ಹರಿತಲೇಖನಿ ದಿನಕ್ಕೊಂದು ಕಥೆ: ದೇವಾಲಯಗಳ ಮುಂದಿನ ಧ್ವಜಸ್ತಂಭಗಳ ಮಹತ್ವ

ಮಣಿಪುರದ ದೊರೆ, ಮಯೂರ ಧ್ವಜ. ಅವನು ಮಹಾ ಪರಾಕ್ರಮಿ ಮತ್ತು ಮಹಾನ್ ಪರೋಪಕಾರಿ. ಮಯೂರ ಧ್ವಜನು ಪಾಂಡವರ ಯಾಗದ ಕುದುರೆಯನ್ನು ಕಟ್ಟಿ ಹಾಕಿದನು.  ಕೋಪಗೊಂಡ ಪಾಂಡುಪುತ್ರರು ಮಯೂರ ಧ್ವಜನೊಂದಿಗೆ ಯುದ್ಧಕ್ಕೆ ಹೋಗುತ್ತಾರೆ.

ಅವರೆಲ್ಲರನ್ನೂ ತನ್ನ ಪರಾಕ್ರಮದಿಂದ ಮಯೂರ ಧ್ವಜನು ಸೋಲಿಸುತ್ತಾನೆ. ತನ್ನ ಸಹೋದರರ ಸೋಲಿನ ಬಗ್ಗೆ ತಿಳಿದ ಧರ್ಮರಾಜನು ಸ್ವತಃ ತಾನೇ ಮಣಿಪುರಕ್ಕೆ ಹೊರಡುತ್ತಾನೆ. ಅದನ್ನು ಅರಿತ ಕೃಷ್ಣ ಧರ್ಮರಾಜನನ್ನು ತಡೆಯುತ್ತಾನೆ.  ಮಯೂರಧ್ವಜನ ಪರಾಕ್ರಮದ ಅರಿವಿದ್ದ ಕೃಷ್ಣನು ಅವನನ್ನು ಗೆಲ್ಲಲು ಕುಟಿಲೋಪಾಯವೊಂದನ್ನು ಹೇಳುತ್ತಾನೆ.

ಪಥಕದ ಪ್ರಕಾರ, ಶ್ರೀಕೃಷ್ಣ ಮತ್ತು ಧರ್ಮರಾಜ ಇಬ್ಬರೂ ವೃದ್ಧ ಬ್ರಾಹ್ಮಣರ ರೂಪದಲ್ಲಿ ಮಣಿಪುರವನ್ನು ತಲುಪುತ್ತಾರೆ.. ಅವರುಗಳನ್ನು ಕಂಡ ಮಯೂರಧ್ವಜ ಅವರನ್ನು ಆಹ್ವಾನಿಸಿ ಅವರಿಗೆ ದಾನ ನೀಡಲು ಬಯಸಿ, ಅವರು ಬಯಸಿದ್ದನ್ನು ನೀಡುವುದಾಗಿ ತಿಳಿಸಿದನು.

ಆಗ ಶ್ರೀಕೃಷ್ಣನು ಹೇಳಿದನು, “ಮಹಾರಾಜ! ನಾವು ನಿಮ್ಮನ್ನು ನೋಡಲು ಬರುತ್ತಿರುವಾಗ. ದಾರಿಯಲ್ಲಿ ಅರಣ್ಯ ಮಾರ್ಗದಲ್ಲಿ ದುರದೃಷ್ಟವಶಾತ್  ಪ್ರಾಣಿರಾಜ ಸಿಂಹವೊಂದು ಈತನ ಮಗನ ಮೇಲೆ ದಾಳಿ ಮಾಡಿತು, ಈ ಹಠಾತ್ ಘಟನೆಯಿಂದ ನಾವು ತುಂಬಾ ಚಿಂತಿತರಾಗಿದ್ದೆವು. ಮತ್ತು ಆ ಮಗನನ್ನು ಉಳಿಸಲು ನಾವು ಮೃಗರಾಜನನ್ನು ಪ್ರಾರ್ಥಿಸಿದೆವು.

ಆಗ ಮೃಗರಾಜು ಮಾನವ ಭಾಷೆಯಲ್ಲಿ ವಿಚಿತ್ರವಾಗಿ ಮಾತಾಡಿದನು. “ನಿಮಗೆ ಈ ಹುಡುಗ ದಕ್ಕಬೇಕೆಂದರೆ ಮಣಿಪುರದ ದೊರೆ ಮಯೂರಧ್ವಜುವಿನ ಅರ್ಧ ದೇಹವನ್ನು ನನಗೆ ಆಹಾರವಾಗಿ ಕೊಡಿಸಿ.” ಎಂದು ಕೇಳಿದನು. ಉದಾರಿಗಳಾದ ತಾವು ಕರುಣೆ ತೋರಿ ತಮ್ಮ ಅರ್ಧ ದೇಹವನ್ನು ದಾನ ಮಾಡಿದರೆ, ಆ ಗಂಡು ಮಗುವನ್ನು ಉಳಿಸಿಕೊಳ್ಳುತ್ತೇವೆ.. ಭವಿಷ್ಯ ಇರುವ ಗಂಡುಮಗು…’’ ಎಂದು ದೈನ್ಯತೆಯಿಂದ ಕೃಷ್ಣ ನುಡಿದನು. ಆ ಮಾತುಗಳನ್ನು ಕೇಳಿದ ಮಯೂರಧ್ವಜನು ಯಾವುದೇ ಹಿಂಜರಿಕೆಯಿಲ್ಲದೆ ಬಾಲಕನ ಜೀವ ಉಳಿಸಲು ತನ್ನ ದೇಹವನ್ನು ದಾನ ಮಾಡಲು ಒಪ್ಪುತ್ತಾನೆ.

ಆಗ ಶ್ರೀಕೃಷ್ಣನು “ನಿನ್ನ ಹೆಂಡತಿ ಮಕ್ಕಳೇ ನಿನ್ನ ದೇಹವನ್ನು ಕತ್ತರಿಸಬೇಕು” ಎಂಬ ನಿಯಮವನ್ನೂ ವಿಧಿಸುತ್ತಾನೆ.  ಅದಕ್ಕೂ ಮಯೂರ ಧ್ವಜ ಹಿಂಜರಿಯದೆ ಅತಿಥಿದೇವೋಭವ ಎಂದು ಗೌರವಿಸಿ ಆತನ ದೇಹಕ್ಕೆ ಪತ್ನಿ ಮತ್ತು ಮಗನಿಂದಲೇ ತನ್ನ ದೇಹ ತುಂಡರಿಸುವ ಸೂಕ್ತ ವ್ಯವಸ್ಥೆ ಮಾಡಿ ಪತ್ನಿ,ಮಗನನ್ನು ಕರೆಸಿ ತ್ಯಾಗಕ್ಕೆ ಸಿದ್ಧನಾಗಿ ಕುಳಿತನು. ಮಯೂರಧ್ವಜುವಿನ ಹೆಂಡತಿ, ಮಗನು ಭಾರವಾದ ಹೃದಯದಿಂದ ಆದೇಶಿಸಿದ ಕಾರ್ಯಕ್ಕೆ ಬಲಭಾಗದಿಂದ ತಯಾರಾಗುತ್ತಾರೆ.

ದಾನ ಶ್ರೇಷ್ಠನಾದ ಧರ್ಮರಾಜನೂ ಸಹ ಮಯೂರಧ್ವಜನ ದಾನಶೀಲತೆಗೆ ಬೆರಗಾಗುತ್ತಾನೆ.! ಅಷ್ಟರಲ್ಲಿ ಮಯೂರಧ್ವಜುವಿನ ಎಡಗಣ್ಣಿನಿಂದ ನೀರು ಬರುತ್ತಿರುವುದನ್ನು ಧರ್ಮರಾಜ ಗಮನಿಸುತ್ತಾನೆ. ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿ,,ಕಣ್ಣೀರು ಸುರಿಸುತ್ತಾ ನೀಡುವ ದಾನ ನಮಗೆ ಬೇಡ’ ಎನ್ನುತ್ತಾರೆ.

ಅದಕ್ಕೆ ಮರುಪ್ರತಿಕ್ರಿಯಿಸಿದ ಮಯೂರಧ್ವಜ “ಮಹಾತ್ಮ! ನೀನು ತಪ್ಪಾಗಿ ಭಾವಿಸಿರುವೆ. ನಾನು ದುಃಖ ಮತ್ತು ನೋವಿನಲ್ಲಿ ನನ್ನ ದೇಹವನ್ನು ನಿನಗೆ ಕೊಡುತ್ತಿಲ್ಲ. ನನ್ನ ಬಲಭಾಗಕ್ಕೆ ಪರೋಪಕಾರದ ಭಾಗ್ಯ ಸಿಕ್ಕಿದೆ… ನನಗೆ ಆ ಸೌಭಾಗ್ಯ ಸಿಗಲಿಲ್ಲವಲ್ಲ ಎಂಬ ಕಾರಣದಿಂದ  ಎಡಗಣ್ಣು ನರಳುತ್ತಿದೆ” ಎಂದು ವಿವರಿಸುತ್ತಾನೆ.

ಇದನ್ನು ಕೇಳಿದ ಕೃಷ್ಣ ಮತ್ತು ಧರ್ಮರಾಜರಿಗೆ ಬಹಳ ಆಶ್ಚರ್ಯವಾಯಿತು.  ಮಯೂರಧ್ವಜನ ದಾನ ಶೀಲ ಗುಣಕ್ಕೆ ಮಾರುಹೋಗುತ್ತಾರೆ,  ಅವರು ತಕ್ಷಣ ತಮ್ಮ ನಿಜವಾದ ರೂಪವನ್ನು ತೋರಿಸುತ್ತಾರೆ.

ಶ್ರೀಕೃಷ್ಣನು ಮಯೂರಧ್ವಜನಿಗೆ ಕೇಳುತ್ತಾನೆ “ನಿನ್ನ ಔದಾರ್ಯವನ್ನು ಮೆಚ್ಚುತ್ತೇನೆ, ನಿನಗೆ ಯಾವ ವರ ಬೇಕು?” ಮಯೂರಧ್ವಜನು ಮಹಾನ್ ವ್ಯಕ್ತಿಗಳ ನಿಜವಾದ ರೂಪಗಳನ್ನು ನೋಡಿದನು “ಓ ಭಗವಂತ! ನನ್ನ ಈ ದೇಹ ಅಶಾಶ್ವತ.. ಕಾಲಕ್ರಮದಲ್ಲಿ ಈ ದೇಹ ಅಳಿದು ಹೋದರೂ ನನ್ನ ಆತ್ಮವು ಪರೋಪಕಾರಕ್ಕೆ (ಇನ್ನೊಬ್ಬರ ಸಹಾಯಕ್ಕೆ) ಬರುವಂತಾಗಲಿ ಮತ್ತು ನಾನು ಸದಾ ನಿನ್ನ ಮುಂದೆಯೆ ಇರುವಂತೆ ಆಶೀರ್ವದಿಸು” ಎಂದು ಕೋರುತ್ತಾನೆ.

ಆಗ ಶ್ರೀಕೃಷ್ಣ ಆಶೀರ್ವದಿಸಿ. “ತಥಾಸ್ತು”,ಇಂದಿನಿಂದ ಜಗತ್ತಿನ ಪ್ರತಿಯೊಂದು ದೇವಾಲಯದ ಮುಂದೆ ನಿನ್ನ ಹೆಸರಿನ ಧ್ವಜಸ್ತಂಭಗಳು ನಿನ್ನ ಪ್ರತೀಕವಾಗಿ ಮೂಡುತ್ತವೆ(ಇರುತ್ತವೆ). ಅವುಗಳನ್ನು ಆಶ್ರಯಿಸುವ ನಿನ್ನ ಆತ್ಮವು ಪರಮಾತ್ಮನ ಸನ್ನಿಧಿಯಲ್ಲಿ ಶಾಶ್ವತವಾಗಿ ಉಳಿಯುತ್ತದೆ.

ಮೊದಲು ನಿನ್ನನ್ನು ದರ್ಶಿಸಿ, ಪ್ರದಕ್ಷಿಣೆ ನಮಸ್ಕಾರ ಮಾಡಿದ ನಂತರವೆ ಜನರು ಗುಡಿಯಲ್ಲಿರುವ ದೇವರನ್ನು ಭೇಟಿ ಮಾಡುತ್ತಾರೆ.  ನಿಮ್ಮ ತಲೆಯ ಮೇಲೆ ಇಟ್ಟ ದೀಪವು ರಾತ್ರಿಯಲ್ಲಿ ದಾರಿಹೋಕರಿಗೆ ಮಾರ್ಗದರ್ಶನ ನೀಡುತ್ತದೆ ಎಂದು ಆಶೀರ್ವದಿಸುತ್ತಾನೆ.

ಅದಕ್ಕಾಗಿಯೇ ದೇವಾಲಯಗಳ ಮುಂದೆ ಧ್ವಜಸ್ತಂಭಗಳನ್ನು ಸ್ಥಾಪಿಸುವುದು ಅಂದಿನಿಂದಲೂ ರೂಢಿಯಲ್ಲಿದೆ. ಇಂತಹ ಮಹಾನುಭಾವಿ, ತ್ಯಾಗಪುರುಷ ಮಯೂರಧ್ವಜನ ಪ್ರತೀಕವಾಗಿರುವ ಧ್ವಜಸ್ತಂಭಗಳ ನೆರಳು ಕೂಡ ತಮ್ಮ ಮನೆಗಳ ಮೇಲೆ ಬೀಳಬಾರದು ಎಂದು ಹೇಳುವುದು ಆ ಮಹಾನ್ ವ್ಯಕ್ತಿಗೆ ಅಪಚಾರವಾಗಿದ್ದು, ಇದು ಬರೀ ಮೂಢ ನಂಬಿಕೆಯಾಗಿರಬಹುದು ಎನಿಸುತ್ತದೆ.

ಸಂಗ್ರಹ ವರದಿ: ನರಸಿಂಹಮೂರ್ತಿ ಬರಗೂರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ನನ್ನ ಆಯಸ್ಸನ್ನು ಭಗವಂತ ನನ್ನ ತಂದೆಗೆ ಧಾರೆ ಎರಿಬೇಕು; ನಿಖಿಲ್‌ ಕುಮಾರಸ್ವಾಮಿ

ನನ್ನ ಆಯಸ್ಸನ್ನು ಭಗವಂತ ನನ್ನ ತಂದೆಗೆ ಧಾರೆ ಎರಿಬೇಕು; ನಿಖಿಲ್‌ ಕುಮಾರಸ್ವಾಮಿ

ಕುಮಾರಣ್ಣ ಆರೋಗ್ಯ ಸರಿ ಇಲ್ಲ ಅಂತ ರಾಜ್ಯದಲ್ಲೆಡೆ ಚರ್ಚೆಗಳು ಶುರುವಾಗಿದೆ, ಅವರ ತಂದೆ ತಾಯಿ ಆಶೀರ್ವಾದ, ಭಗವಂತನ ಕೃಪೆ, ನಿಮ್ಮೆಲ್ಲರ ಪ್ರೀತಿಯ ಹಾರೈಕೆಯಿಂದ ಕುಮಾರಣ್ಣ ಆರೋಗ್ಯವಾಗಿದ್ದಾರೆ: ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="113069"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ಮತ್ತೊಂದು ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಸಾಗುತ್ತಿದ್ದ ಯುವಕನ ಮೇಲೆರಗಿದ (Accident) ಲಾರಿ, ಸ್ಥಳದಲ್ಲಿಯೇ ಬಲಿ ಪಡೆದಿರುವ ಘಟನೆ

[ccc_my_favorite_select_button post_id="113040"]

ಆರೋಗ್ಯ

ಸಿನಿಮಾ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ದಿ ಡೆವಿಲ್ ಸಿನಿಮಾದ 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

[ccc_my_favorite_select_button post_id="113046"]
error: Content is protected !!