
ದೊಡ್ಡಬಳ್ಳಾಪುರ: ತಾಲ್ಲೂಕಿನ ಕಸಬಾ ಹೋಬಳಿ ಕೊನಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಕಾವತಿ ಕ್ಷೇತ್ರದಲ್ಲಿ ಸೀತಾರಾಮಚಂದ್ರ ಸ್ವಾಮಿಯ 67ನೇ ಬ್ರಹ್ಮ ರಥೋತ್ಸವ ಭಾನುವಾರ ಸಡಗರದಿಂದ ನಡೆಯಿತು.
ರಥೋತ್ಸವದ ಹಿನ್ನೆಲೆ ಕಲ್ಯಾಣೋತ್ಸವ, ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಭಕ್ತಾದಿಗಳಿಂದ ಅರವಂಟಿಗೆ ಕಾರ್ಯಕ್ರಮಗಳು ನಡೆದವು. ತಾಲ್ಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ರಥಕ್ಕೆ ಹೂವು ಹಣ್ಣು ಸಮರ್ಪಿಸಿ, ಸೀತಾರಾಮಚಂದ್ರಸ್ವಾಮಿಯ ದರ್ಶನ ಪಡೆದು ಅರವಂಟಿಗೆ ಪ್ರಸಾದ ಸ್ವೀಕರಿಸಿದರು.
ರಥೋತ್ಸವದ ಅಂಗವಾಗಿ ಅಮಾಮ್, ಶಿವಪುರ, ಮುತ್ಸಂದ್ರ ಗ್ರಾಮಸ್ಥರಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತು, ಸೋಮವಾರ ಹಗಲು ಪರಿಷೆ ನಡೆಯಲಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್, ಕೂ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

