನ್ನೆಲೆಯಲ್ಲಿ ಬಾಲಕಿ ಸ್ಥಳದಲ್ಲೇ ಸಾವನ್ನಪಿ, ಮತ್ತಿಬ್ಬರು ಬಾಲಕಿಯರು ಗಾಯಗೊಂಡಿರುವ ಘಟನೆ

[ccc_my_favorite_select_button post_id="113674"]

ಆರೋಗ್ಯ

ಸಿನಿಮಾ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ದಿ ಡೆವಿಲ್ ಸಿನಿಮಾದ 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

[ccc_my_favorite_select_button post_id="113046"]
error: Content is protected !!