
ದೊಡ್ಡಬಳ್ಳಾಪುರ: ಹೊನ್ನಘಟ್ಟ-ಕೋಳೂರು ರಸ್ತೆ ಬಂದ್ ಮಾಡಲಾಗಿದ್ದನ್ನು ತಹಶೀಲ್ದಾರ್ ಟಿ.ಎಸ್.ಶಿವರಾಜ್ ಮಂಗಳವಾರ ಪೊಲೀಸ್ ಬಂದೋಬಸ್ತ್ನಲ್ಲಿ ತೆರವುಗೊಳಿಸಿದರು.
ರಸ್ತ್ ಬಂದ್ನಿಂದಾಗಿ ಎರಡು ತಿಂಗಳಿಂದ ಗ್ರಾಮಗಳ ಜನರ ಸಂಪರ್ಕವೇ ಬಂದ್ ಆಗಿತ್ತು. ಹಲವಾರು ಸುತ್ತಿನ ಶಾಂತಿ ಸಭೆಯ ನಂತರವು ರಸ್ತೆಯನ್ನು ತೆರವು ಮಾಡಲಾಗಿರಲಿಲ್ಲ. ಇಂದು ಪೊಲೀಸರ ಸಮ್ಮುಖದಲ್ಲಿ ಜೆಸಿಬಿಯೊಂದಿಗೆ ರಸ್ತೆಯನ್ನು ತೆರವು ಮಾಡಲಾಯಿತು.
ರಸ್ತೆ ತೆರವು ಕುರಿತು ಮಾಹಿತಿ ನೀಡಿದ ತಹಶೀಲ್ದಾರ್ ಟಿ.ಎಸ್.ಶಿವರಾಜ್,ದಶಕಗಳಿಂದಲು ಇದ್ದ ಹಾಗೂ ಈ ಹಿಂದೆಯೇ ಡಾಂಬರು ಸಹ ಹಾಕಲಾಗಿದ್ದ ರಸ್ತೆಯನ್ನು ಹೊನ್ನಾಘಟ್ಟ ಗ್ರಾಮದ ಕೆಲವರು ಉದ್ದೇಶ ಪೂರಕವಾಗಿ ಬಂದ್ ಮಾಡಿದ್ದರು. ಸಾರ್ವಜನಿಕರಿಗೆ ತೊಂದರೆ ಮಾಡಿದ್ದವರ ವಿರುದ್ದ ದೂರು ಸಹ ದಾಖಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಟಿ.ರಂಗಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ಕುಮಾರ್, ಸಬ್ಇನ್ಸ್ಪೆಕ್ಟರ್ ಮಂಜುನಾಥ್ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

