ಮಧ್ಯಪ್ರದೇಶ, (ಜ.12): ಪತಿ ಪತ್ನಿ ನಡುವೆ ಭಿನ್ನಮತ ಮೂಡುವುದು ಸಹಜ, ಹೀಗೆ ಒಂದು ಕುಟುಂಬದಲ್ಲಿ ಲೈಂಗಿಕ ಗಲಾಟೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮಹತ್ವದ ತೀರ್ಪನ್ನು ನೀಡಿದೆ.
2006ರಲ್ಲಿ ಮದುವೆಯಾಗಿದ್ದ ಅರ್ಜಿದಾರನ ಪತ್ನಿಯು ಯಾವುದೇ ನಿರ್ದಿಷ್ಟ ಕಾರಣ ನೀಡದೆಯೇ ಪತಿಯೊಂದಿಗೆ ಸೆಕ್ಸ್ ನಡೆಸಲು ನಿರಾಕರಿಸಿದಳು.
ಕೌಟುಂಬಿಕ ನ್ಯಾಯಾಲಯದಲ್ಲಿ ತನ್ನ ಅರ್ಜಿ ತಿರಸ್ಕೃತವಾದ ಬಳಿಕ ಪತಿ ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ.
ಗಂಡನೊಡನೆ ಪತ್ನಿ ಸೆಕ್ಸ್ ಸಹಮತಿಸದೇ ಇರುವುದು ಕ್ರೌರ್ಯವಾಗಿದೆ. ಇದೇ ಕಾರಣಕ್ಕೆ ಗಂಡ ತನ್ನ ಪತ್ನಿಗೆ ಡಿವೋರ್ಸ್ ನೀಡಲು ಯಾವ ಅಡ್ಡಿಯೂ ಇಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.
ವಿವಾಹ ಎಂಬ ಬಂಧನವು ಶಾರೀರಿಕ ಸಂಬಂಧವನ್ನೂ ಸಹ ಒಳಗೊಂಡಿದೆ. ಇದನ್ನು ಒಪ್ಪಿಯೇ ಗಂಡು -ಹೆಣ್ಣು ಪರಸ್ಪರ ಮದುವೆಯಾಗುತ್ತಾರೆ.
ಯಾವುದೇ ದೈಹಿಕ ಅಸ್ವಸ್ಥತೆ ಇಲ್ಲದೇ ಬೇರಾವುದೋ ನೆಪವೊಡ್ಡಿ ಗಂಡನೊಡನೆ ಸೆಕ್ಸ್ ನಡೆಸಲು ನಿರಾಕರಿಸುವುದು ಮಾನಸಿಕ ಕ್ರೌರ್ಯಕ್ಕಿಂತ ಯಾವರೀತಿಯಲ್ಲಿಯೂ ಕಡಿಮೆಯಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಾಧೀಶರು, ಹಿಂದೂ ವಿವಾಹ ಕಾಯಿದೆಯ ಅನ್ವಯ ಪತಿಯು ಈ ಕಾರಣವನ್ನು ನೀಡಿ ಪತ್ನಿಯಿಂದ ವಿಚ್ಚೇದನ ಪಡೆಯಬಹುದು ಎಂದು ಹೇಳಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….