
ದೊಡ್ಡಬಳ್ಳಾಪುರ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ಷಯರೋಗದಿಂದ ಗುಣಮುಖರಾದ ಐದು ಜನರನ್ನು ಆರೋಗ್ ಇಲಾಖೆಯಿಂದ ಸನ್ಮಾನಿಸಲಾಯಿತು.
ಕ್ಷಯರೋಗದ ವಿರುದ್ದ ಯಶಸ್ವಿಯಾಗಿ ಹೋರಾಟ ನಡೆಸಿ ಗೆದ್ದು ಇತರರಿಗೆ ಮಾದರಿಯಾದ ಓರ್ವ ಮಹಿಳೆ ಹಾಗೂ ನಾಲ್ಕು ಜನ ಪುರುಷರಿಗೆ ಟಿ.ಬಿ ಚಾಂಪಿಯನ್ಸ್ ಎಂದು ಗೌರವಿಸಲಾಯಿತು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ ಮಾತನಾಡಿ, 2025ರ ಒಳಗೆ ತಾಲೂಕನ್ನು ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿಸಲು ಇಲಾಖೆ ಬಹಳಷ್ಟು ಕ್ರಮಕೈಗೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಶಕೀಲಾ, ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ, ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರಮೇಶ್, ವೈದ್ಯಾಧಿಕಾರಿ ಡಾ.ಚನ್ನಕೇಶವ ಮತ್ತಿತರಿದ್ದರು.(ಗೌಪ್ಯತೆ ಕಾಪಾಡುವ ಉದ್ದೇಶದಿಂದ ಪೊಟೋ ಬಳಸಿಲ್ಲ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

