ದೇವನಹಳ್ಳಿ, (ಫೆ.05):ಐದು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಹಾಗೂ ನುಡಿದಂತೆ ನಡೆದ ಸರ್ಕಾರ ನಮ್ಮದು ಜನಜಾಗೃತಿ ಅಭಿಯಾನ ಸಭೆಯನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್. ಮುನಿಯಪ್ಪ ನವರು ಉದ್ಘಾಟಿಸಿದರು.
ಪಟ್ಟಣದ ಅನ್ನಪೂರ್ಣೇಶ್ವರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರ ನೇತೃತ್ವದ ನಮ್ಮ ಸರ್ಕಾರ ಜನತೆಗೆ ನೀಡಿದ ಗ್ಯಾರಂಟಿ ಭರವಸೆಯಂತೆ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು ನುಡಿದಂತೆ ನಡೆಯುತ್ತಿದೇವೆ.
ನಿಮ್ಮ ಸವರ್ತೋಮುಖ ಅಭಿವೃದ್ಧಿಯು ನಮ್ಮ ಸರ್ಕಾರದ ದೃಢ ಸಂಕಲ್ಪವಾಗಿದ್ದು ಇಡೀ ರಾಜ್ಯದ ಜನರು ನಮ್ಮ ಗ್ಯಾರಂಟಿ ಯೋಜನೆಯ ಸವಲತ್ತು ಪಡೆದು ಅಭಿವೃದ್ಧಿಯ ಖಾತರಿಯನ್ನು ಪಡೆಯುತ್ತಿದ್ದಾರೆ.
ಸುಳ್ಳು ಭರವಸೆಗಳಿಂದ ವಿಮುಖರಾದ ಜನರಿಗೆ ನಮ್ಮ ಪಂಚ ಗ್ಯಾರಂಟಿಯಿಂದ ನಮ್ಮ ಸರ್ಕಾರದ ಮೇಲೆ ಆಶಾಭಾವನೆ ಮೂಡಿದೆ.
ಗೃಹಜ್ಯೋತಿ: ಈ ಯೋಜನೆಯು ಉಚಿತ ಬೆಳಕು ಸುಸ್ಥಿರ ಬದುಕು ಈ ಯೋಜನೆಯ ಉದ್ದೇಶವಾಗಿದೆ. ದಿ:05.08.2023 ರಂದು ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಿದರು ಅದೇ ದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಯೋಜನೆಯನ್ನು ಪ್ರಾರಂಭ ಮಾಡಲಾಯಿತು. ರಾಜ್ಯದ ಎರಡು ಕೋಟಿಗೂ ಹೆಚ್ಚು ಗ್ರಾಹಕರಿಗೆ ಈ ಯೋಜನೆಯು ಅನುಕೂಲವಾಗಲಿದ್ದು, ಇದಕ್ಕಾಗಿ ವಾರ್ಷಿಕವಾಗಿ 13,910 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈವರೆಗೂ ಜಿಲ್ಲೆಯಲ್ಲಿ 4,90,087 ಗ್ರಾಹಕರು ನೋಂದಾಯಿಸಿಕೊಂಡಿರುತ್ತಾರೆ. ಗೃಹಜ್ಯೋತಿಯಡಿ ಇತ್ತೀಚಿನ ಸಚಿವ ಸಂಪುಟದ ತೀರ್ಮಾನದಂತೆ ಒಟ್ಟು ಬಿಲ್ಲಿನ ಮೊತ್ತದ ಶೇ.10 ರ ಬದಲಾಗಿ, 10 ಯೂನಿಟ್ ಹೆಚ್ಚುವರಿಯಾಗಿ ಘೋಷಣೆ ಮಾಡಿದ್ದು, ಅತೀ ಕಡುಬಡವರಿಗೂ ಪ್ರಯೋಜನವಾಗಲಿದೆ.
ಈ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 33 3,54,304 0 ಯೋಜನೆಯ ಅನುಕೂಲವನ್ನು ಪಡೆದುಕೊಂಡಿವೆ. ಮುಂದುವರೆದು ಈ ಯೋಜನೆಯಡಿ ದೇವನಹಳ್ಳಿ ತಾಲ್ಲೂಕಿನಲ್ಲಿ ನೋಂದಣಿಯಾಗಿ ಪಡೆದುಕೊಂಡಿವೆ. 59,998 ಕುಟುಂಬಗಳು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.
ಅನ್ನ ಭಾಗ್ಯ ಯೋಜನೆ; ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಲು ಹತ್ತು ವರ್ಷಗಳ ಹಿಂದೆ ಅನ್ನಭಾಗ್ಯ ಯೋಜನೆಯನ್ನು ಆರಂಭಿಸಿದ ಕೀರ್ತಿ ನಮ್ಮ ಸರ್ಕಾರಕ್ಕೆ ಸಲ್ಲುತ್ತದೆ.
ಯುಪಿಯ-2 ಅವಧಿಯ ಭಾರತ ಸರ್ಕಾರವು ಸನ್ಮಾನ್ಯ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ದೇಶವನ್ನು ಹಸಿವು ಮುಕ್ತಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ- 2013 ನ್ನು ಜಾರಿಗೆ ತಂದಿದ್ದು. ಇದರಡಿ ನೀಡುತ್ತಿರುವ 5 ಕೆ.ಜಿ ಪಡಿತರ ಧಾನ್ಯದ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿ. ಸೇರಿ ಒಟ್ಟು 10 ಕೆ.ಜಿ ಪಡಿತರ ನೀಡಲು ರಾಜ್ಯ ಸರ್ಕಾರವು ನಿರ್ಧರಿಸಿತ್ತು. ಅದರಂತೆ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ 5 ಕೆ.ಜಿ ಅಕ್ಕಿಗೆ ಹಣ ನೀಡುತ್ತೇವೆ ಎಂದರೂ ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ 5 ಕೆ.ಜಿ ಆಹಾರ ಧಾನ್ಯಗಳ ಬದಲಾಗಿ ಅರ್ಹ ಫಲಾನುಭವಿಗಳಿಗೆ ಪ್ರತಿ ಕೆ.ಜಿ 34 ರೂ ನಂತೆ 5ಕೆಜಿ ಗೆ 170/- ಕುಟುಂಬದ ಮುಖ್ಯಸ್ಥರ ಖಾತೆಗೆ ಜಮಾ ಮಾಡಲಾಗುತ್ತಿದೆ.
ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ನಮ್ಮ ಇಲಾಖೆ 1.28 ಕೋಟಿ ಪಡಿತರ ಚೀಟಿಯಲ್ಲಿನ ಅರ್ಹ ಕುಟುಂಬಗಳಿಗೆ ಪ್ರತಿ ತಿಂಗಳು ಸರಿ ಸುಮಾರು 4 ಕೋಟಿ ಫಲಾನುಭವಿಗಳಿಗೆ ಜುಲೈ-2023 ರಿಂದ ಡಿಸೆಂಬರ್ ಮಾಹೆಯ ತನಕ 3,751 ಕೋಟಿ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ಕುಟುಂಬದ ಮುಖ್ಯಸ್ಥರ ಖಾತೆಗೆ ಜಮಾ ಮಾಡಲಾಗಿದೆ.
ಈ ಸಾಲಿನ ಆಯವ್ಯಯದಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ರೂ.10,000 ಕೋಟಿ ಅನುದಾನ ಒದಗಿಸಲಾಗಿದೆ. ಜಿಲ್ಲೆಯಲ್ಲಿನ 14343 ಅಂತ್ಯೋದಯ ಅನ್ನಯೋಜನೆ ಪಡಿತರ ಚೀಟಿದಾರರಿಗೆ ಪ್ರತಿ ಕಾರ್ಡ್ದಾರರಿಗೆ ತಲಾ 35 ಕೆ.ಜಿ ಮತ್ತು ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ತಲಾ 5 ಕೆ.ಜಿ ಯಂತೆ 2,15,926 ಪಡಿತರ ಚೀಟಿದಾರರಿಗೆ ವಿತರಣೆ ಮಾಡಲಾಗಿರುತ್ತದೆ. ಡಿಸೆಂಬರ್-23 ರ ಮಾಹೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1,99,979 ಅರ್ಹ ಫಲಾನುಭವಿಗಳಿಗೆ ರೂ.11,67,01,940/- ಅನ್ನು ಡಿ.ಬಿ.ಟಿ ಮೂಲಕ ವರ್ಗಾವಣೆ ಮಾಡಲಾಗಿದೆ.
ಈ ಯೋಜನೆಯಡಿ ದೇವನಹಳ್ಳಿ ತಾಲ್ಲೂಕಿನಲ್ಲಿ 3263 ಎ.ಎ.ವೈ ಪಡಿತರ ಕಾರ್ಡ್ದಾರರು, 46886 ಬಿ.ಪಿ.ಎಲ್ ಕಾರ್ಡ್ ಗಳಲ್ಲಿ ಒಟ್ಟು 205033 ಫಲಾನುಭವಿಗಳು ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಈ ಯೋಜನೆಯ ಅನುಷ್ಠಾನದ ಮೂಲಕ ರಾಜ್ಯವನ್ನು ಹಸಿವುಮುಕ್ತ ರಾಜ್ಯವಾಗಿಸುವ ನಿಟ್ಟಿನಲ್ಲಿ ನುಡಿದಂತೆ ನಡೆದ ಸರ್ಕಾರ ದೇಶದಲ್ಲಿ ಯಾವುದಾದರೂ ಇದ್ದರೆ ಅದು ನಮ್ಮ ಕರ್ನಾಟಕದ ಕಾಂಗ್ರೆಸ್ ಸರ್ಕರ ಎಂದು ಹೆಮ್ಮೆಯಿಂದ ಹೇಳುತ್ತೇನೆ.
ಶಕ್ತಿಯೋಜನೆ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ* ದಿ:11.06.2023 ರಂದು ಈ ಯೋಜನೆಯ ಚಾಲನೆಯಲ್ಲಿ ನೀಡಲಾಯಿತು. ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶದಿಂದ ಪ್ರತಿ ದಿನ ಸರಾಸರಿ 50 ರಿಂದ 60 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗುತ್ತಿದೆ. ಈ ಯೋಜನೆಗೆ ವಾರ್ಷಿಕ 4000 ಕೋಟಿ ರೂ ವೆಚ್ಚ ಮಾಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ. ಈ ಯೋಜನೆಯು ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆಯಾಗಿದೆ. ಶಕ್ತಿ ಯೋಜನೆಯಡಿ ದೇವನಹಳ್ಳಿ ತಾಲ್ಲೂಕಿನಲ್ಲಿ ಬಿ.ಎಂ.ಟಿ.ಸಿ ಯಲ್ಲಿ ಯೋಜನೆ ಪ್ರಾರಂಭದಿಂದ ಇಲ್ಲಿಯ ತನಕ ಸುಮಾರು 6,91,292 ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಮೂಲಕ ಯೋಜನೆಯ ಲಾಭವನ್ನು ಪಡೆದುಕೊಂಡಿರುತ್ತಾರೆ.
ಗೃಹ ಲಕ್ಷ್ಮಿ ಯೋಜನೆ: ರಾಜ್ಯ ಸರ್ಕಾರದ ಮತ್ತೊಂದು ಮಹತ್ಮಕಾಂಕ್ಷಿ ಯೋಜನೆಯಾದ ಕುಟುಂಬದ ಯಜಮಾನಿಗೆ ಮಾಸಿಕ ರೂ.2000/- ನೀಡುವ ಗೃಹ ಲಕ್ಷ್ಮಿ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಲ್ಲಿಯ ತನಕ ಒಟ್ಟು 2,01,781 ಫಲಾನುಭವಿಗಳು ನೋಂದಣಿಯಾಗಿದ್ದು, ಸದರಿ ಫಲಾನುಭವಿಗಳ ಕುಟುಂಬಕ್ಕೆ ರೂ.2000/- ದಂತೆ ಮಾಸಿಕ ನೇರವಾಗಿ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗಿರುತ್ತದೆ. ಈ ಯೋಜನೆಯಡಿಯಲ್ಲಿ ದೇವನಹಳ್ಳಿ ತಾಲ್ಲೂಕಿನಲ್ಲಿ ಒಟ್ಟು 43,535 ಕುಟುಂಬಗಳು ನೋಂದಣಿಯಾಗುವುದರ ಮೂಲಕ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.
ಯುವ ನಿಧಿ: ಸರ್ಕಾರದ 5ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಯು ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ಪದವಿ ಮುಗಿಸಿ 180 ದಿನಗಳು ಆದರೂ ನಿರುದ್ಯೋಗಿಗಳಾಗಿರುವ ಪದವಿದರರಿಗೆ ಮಾಸಿಕ ರೂ.3000/- ಮತ್ತು ಡಿಪ್ಲೋಮಾ ಮಾಸಿಕ ರೂ.1500/- ಗಳನ್ನು 24 ತಿಂಗಳ ಅವಧಿಗೆ ನೀಡುವ ಯೋಜನೆಯಾಗಿದೆ.
ಈ ಯೋಜನೆಯಲ್ಲಿ ಜನವರಿ-12, 2024 ರಂದು ಶಿವಮೊಗ್ಗದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಚಾಲನೆ ನೀಡಿದರು. ಹಾಗೂ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಲ್ಲಿತನಕ ಒಟ್ಟು 1591 ನಿರುದ್ಯೋಗಿಗಳು ನೋಂದಣಿಯಾಗಿದ್ದು, ಇವರ ಬ್ಯಾಂಕ್ ಖಾತೆಗಳಿಗೆ ಅನುದಾನ ವರ್ಗಾಯಿಸಲು ಕ್ರಮವಹಿಸಲಾಗುತ್ತಿದೆ. ಈ ಯೋಜನೆಯಡಿ ದೇವನಹಳ್ಳಿ ತಾಲ್ಲೂಕಿನ 331 ನಿರುದ್ಯೋಗಿ ಪದವಿಧರರು ಹಾಗೂ ಡಿಪ್ಲೋಮಾ ರವರು ನೋಂದಾಯಿಸಿ ಕೊಂಡಿರುತ್ತಾರೆ.
ಸ್ವಾತಂತ್ರ್ಯದ ನಂತರ ಇಂದೆಂದು ಕಾಣದ ಅಭಿವೃದ್ಧಿಯ ಪರ್ವ ಆರಂಭವಾಗಿದೆ, ಕಾಂಗ್ರೆಸ್ ಸರ್ಕಾರದ ಮೇಲೆ ನಿಮ್ಮ ವಿಶ್ವಾಸ ವಿರಲಿ, ಸಾಮಾಜಿಕ ನ್ಯಾಯ ಸರ್ವರಿಗೂ ಸಮಪಾಲು ಎಂಬ ಸಂವಿಧಾನದ ಮೂಲ ಆಶಯದಂತೆ ನನ್ನ 40 ವರ್ಷದ ರಾಜಕಾರಣದ ಅನುಭವವನ್ನು ಈ ಕೇತ್ರದ ಅಭಿವೃದ್ಧಿಗೆ ಧಾರೆ ಎರೆದು ಸೇವೆ ಮಾಡಲು ಪಣತೊಟ್ಟಿದೇನೆ, ನೀವು ನಮ್ಮೊಂದಿಗೆ ನಡೆಯಿರಿ ಅಭಿವೃದ್ಧಿ ಹೊಂದಿರಿ ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಮಚಂದ್ರಪ್ಪ,ರಾಜಣ್ಣ,ಕಾಂಗ್ರೆಸ್ ಮುಖಂಡರು, ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕರಾದ ಶ್ರೀನಾಥ ಗೌಡ,ಮಹಿಳಾ ಫಲಾನುಭವಿಗಳು,ಉಪಸ್ಥಿತರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….