ಚಿಕ್ಕಬಳ್ಳಾಪುರ: ಹೆಣ್ಣು ಮಗು ಜನಿಸಿತೆಂಬ ಕಾರಣಕ್ಕೆ ಮಗುವನ್ನು ಸಾಕಲು ನಿರಾಕರಿಸಿ ಮಗುವನ್ನು ಮಾರಾಟ ಮಾಡಿದ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಊದಾಗೊಂದಿ ತಾಂಡದಲ್ಲಿ ನಡೆದಿದೆ.
14 ದಿನಗಳ ಹಿಂದೆ ನವಜಾತ ಹೆಣ್ಣು ಮಗುವನ್ನು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆ ಗೋರಂಟ್ಲ ಮೂಲದ ದಂಪತಿಗಳಿಗೆ ಮಾರಾಟ ಮಾಡಿದ್ದ ಪೋಷಕರ ಕುರಿತು ಗೋರಂಟ್ಲ ಪೋಲೀಸ್ ತಂಡದಿಂದ ಬಾಗೇಪಲ್ಲಿ ಪೋಲಿಸರಿಗೆ ಮಾಹಿತಿ ದೊರೆತಿದೆ.
ಈ ಹಿನ್ನೆಲೆಯಲ್ಲಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಮತ್ತು ಬಾಗೇಪಲ್ಲಿ ಟಿಹೆಚ್ಓ ಡಾಕ್ಟರ್ ಸತ್ಯನಾರಾಯಣ ರೆಡ್ಡಿ ತಮ್ಮ ಸಿಬ್ಬಂದಿ ಯೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬಂದಿ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಮತ್ತು ಬಾಗೇಪಲ್ಲಿ ಪೋಲೀಸರ ಬೆಂಗಾವಲಿನಲ್ಲಿ 15 ದಿನಗಳ ಮಗುವನ್ನು ರಕ್ಷಿಸಿ ಕರೆತಂದು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯ ನವಜಾತ ಶಿಶುವಿನ ವಾರ್ಡಿನಲ್ಲಿ ಸುರಕ್ಷಿತ ವಾಗಿ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ತಂದೆ ಅಶೋಕ್ ನಾಯಕ್, ತಾಯಿ ಅತಿಥಿ ಬಾಯಿ ಹೆಣ್ಣು ಶಿಶು ಮಾರಾಟ ಮಾಡಿದ್ದ ದಂಪತಿಗಳಾಗಿದ್ದು, ಈ ಕುರಿತು ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.

