ದೊಡ್ಡಬಳ್ಳಾಪುರ: ಎರಡನೇ ಹಂತದಲ್ಲಿ ಡಿ.27ರಂದು ನಡೆಯಲಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ 26 ಗ್ರಾಮಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಘೋಷಿಸಿದೆ.ಆಯೋಗ ಚುನಾವಣೆ ಘೋಷಣೆಯ ನಂತರ ಹಳ್ಳಿ ರಾಜಕೀಯಕ್ಕೆ ವೇದಿಕೆ ಸಜ್ಜಾಗಿದ್ದು, ಅರಳಿ ಕಟ್ಟೆ ರಾಜಕೀಯ ಗರಿಗೆದರಿದೆ.
ಆದರೆ ನಗರದ ಹೊರವಲಯದ ಬಾಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೇಗೇರಿಸಿ ಸಂಪುಟ ಸಭೆ ತೀರ್ಮಾನಿಸಿದ್ದು, ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಸರ್ಕಾರದ ಅಧಿನ ಕಾರ್ಯದರ್ಶಿ ಎ.ವಿಜಯಕುಮಾರ್ ವಿಶೇಷ ರಾಜ್ಯ ಪತ್ರಕೆಯಲ್ಲಿ ಅಧಿಸೂಚೆನೆ ಹೊರಡಿಸಿರುವುದರಿಂದ ಬಾಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ಚುನಾವಣೆ ನಡೆಯುವುದೋ, ಇಲ್ಲವೋ ಎಂಬ ಗೊಂದಲ ಸ್ಥಳೀಯರನ್ನು ಕಾಡುತ್ತಿದೆ.
ಬಾಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಯಲ್ಲಿ 47 ಸ್ಥಾನಗಳಿದ್ದು ತಾಲೂಕಿನಲ್ಲಿಯೇ ಅತಿ ಹೆಚ್ಚು ಸ್ಥಾನ ಹೊಂದಿರುವ ಗ್ರಾಮಪಂಚಾಯಿತಿಯಾಗಿದೆ. ಮತ್ತೊಂದೆಡೆ ಚುನಾವಣೆ ಆಯೋಗದ ಸೂಚನೆಯಂತೆ ಚುನಾವಣೆ ಅಧಿಕಾರಿಗಳು ಇತರ ಗ್ರಾಮಪಂಚಾಯಿತಿಗಳಂತೆ ಚುನಾವಣೆ ಪ್ರಕ್ರಿಯೆ ನಡೆಸುತ್ತಿದ್ದಾರೆ.
ಚುನಾವಣೆ ಆಯೋಗಕ್ಕೆ ಡಿಸಿ ಪತ್ರ: ಬಾಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ಚುನಾವಣೆ ಗೊಂದಲದ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ.ರವೀಂದ್ರ ಅವರು ಚುನಾಣೆ ಆಯೋಗಕ್ಕೆ ಸ್ಪಷ್ಟನೆ ಕೋರಿ ಪತ್ರ ಬರೆದಿರುವುದಾಗಿ ಹರಿತಲೇಖನಿಗೆ ತಿಳಿಸಿದ್ದಾರೆ. ಎರಡು,ಮೂರು ದಿನದೊಳಗೆ ಸ್ಪಷ್ಟ ಚಿತ್ರಣ ದೊರಕಲಿದೆ ಎಂದರು.
ಚುನಾವಣೆ ನಡೆಯುವ ಗ್ರಾಪಂಗಳ ಕ್ಷೇತ್ರವಾರು ಸ್ಥಾನಗಳು: ಆರೂಢಿ ( 9 ಕ್ಷೇತ್ರ- 18 ಸ್ಥಾನ ), ಕಂಟನಕುಂಟೆ ( 8 ಕ್ಷೇತ್ರ – 19 ಸ್ಥಾನ ), ಕನಸವಾಡಿ ( 10 ಕ್ಷೇತ್ರ – 19 ಸ್ಥಾನ ), ಕಾಡನೂರು ( 5 ಕ್ಷೇತ್ರ – 8 ಸ್ಥಾನ ), ಕೊಡಿಗೇಹಳ್ಳಿ ( 13 ಕ್ಷೇತ್ರ – 34 ಸ್ಥಾನ ), ಚೆನ್ನಾದೇವಿ ಅಗ್ರಹಾರ ( 7 ಕ್ಷೇತ್ರ – 12 ಸ್ಥಾನ ), ತಿಪ್ಪೂರು ( 10 ಕ್ಷೇತ್ರ – 18 ಸ್ಥಾನ ), ತೂಬಗೆರೆ ( 12 ಕ್ಷೇತ್ರ – 22ಸ್ಥಾನ ), ದೊಡ್ಡತುಮಕೂರು ( 6 ಕ್ಷೇತ್ರ – 12 ಸ್ಥಾನ ), ದೊಡ್ಡಬೆಳವಂಗಲ ( 7 ಕ್ಷೇತ್ರ – 18 ಸ್ಥಾನ ), ಬಾಶೆಟ್ಟಿಹಳ್ಳಿ ( 19 ಕ್ಷೇತ್ರ – 47 ಸ್ಥಾನ ), ಭಕ್ತರಹಳ್ಳಿ ( 9 ಕ್ಷೇತ್ರ – 15 ಸ್ಥಾನ ), ಮೇಲಿನ ಜೂಗನಹಳ್ಳಿ (11 ಕ್ಷೇತ್ರ – 19 ಸ್ಥಾನ ), ಮೆಳೇಕೋಟೆ ( 11 ಕ್ಷೇತ್ರ – 20 ಸ್ಥಾನ ), ರಾಜಘಟ್ಟ ( 6 ಕ್ಷೇತ್ರ – 17 ಸ್ಥಾನ ), ಸಕ್ಕರೆಗೊಲ್ಲಹಳ್ಳಿ ( 11 ಕ್ಷೇತ್ರ – 18 ಸ್ಥಾನ ), ಸಾಸಲು ( 9 ಕ್ಷೇತ್ರ – 16 ಸ್ಥಾನ ), ಹೆಗ್ಗಡಿಹಳ್ಳಿ ( 9 ಕ್ಷೇತ್ರ – 14 ಸ್ಥಾನ ), ಹಣಬೆ ( 11 ಕ್ಷೇತ್ರ – 20 ಸ್ಥಾನ ), ಹಾಡೋನಹಳ್ಳಿ ( 7 ಕ್ಷೇತ್ರ – 15 ಸ್ಥಾನ ), ಹಾದ್ರಿಪುರ ( 6 ಕ್ಷೇತ್ರ – 14 ಸ್ಥಾನ ), ಹುಲಿಕುಂಟೆ (8 ಕ್ಷೇತ್ರ – 15ಸ್ಥಾನ ), ಹೊನ್ನಾವರ (11 ಕ್ಷೇತ್ರ – 17ಸ್ಥಾನ ), ಹೊಸಹಳ್ಳಿ ( 12 ಕ್ಷೇತ್ರ – 24 ಸ್ಥಾನ ), ಕೊನಘಟ್ಟ ( 8 ಕ್ಷೇತ್ರ – 22 ಸ್ಥಾನ ), ಕೆಸ್ತೂರು ( 8 ಕ್ಷೇತ್ರ – 17 ಸ್ಥಾನ )
ಗ್ರಾಮಪಂಚಾಯಿತಿ ಮೀಸಲು ವಿವರ: ಪರಿಶಿಷ್ಟ ಜಾತಿ – 54, ಪರಿಶಿಷ್ಟ ಜಾತಿ ಮಹಿಳೆ – 69, ಪರಿಶಿಷ್ಟ ಪಂಗಡ – 9, ಪರಿಶಿಷ್ಟ ಪಂಗಡ ಮಹಿಳೆ – 28, ಹಿಂದುಳಿದ ವರ್ಗ ‘ಎ’ – 23, ಹಿಂದುಳಿದ ವರ್ಗ ‘ಎ’ ಮಹಿಳೆ – 40, ಹಿಂದುಳಿದ ವರ್ಗ ‘ಬಿ’ – 13 , ಹಿಂದುಳಿದ ವರ್ಗ ‘ಬಿ’ ಮಹಿಳೆ – 4 , ಸಾಮಾನ್ಯ 142, ಸಾಮಾನ್ಯ ಮಹಿಳೆ 108
ಮತಪಟ್ಟಿಯನ್ವಯ 76437 ಪುರುಷರು, 75232 ಮಹಿಳೆಯರು ಸೇರಿ 1,51669 ಮತದಾರರನ್ನು ಈ ಚುನಾವಣೆಯಲ್ಲಿ ಮತಚಲಾಯಿಸಲಿದ್ದಾರೆ, ತಾಲೂಕಿನಲ್ಲಿ 258 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಕ್ಷಣ ಕ್ಷಣದ ತಾಜಾ ಸುದ್ದಿ, ಮಾಹಿತಿಗಾಗಿ Harithalekhaniಯನ್ನು Facebook / Twitterಗಳಲ್ಲಿ ಫಾಲೋ ಮಾಡಿ.

