
ಬೆಂಗಳೂರು: ಇಂದು ಫೆ.14 ಪ್ರೇಮಿಗಳ ದಿನವೆಂದು ವಿಶ್ವದೆಲ್ಲೆಡೆ ಆಚರಿಸಲಾಗುವ ಒಂದು ಹಬ್ಬ. ಇದನ್ನು ಪ್ರತಿ ವರ್ಷ ಫೆಬ್ರವರಿ 14ರಂದು ಆಚರಿಸುತ್ತಾರೆ. ಈ ದಿನ ಪ್ರೇಮಿಗಳು ತಮ್ಮ ಪ್ರೀತಿಯ ಸಂಕೇತವಾಗಿ ಕೆಂಪು ಬಣ್ಣದ ಬಟ್ಟೆಯನ್ನು ತೊಡುತ್ತಾರೆ, ಸಂತ ವೆಲಂಟನ್ ನ ಹೆಸರು ಈ ದಿನಕ್ಕೆ ಇಡಲಾಗಿದೆ. ಅವನು ಪ್ರೇಮಿಗಳನ್ನು ಒಂದು ಗೂಡಿಸುತ್ತಿದ್ದನು.
ಈ ಪ್ರೇಮಿಗಳ ಹಬ್ಬ ಇರೋದು 14ನೇ ದಿನಾಂಕವಾದರೂ ಫೆಬ್ರವರಿ 7, ರಿಂದಲೇ ಲವ್ ಹಬ್ಬ ಶುರುವಾಗುತ್ತೆ ವ್ಯಾಲೆಂಟೈನ್ ವೀಕ್.14ರವರೆಗೂ ಪ್ರೇಮಿಗಳಿಗೆ ಒಂದೊಂದು ದಿನವೂ ವಿಶೇಷವಾಗಿರುತ್ತೆ ಎಂಬುದು ಹಲವರ ನಂಬಿಕೆ.
ಕರಾಳ ದಿನ: 2019ರ ಫೆ.14ರಂದು ಜಮ್ಮುವಿನ ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಗೆ ಹುತಾತ್ಮರಾದ 44ಮಂದಿ ಸಿಆರ್ ಪಿಎಫ್ ಯೋಧರ ಬಲಿದಾನದ ದಿನವಾಗಿದ್ದು, ಇಂದು ರಾಜ್ಯಾದ್ಯಂತ ಪುಲ್ವಾಮ ಹುತಾತ್ಮರ ದಿನಚರಣೆ ಆಚರಿಸಲಾಗುತ್ತಿದೆ.
ರಾಜ್ಯಾದ್ಯಂತ ಹುತಾತ್ಮರ ದಿನದ ಅಂಗವಾಗಿ ಬಜರಂಗದಳ, ಶ್ರೀರಾಮ ಸೇನೆ ಮತ್ತಿತರ ಸಂಘಟನೆಗಳು ಶ್ರದ್ಧಾಂಜಲಿ, ಪಂಜಿನ ಮೆರವಣಿಗೆ ಆಯೋಜಿಸಿವೆ.
ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ, ಕೆಲವರು ಪ್ರೇಮಿಗಳ ದಿನದ ಶುಭಕೋರಿರುವ ಸಂದೇಶ ಬರೆದರೆ, ಬಹುತೇಕರು ಹುತಾತ್ಮರ ದಿನದ ಸಂದೇಶವುಳ್ಳ ಪೊಟೋ ಅಪ್ಡೇಟ್ ಮಾಡುತ್ತಿದ್ದಾರೆ.
ಒಟ್ಟಾರೆ ಯುವ ಜನತೆ ಪ್ರೇಮಿಗಳ ದಿನವನ್ನು ಕ್ಯಾರೆ ಎನ್ನದೆ, ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿ ಇಂದಿನ ದಿನವನ್ನು ಕರಾಳ ದಿನವಾಗಿ ಆಚರಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.
ಫೇಸ್ಬುಕ್ ಪುಟ ಹಾಗೂ ಟ್ವಿಟರ್, ಕೂ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ, ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

