ರಾಯಚೂರು: ನಮ್ಮ ಮನೆ ಬಳಿ ಯಾಕೆ ಪಟಾಕಿ ಹಚ್ಚುತ್ತೀರಿ ಎಂದು ಮಚ್ಚಿನಿಂದ ಹಲ್ಲೆ ನಡೆಸಿರುವ ಹಿನ್ನೆಲೆಯಲ್ಲಿ, ವ್ಯಕ್ತಿಯೋರ್ವನ ಕೊಲೆ (Murder) ಮಾಡಿರುವಂತಹ ಘಟನೆ ನಗರದ ರಾಗಿಮನಗಡ್ಡದಲ್ಲಿ ನಡೆದಿದೆ.
ನರಸಿಂಹಲು (32) ಮೃತ ವ್ಯಕ್ತಿ.
ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪರಸ್ಪರ ಕೇಸ್ ದಾಖಲಾಗಿದ್ದು, ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಗಿಮನಗಡ್ಡದಲ್ಲಿ ಕಾರ್ನರ್ ಬಳಿ ವಾಸಿಸುತ್ತಿದ್ದ ನರಸಿಂಹ ಮೃತರು.
ಗುರುವಾರ ರಾತ್ರಿ ರಸ್ತೆಯಲ್ಲಿ ಅದೇ ಪ್ರದೇಶದ ಹುಡುಗರು ಪಟಾಕಿ ಹೊಡೆಯುತ್ತಿದ್ದರು. ಪಟಾಕಿ ಏಕೆ ಹೊಡೆಯುತ್ತಿದ್ದಿರಿ ಅಂತ ನರಸಿಂಹ ಪ್ರಶ್ನಿಸಿದ್ದಾರೆ. ಆಗ ಹುಡುಗರು ಮಾತು ಕೇಳದ ಹಿನ್ನೆಲೆಯಲ್ಲಿ ನರೇಶ್, ಪ್ರವೀಣ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ.
ಆಗ ಹಲ್ಲೆಗೊಳಗಾದ ಯುವಕರು ಹಾಗೂ ಅವರ ಕಡೆಯವರು ನರಸಿಂಹನ ಮೇಲೆ ದೊಣ್ಣೆ ಗಳಿಂದ ಹಲ್ಲೆ ನಡೆಸಿ ಹತ್ಯೆಗೈಯಲಾಗಿದೆ. ಈ ಪ್ರಕರಣ ಸಂಬಂಧ ದೂರು-ಪ್ರತಿದೂರು ದಾಖಲಾಗಿದೆ.