ದೊಡ್ಡಬಳ್ಳಾಪುರ, (ಸೆ.16); ನಗರದ ದೇವರಾಜ ನಗರದಲ್ಲಿ ಮನೆಯ ಆವರಣದಲ್ಲಿ ಕಟ್ಟಿ ಹಾಕಿದ್ದ ನಾಲ್ಕು ಹಸುಗಳನ್ನು ಒಂದೇ ಬಾರಿ ಕಳವು ಮಾಡಿರುವ ಘಟನೆ ನಡೆದಿದೆ.
ದೇವರಾಜ ನಗರದಲ್ಲಿ ವಾಸವಾಗಿರುವ ಮಲ್ಲಿಕಾರ್ಜುನ್ ಅವರ ಮನೆಯಲ್ಲಿ ಸೋಮವಾರ ತಡರಾತ್ರಿಯಲ್ಲಿ, ಮನೆಯ ಮುಂಭಾಗ ಕಟ್ಟಿರುವ ಹಸುಗಳನ್ನು ರಾತ್ರಿ ವೇಳೆ ಕದ್ದು ಪರಾರಿಯಾಗಿದ್ದಾರೆ. ಎಷ್ಟು ಹುಡುಕಿದರೂ ಹಸುಗಳು ಸಿಗದೇ ಇದ್ದುದರಿಂದ, ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಹಸುಗಳ ಹಾಲಿನಿಂದ ಜೀವನ ಸಾಗಿಸುತ್ತಿದ್ದ ಕುಟುಂಬದಲ್ಲಿ, ಲಕ್ಷಾಂತರ ರೂ ಬೆಲೆ ಬಾಳುವ ಹಸುಗಳು ಕಳುವಾಗಿರುವ ಘಟನೆ ಕಂಗಾಲಾಗುವಂತೆ ಮಾಡಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….<!–