
ಪುರಿ: ಬಾಲಿವುಡ್ ನಟಿ ಕಂಗನಾ ರಣಾವತ್ ಧಾಕಡ್ ಸಿನಿಮಾದ ಚಿತ್ರೀಕರಣ ಒತ್ತಡದ ನಡುವೆಯೂ ಕಂಗನಾ ಒಡಿಶಾದ ಪ್ರಸಿದ್ಧ ಪುರಿ ಜಗನ್ನಾಥ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ಜಗನ್ನಾಥನ ದರ್ಶನ ಪಡೆದ ಬಳಿಕ ಕಂಗನಾ ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ನಟಿ ಕಂಗನಾ ದೇವರನ್ನು ಆಪರವಾಗಿ ನಂಬುತ್ತಾರೆ. ಆಗಾಗ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುತ್ತಾರೆ. ಬಿಳಿ ಬಣ್ಣದ ಗ್ರ್ಯಾಂಡ್ ಡ್ರೆಸ್ ಧರಿಸಿದ್ದ ಕಂಗನಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೋಟೋವನ್ನು ಶೇರ್ ಮಾಡಿ ಕಂಗನಾ, ನಾವು ಯಾವಾಗಲು ಕೃಷ್ಣನನ್ನು ರಾಧಾ ಅಥವಾ ರುಕ್ಮಣಿ ಜೊತೆ ನೋಡುತ್ತೇವೆ. ಆದರೆ ಪುರಿಯಲ್ಲಿ ಶ್ರೀಕೃಷ್ಣನು ತನ್ನ ಒಡಹುಟ್ಟಿದವರಾದ ಬಲರಾಮ ಮತ್ತು ಸುಭದ್ರಾ ಜೊತೆ ಇದ್ದಾನೆ ಎಂದು ಬರೆದುಕೊಂಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

