ಬಿಹಾರ, (ಜ.08); ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಬೇಡ ಎಂದು ಹೇಳಿದ ಗಂಡನನ್ನೇ ಪಾಪಿ ಪತ್ನಿಯೋರ್ವಳು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬಿಹಾರದ ಬೇಗುಸರಾಯ್ನಲ್ಲಿ ಭಾನುವಾರ ರಾತ್ರಿ ನಡೆದಿದೆ.
ಬಿಹಾರದ ಸಮಸ್ತಿಪುರ ನಿವಾಸಿ ಮಹೇಶ್ವರ್ ಕುಮಾರ್ ರೈ ಪತ್ನಿಯಿಂದ ಹತ್ಯೆಯಾದ ದುರ್ದೈವಿ.
ಈತ ಕಳೆದ ಏಳು ವರ್ಷಗಳ ಹಿಂದೆ ಬೇಗುಸರೈ ಗ್ರಾಮದ ನಿವಾಸಿ ರಾಣಿ ಎಂಬುವರನ್ನು ವಿವಾಹವಾಗಿದ್ದರು. ಈತ ಕೋಲ್ಕತ್ತಾದಲ್ಲಿ ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದ ಈ ವೇಳೆ, ಮನೆಯಲ್ಲಿರುತ್ತದ್ದ ಪತ್ನಿ ಸೋಷಿಯಲ್ ಮೀಡಿಯಾ ಗೀಳಿಗೆ ಬಿದ್ದಿದ್ದಳು.
ದಿನವಿಡೀ ರೀಲ್ಸ್ ಮಾಡೋದರಲ್ಲಿ ಕಾಲ ಕಳೆಯುತ್ತಿದ್ದಳು. ಕೆಲಸ ಮುಗಿಸಿ ಮನೆಗೆ ಬಂದ ಗಂಡ ಮಡದಿಯ ರೀಲ್ಸ್ ಹುಚ್ಚಿಗೆ ಬೇಸತ್ತು ಮಾಡಬೇಡ ಎಂದು ಬುದ್ಧಿವಾದ ಹೇಳಿದ್ದ ಎನ್ನಲಾಗಿದೆ.
ಇದರಿಂದ ಕುಪಿತಗೊಂಡ ಆಕೆ, ತನ್ನ ಮನೆಯವರ ಜೊತೆ ಸೇರಿ ಗಂಡನನ್ನು ಹತ್ಯೆ ಮಾಡಿದ್ದಾಳೆ. ಮೃತನ ಸಹೋದರ ಕರೆ ಮಾಡಿದ್ದು, ಕರೆ ಸ್ವೀಕರಿಸದೇ ಹೋದಾಗ ತಂದೆಗೆ ಕರೆ ಮಾಡಿದ್ದಾನೆ.
ಮೃತನ ತಂದೆ ಸ್ಥಳಕ್ಕೆ ಬಂದು ನೋಡಿದಾಗ ಕೊಲೆಯಾಗಿರುವುದು ಕಂಡುಬಂದಿದ್ದು, ತನಿಖೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….