ಬೆಂಗಳೂರು: ವಿಶ್ವವಿಖ್ಯಾತ ನಂದಿಗಿರಿಧಾಮದ ಪ್ರಕೃತಿ ಸೊಬಗು, ಸೌಂದರ್ಯ ನೊಡೋದೆ ಚೆಂದ, ಅಂತಹದ್ರಲ್ಲಿ ಆಗಸದಲ್ಲಿ ಹಕ್ಕಿಯಂತೆ ಹಾರಾಟ ಮಾಡ್ತಾ ಇಡೀ ನಂದಿಬೆಟ್ಟವನ್ನ ನೋಡೋ ಅವಕಾಶ ಸಿಕ್ರೆ ಹೇಗಿರಬೇಡ.. ಇಂತಹದೊಂದು ಅವಕಾಶ ಈಗ ಪ್ರವಾಸಿಗರ ಪಾಲಿಗೆ ಸಿಗುತ್ತಿದೆ.
ನಂದಿಬೆಟ್ಟದಲ್ಲಿ ಪ್ಯಾರಾಗ್ಲೈಡಿಂಗ್ ಆರಂಭವಾಗಿದೆ. ಹೌದು ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದ ಮೇಲೆ ಖಾಸಗಿ ಸಂಸ್ಥೆಯೊಂದು ಪ್ರವಾಸಿಗರಿಗೆ ಪ್ಯಾರಾಗ್ಲೈಂಡಿಂಗ್ ಮಾಡಲು ಅವಕಾಶ ಕಲ್ಪಿಸಿದೆ.
ಇದ್ರಿಂದ ನಂದಿಬೆಟ್ಟಕ್ಕೆ ಬರ್ತಿರೋ ಪ್ರವಾಸಿಗರು ಹಕ್ಕಿಯಂತೆ ಆಗಸದಲ್ಲಿ ತೇಲಾಡುವ ಮೂಲಕ ನಂದಿಗಿರಿಧಾಮದ ಸೌಂದರ್ಯವನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ.

ಪ್ಯಾರಾಗ್ಲೈಂಡಿಗ್ ಮಾಡಲು ಇಚ್ಚೆ ಪಡುವ ಪ್ರವಾಸಿಗರ ಬಳಿ ತಲಾ 4600 ರೂಪಾಯಿ ಪಡೆದು ಪ್ಯಾರಾಗ್ಲೈಡಿಂಗ್ ಗೆ ಅವಕಾಶ ನೀಡಲಾಗುತ್ತಿದೆ. ಇನ್ನೂ ಪ್ರತಿದಿನ ನಂದಿಗಿರಿಧಾಮದ ಮೇಲೆ ಪ್ಯಾರಾಗ್ಲೈಂಡಿಂಗ್ ಮಾಡಬಹುದಾಗಿದೆ.
ಪ್ರವಾಸಿಗರು ತಲಾ ನಾಲ್ಕು ಸಾವಿರದ ಆರು ನೂರು ರೂಪಾಯಿ ಫೀಸ್ ನೀಡಿ ಹತ್ತರಿಂದ 15 ನಿಮಿಷಗಳ ಕಾಲ ಹಕ್ಕಿಯಂತೆ ಆಕಾಶದಲ್ಲಿ ಹಾರಾಡಬಹುದಾಗಿದೆ.
ಆಕಾಶದಿಂದ ಗಿರಿಧಾಮಗಳ ಸಾಲು ನಂದಿಗಿರಿಧಾಮ ನೋಡುವುದೆ ಒಂಥರ ಚಂದ ಅಂತಾರೆ ಪ್ರವಾಸಿಗರು. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಪ್ಯಾರಾಗ್ಲೈಂಡಿಂಗ್ ದೃಶ್ಯಗಳನ್ನು ನೋಡಿ ಆಕರ್ಷಣೆಗೆ ಒಳಗಾಗ್ತಿರುವ ಪ್ರವಾಸಿಗರು, ಪ್ರತಿದಿನ ಬೆಂಗಳೂರಿನಿಂದ ಆಗಮಿಸಿ ಪ್ಯಾರಾಗ್ಲೈಂಡಿಂಗ್ ಮಾಡುತ್ತಿದ್ದು ಅದ್ಬುತ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ.