ಕಲಬುರಗಿ, (ಸೆ.11): ತಾವು ಯಾವುದೇ ಧರ್ಮದ ವಿರೋಧಿಯಲ್ಲ ಎಂದಿರುವ ಬಹುಭಾಷಾ ನಟ ಪ್ರಕಾಶ ರೈ ತಾವು ಜನರನ್ನು ಪ್ರೀತಿಸುವ ಮನುಷ್ಯ ಎಂದು ಹೇಳಿಕೊಂಡಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಧರ್ಮದ ವಿರುದ್ಧ ಅಲ್ಲ, ನಾವು ಧರ್ಮದ ಬಗ್ಗೆ ಮಾತಾಡುತ್ತಿಲ್ಲ. ರಾಜಕಾರಣಿಗಳೆನು ಧರ್ಮ ಗುತ್ತಿಗೆ ಪಡೆದಿದ್ದಾರಾ? ಎಂದು ಖಾರವಾಗಿ ಪ್ರಶ್ನಿಸುತ್ತಲೇ ತಮ್ಮನ್ನು ಜನರನ್ನು ಪ್ರೀತಿಸುವ ಮನುಷ್ಯ, ರೋಗ ಅವರಿಗಿದೆ ತಮಗಲ್ಲ ಎಂದರು.
ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲೀನ್ ಹೇಳಿಕೆ ವಿಚಾರವಾಗಿ ಸ್ಪಂದಿಸಿದ ಪ್ರಕಾಶ ರೈ ಸ್ಟಾಲೀನ್ ಮಾತಾಡಿದ್ದು ತಪ್ಪೇನಿದೆ? ಅಸ್ಪೃಶ್ಯತೆ ಹೋಗಬೇಕು ಇಲ್ಲವೋ?, ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನ ತಿರುಚಲಾಗಿದೆ ಎಂದರು.
ಜಾತಿ ವಿವಾದ ಹುಟ್ಟು ಹಾಕ್ತಿರೋರಿಗೆ ಕೆಲಸ ಇಲ್ವಲ್ಲ ಅದಕ್ಕೆ ಈ ರೀತಿ ಮಾಡ್ತಿದ್ದಾರೆ. ನಾನು ನನ್ನ ಪ್ರತಿಭೆ ಯಿಂದ ಬೆಳೆದಿಲ್ಲ, ಜನರ ಪ್ರೀತಿಯಿಂದ ನಾನು ಬೆಳೆದಿ ದೇನೆ, ಜನರಿಗಾಗಿ ನಾನು ಧ್ವನಿ ಎತ್ತಲೇಬೇಕು ತಾನೆ? ಆ ಕೆಲಸ ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದರ ಲ್ಲದೆ ತಮ್ಮನ್ನು ಒಬ್ಬ ಜನಪರ ವ್ಯಕ್ತಿ ಎಂದು ಹೇಳಿಕೊಂಡ ರೈ ತಾವು ನಾನು ರಾಜಕೀಯ ವ್ಯಕ್ತಿ ಅಲ್ಲ ಎಂದರು.
ಜೈ ಶ್ರೀರಾಮ ಎಂದು ಮೆರವಣಿಗೆಯಲ್ಲಿ ಯುವ ಕರು ಕೈಯಲ್ಲಿ ಕತ್ತಿ ಹಿಡಿದುಕೊಂಡು ಓಡಾಡ್ತಾರೆ ಅಂದ್ರೆ ಏನರ್ಥ? ಅವರವರ ಧರ್ಮ, ಅವರವರ ನಂಬಿಕೆ ಅವರಿಗೆ ಬಿಟ್ಟಿದೆ, ಆದ್ರೆ ಎಲ್ಲರೂ ಚೆನ್ನಾಗಿರಬೇಕು ತಾನೆ..? ಬಸವಣ್ಣ, ಅಂಬೇಡ್ಕರ್ ಅವರು ಹೇಳಿದ್ದು ಭಾ ಷಣಕ್ಕಾಗಿ ಅಲ್ಲ, ಅವನ್ನೆಲ್ಲವನ್ನೂ ಜೀವನಕ್ಕೆ ಅಳವಡಿಸಿ ಕೊಳ್ಳೋದೇ ನಿಜ ಜೀವನ. ಅದನ್ನು ಬಿಟ್ಟು ಬೇಕಾಬಿಟ್ಟಿ ಮಾಡೋದಂದ್ರೆ ಹೇಗೆಂದು ಪ್ರಶ್ನಿಸಿದರು.
ಕೋಮು ಗಲಭೆಯಿಂದ ಹಾನಿ ಆಗ್ತಿರೋದು ಯಾರಿಗೆ ಹೆಣ್ಣು ಮಕ್ಕಳಿಗೆ, ನಾವೇ ಸಮಸ್ಯೆ ಅನುಭವಿಸಬೇಕು. ಅವರು ವಿಶ್ವಗುರು ಆಗಲಿ, ನಾವು ವಿಶ್ವ ಮಾನವ ಆಗೋಣ ಎಂದ ನಟ ಪ್ರಕಾಶ್ ರೈ ಪರೋಕ್ಷವಾಗಿ ಪ್ರಧಾನಿ ಮೋದಿ ಹೆಸರೆತ್ತದೇ ತಿವಿದರು.
ನಂತರದಲ್ಲಿ ನಡೆದ ಸಂವಾದದಲ್ಲಿಯೂ ಪ್ರಕಾಶ ರೈ ಯಾವುದೇ ಧರ್ಮ ಕೆಡಕನ್ನು ಹೇಳೋದಿಲ್ಲ, ಅದನ್ನು ಆಚರಿಸುವವರ ಕೈಗೆ ಸಿಲುಕಿ ವಿಕೃತಿಯಾಗುತ್ತಿದೆ. ಎಲ್ಲಾ ಧರ್ಮಗಳಲ್ಲೂ ವಿಕೃತಿ ಇದೆ. ಅದು ಸರಿಹೋಗಲೇಬೇಕು. ವೈಜ್ಞಾನಿಕ ಮನೋಭಾವನೆ ಅಲ್ಲಿ ಮೂಡಬೇಕು. ಆ ಕೆಲಸ ಎಲ್ಲರೂ ಸೇರಿಕೊಂಡು ಮಾಡಬೇಕೆ ಹೊರತು ಒಬ್ಬರಿಂದ ಆಗೋ ಕೆಲಸ ಇದ್ದಲ್ಲ ಎಂದರು.
ಸಂವಾದದುದ್ದಕ್ಕೂ ಪ್ರಧಾನಿ ಮೋದಿ, ಸಂಘ ಪರಿವಾರದ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಅವರನ್ನೇ ತಿವಿದರು. ಚಡ್ಡಿ ಹಾಕಿಕೊಂಡವರಿಗೆ ದೇಶ ಕಾಣೋದಿಲ್ಲ. ಗಾಯಗಾಳು ಕಾಣೋದಿಲ್ಲವೆಂದ ರಲ್ಲದ ವಿಶ್ವಗುರುವಿಗೆ ಯಾರು ಹೇಳಬೇಕು ಇದನ್ನೆಲ್ಲ ಎಂದು ಮೋದಿಯವರನ್ನು ತಿವಿದರು.
ತಾವು ಕಳೆದ ಹಲವು ವರುಷಗಳಿಂದ ರಾಜಕಾರಣ ಬಲು ಹತ್ತಿರಿದಂದ ನೋಡುತ್ತಿರೋದಾಗಿ ಹೇಳಿದರಲ್ಲ ದೆ ಯಾರನ್ನೂ ನಂಬುವ ಸ್ಥಿತಿಯಲ್ಲಿಲ್ಲ. ಅದಕ್ಕೆ ರಾಜಕಾರಣ ತಾವು ಸೇರಿಲ್ಲ ಎಂದರಲ್ಲದೆ ರಾಜಕೀಯ ಪಕ್ಷಗಳೆಲ್ಲವೂ ತುಷ್ಟಿಕರಣ ರಾಜಕಾರಣ ಮಾಡಿಕೊಂ ಡು ಬಂದು ಜಾತೀಯತೆ ಪೋಷಿಸುತ್ತಿವೆ. ಹೀಗಾಗಿ ಇವರನ್ನು ಕಂಜರೆ ತಮಗೆ ಆಗಿಬರೋದಿಲ್ಲವೆಂದರು.
ಇವನ ಬಿಲ್ಡಿಂಗ್ನಲ್ಲಿ ಅವನ ಬಾರ್ ಇದೆ, ಅವನ ಕಲ್ಯಾಣ ಮಂಟಪದಲ್ಲಿ ಇವನ ಮದುವೆಯಾಗುತ್ತದೆ. ಎಲ್ಲರೂ ಹೊರಗಡೆ ಭಿನ್ನ, ಒಳಗೊಳಗೇ ತುಷ್ಟಿಕರಣ ವಿಚಾರ ಬಂದಾಗ ಇವರೆಲ್ಲರೂ ರಾಜಕಾರಣಿಗಳು, ರಾಜಕೀಯ ಪಕಗಲು ಒಂದೇ. ಹೀಗಾಗಿ ನಾನು ಆ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ನನಗೆ ದೇಶ ಮುಖ್ಯ. ಮುಂದಿನ ಪೀಳಿಗೆಯ ಭವಿಷ್ಯ ಮುಖ್ಯ. ಅದಕ್ಕೇ ಜನರಿಂದ ಬೆಳೆದ ನಾನು ಜನರೊಂದಿಗೇ ಇದ್ದು ಕೆಲಸ ಮಾಡುವ ಹಂಬಲದವನು ಎಂದರು.
ತಾವು ಕಟ್ಟಿರುವ ನಿದಿರ್ಗಗಂತ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರಸ್ತುತ ವಿಷಯಗಳ ನಾಟಕಗಳನ್ನೇ ಆಡಿಸುತ್ತ ಜನಾಂದೋಲನ ರೂಪಿಸುವ ಚಿಂತನೆ ತಮ್ಮದೆಂದು ಪ್ರಕಾಶ ರೈ ಹೇಳಿದರು.
ದೇಶದಲ್ಲಿ ಕೆಲವರು ಡೋಂಗಿ ರಾಷ್ಟ್ರೀಯತೆ ವಾದ ಬಿತ್ತುತ್ತಿದ್ದಾರೆ. ತಾವು ಹೇಳಿದ್ದೇ ನಿಜವೆಂದು ನಂಬಿಸುತ್ತಿ ದ್ದಾರೆ. ಜನ ಇದನ್ನರಿತು ಜಾಗೃತರಾಗಬೇಕಿದೆ. 2014ರಿಂದ ತಾವು ಇದನ್ನೇ ಹೇಳುತ್ತಿದ್ದರೂ ಜನ ಇನ್ನೂ ತಿಳಿದುಕೊಳ್ಳುತ್ತಿಲ್ಲ. ಹಾಗೇ ಹೇಳುತ್ತಲೇ ಹೋಗಬೇಕು. ಜನರ ನಂಬಿಯ ನಾಯಕ ಬರುತ್ತಾನೆಂಬ ಆಶಯ ತಮ್ಮದು ಎಂದು ರೈ ಹೇಳಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….