
ಬೆಂ.ಗ್ರಾ.ಜಿಲ್ಲೆ: ನೆಲಮಂಗಲ ತಾಲ್ಲೂಕಿನ ಕಳಲುಘಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ವಾಟರ್ ಮೆನ್ಗಳಾಗಿ ಕಾರ್ಯನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ತೋಟನಹಳ್ಳಿ ಗ್ರಾಮದ ನೀರು ನಿರ್ವಾಹಕ ವೆಂಕಟಪ್ಪ ಮತ್ತು ಅಕಾಲಿಕ ಮರಣಕ್ಕೆ ತುತ್ತಾದ ನರಸಾಪುರ ಗ್ರಾಮದ ನೀರು ನಿರ್ವಾಹಕ ಶಿವಲಿಂಗಯ್ಯ ಅವರ ಪತ್ನಿ ಶಾರದಮ್ಮರನ್ನು ಗ್ರಾಮಪಂಚಾಯಿತಿವತಿಯಿಂದ ಸನ್ಮಾನಿಸಲಾಯಿತು.
ಇಂದು ಕಳಲುಘಟ್ಟ ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗ್ರಾಪಂ ಆಡಳಿತಾಧಿಕಾರಿ ನಟರಾಜು ಮತ್ತು ಪಿಡಿಒ ಸಿ.ಗೀತಾಮಣಿ ವಯೋ ನಿವೃತ್ತಿ ಹೊಂದಿದ ವೆಂಕಟಪ್ಪ ಮತ್ತು ಅಕಾಲಿಕ ಮರಣಕ್ಕೆ ತುತ್ತಾದ ಶಿವಲಿಂಗಯ್ಯ ಅವರ ಪತ್ನಿ ಶಾರದಮ್ಮರಿಗೆ ಉಪದಾನದ ಚೆಕ್ ವಿತರಿಸಿ, ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಕಾರ್ಯದರ್ಶಿ ಕೆಂಪರಂಗಯ್ಯ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗ್ರೂಪ್ ಮೂಲಕ ನಮ್ಮೊಂದಿಗೆ ಸೇರಿ.

