ಚಿಕ್ಕಬಳ್ಳಾಪುರ, (ಸೆ.11): ಚಿಂತಾಮಣಿ ನಗರ ಭಾಗದಲ್ಲಿ ಇತ್ತೀಚಿಗೆ ಎಟಿಎಂ ಕದ್ದು ಕಳ್ಳತನ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಯಸ್ಸಾದವರು ಹಾಗೂ ಮಹಿಳೆಯರ ಬಳಿ ಎ ಟಿ ಎಂ ನಿಂದ ಹಣ ತೆಗೆದುಕೊಡುವ ನೆಪದಲ್ಲಿ, ಎಟಿಎಂ ಕಾರ್ಡನ್ನು ಅದಲು ಬದಲು ಮಾಡಿ ಹಣ ದೋಚುತ್ತಿದ್ದ ಕಳ್ಳನನ್ನು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಂಗಶಾಮಯ್ಯ ನೇತೃತ್ವದಲ್ಲಿ ಬಂಧಿಸಲಾಗಿದೆ.
ಚಿಂತಾಮಣಿ ತಾಲೂಕಿನ ಮುಂಗಾನಹಳ್ಳಿ ಹೋಬಳಿ ಬಟ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಮುಷ್ಟೂರು ಪಟ್ಟಣ ಗ್ರಾಮದ ಖಾಸಗಿ ಬಸ್ ಕ್ಲೀನರ್ಗುರುಮೂರ್ತಿ ಬಂಧಿತ ವ್ಯಕ್ತಿ.
ಗುರುಮೂರ್ತಿ ಎಟಿಎಂ ಬಳಿ ನಿಂತಿಕೊಂಡು ತಾನು ಹಣ ಡ್ರಾಮಾಡಲು ಬಂದಿರುವಂತೆ ನಟಿಸುತ್ತಾ, ಗ್ರಾಮೀಣ ಭಾಗದ ಜನತೆ ಎಟಿಎಂನಿಂದ ಹಣ ಡ್ರಾ ಮಾಡಲು ಬಂದಾಗ ಅವರಿಗೆ ಎಟಿಎಂನಿಂದ ಹಣ ತೆಗೆದು ಕೊಡುವುದಾಗಿ ಹೇಳಿ ಯಾಮಾರಿಸಿ ಹಣವನ್ನು ದೋಚಿ ಅಲ್ಲಿಂದ ಪರಾರಿಯಾಗುತ್ತಿದ್ದ.
ನಗರದ ಎನ್.ಅರ್ ಬಡಾವಣೆಯಲ್ಲಿರುವ ಎಟಿಎಂನಲ್ಲಿ ಮೇನಲ್ಲಿ ರಾಮಪುರದ ವ್ಯಕ್ತಿಗೆ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ 27000 ರು. ಗಳನ್ನು ವಂಚಿಸಿದ್ದ ಆರೋಪದ ಮೇಲೆ ಗುರುಮೂರ್ತಿಯನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿತ್ತು.
ಆದರೆ ಸೆ.8ರಂದು ಗುರುವಾರ ಜೈಲಿನಿಂದ ಬಿಡುಗಡೆಯಾಗಿದ್ದ ಗುರುಮೂರ್ತಿ, ಭಾನುವಾರ ಬೆಳಗ್ಗೆ ಪುನಃ ವ್ಯಕ್ತಿಯೊಬ್ಬರಿಗೆ ಎಟಿಎಂ ಕಾರ್ಡ್ ಅದಲು ಬದಲು ಮಾಡಿ ಹಣ ಎಗಿರಿಸಿದ್ದಾನೆ. ಹಣ ಕಳೆದು ಕೊಂಡ ವ್ಯಕ್ತಿ ನಗರ ಠಾಣೆಗೆ ದೂರು ನೀಡಿದಾಗ, ನಗರ ಠಾಣೆಯ ಪೊಲೀಸರು ಸಿಸಿ ಟಿವಿ ಕ್ಯಾಮೆರಾ ಫೂಟೇಜ್ ವೀಕ್ಷಿಸಿ ಗುರುಮೂರ್ತಿಯನ್ನು ಬಂಧಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….