ಮುಜಫರ್ನಗರ, (ಜುಲೈ.21): ಉತ್ತರ ಪ್ರದೇಶದಲ್ಲಿಮನ ಕನ್ವರ್ಯಾತ್ರೆ ಸಾಗುವ ಮಾರ್ಗದಲ್ಲಿರುವ ಕನ್ವರ್ ಮಾರ್ಗದಲ್ಲಿರುವ ಢಾಬಾಗಳು, ಅಂಗಡಿಗಳು ಅಥವಾ ಬಂಡಿಗಳ ಮಾಲೀಕರು ತಮ್ಮ ಹೆಸರನ್ನು ಪ್ರದರ್ಶಿಸುವ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ ಸರ್ಕಾರ ಆದೇಶಿಸಿದ್ದಾರೆ.
ಈ ಕುರಿತು ಪರ-ವಿರೋಧದ ಚರ್ಚೆ ತೀವ್ರವಾಗಿದೆ. ಅಲ್ಲದೆ ವಿಚಾರವೀಗ ವಿವಾದಕ್ಕೀಡಾಗಿದ್ದು, ಇದನ್ನು ‘ಹಿಟ್ಲರ್ ನೀತಿ’ ಎಂದು ಟೀಕಿಸಲಾಗುತ್ತಿದೆ.
ಶ್ರಾವಣ ಮಾಸದಲ್ಲಿ ನಡೆಯುವ ಯಾತ್ರೆ ವೇಳೆ ಸಾವಿರಾರು ಶಿವಭಕ್ತರು ಹರಿದ್ವಾರದಿಂದ ಪುಣ್ಯ ತೀರ್ಥ ತಂದು ಉತ್ತರ ಪ್ರದೇಶದ ಮುಜಾಫರ್ ನಗರದ ಮಾರ್ಗವಾಗಿ ಸಾಗುತ್ತಾರೆ.
ಈ ವೇಳೆ ಯಾತ್ರಿಕರಿಗೆ ಗೊಂದಲವಾಗದಂತೆ, ಭವಿಷ್ಯದಲ್ಲಿ ಯಾವುದೇ ಆರೋಪ ಕೇಳಿ ಬರದಂತೆ ತಡೆಯಲು ಹೊಟೇಲ್, ಢಾಬಾ, ರಸ್ತೆಬದಿಯ ತಳ್ಳುಗಾಡಿಗಳು ತಮ್ಮ ಮಾಲೀಕರ ಹೆಸರನ್ನು ಸ್ಪಷ್ಟವಾಗಿ ಕಾಣುವಂತೆ ಅಳವಡಿಸಿ ಎಂದು ಪೊಲೀಸರು ಆದೇಶಿಸಿದ್ದಾರೆ.
ಈ ಬಗ್ಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. “ಕನ್ವರ್ ಯಾತ್ರಿಕರು ಮುಸಲ್ಮಾನರ ಅಂಗಡಿಗಳಿಗೆ ವ್ಯಾಪಾರ ಮಾಡಬಾರದು ಎಂಬುದು ಇದರ ಉದ್ದೇಶ” ಎಂದು ಟ್ವೀಟ್ ಮಾಡಿದ್ದಾರೆ. ಬಾಲಿವುಡ್ ಸಾಹಿತಿ ಜಾವೇದ್ ಅಕ್ತರ್ ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇನ್ನೂ ನಟ ಸೋನು ಸೂದ್ ಅವರು ಎಕ್ಸ್ ಪೋಸ್ಟ್ ನಲ್ಲಿ ಅಂಗಡಿಗಳ ನಾಮಫಲಕಗಳಲ್ಲಿ ಕೇವಲ “ಮಾನವೀಯತೆ”(humanity)ಯನ್ನು ಪ್ರದರ್ಶಿಸಬೇಕು ಎಂದು ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ಯಾವುದೇ ಧರ್ಮ ತಾರತಮ್ಯದ ಉದ್ದೇಶದಿಂದ ಈ ಆದೇಶ ನೀಡಿಲ್ಲ ಎಂದು ತಿಳಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೆ ಅಂಗಡಿ, ತಳ್ಳುವ ಗಾಡಿಗಳ ಮೇಲೆ ಜನರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಚಿತ್ರ ಮತ್ತು ಘೋಷಣೆಗಳೊಂದಿಗೆ ಪೋಸ್ಟರ್ಗಳನ್ನು ಹಾಕುತ್ತಿರುವುದು ಕಂಡುಬಂದಿದೆ.
ಉತ್ತರ ಪ್ರದೇಶದಲ್ಲಿ ‘ಮೊಹಬ್ಬತ್ ಕಿ ದುಕಾನ್, ನೋ ಹಿಂದೂ-ಮುಸಲ್ಮಾನ್’ ಎಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….