ಹಾಸನ: ನಗರ ಪ್ರಸಿದ್ಧ ಶಕ್ತಿದೇವತೆ ಹಾಸನಾಂಬ ದರ್ಶನೋತ್ಸವಕ್ಕೆ ತೆರೆ ಬಿದ್ದಿದೆ. ಭಾನುವಾರ ಮಧ್ಯಾಹ್ನ 12.33 ಕ್ಕೆ ಸಕಲ ವಿಧಿವಿಧಾನಗಳೊಂದಿಗೆ ಹಾಸನಾಂಬ ದೇಗುಲದ ಗರ್ಭಗುಡಿಯ ಬಾಗಿಲಿಗೆ ಬೀಗ ಹಾಕಲಾಯಿತು.
ಸಂಪ್ರದಾಯದಂತೆ ಪೂಜೆ, ನೈವೇದ್ಯ ಮಾಡಿ, ನಂದಾದೀಪ ಹಚ್ಚಿಟ್ಟ ಅರ್ಚಕರು, ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಗರ್ಭಗುಡಿಯ ಬಾಗಿಲಿಗೆ ಬೀಗ ಹಾಕಿ, ಆಡಳಿತಾಧಿಕಾರಿಗೆ ದೇವಾಲಯದ ಬೀಗದ ಕೈ ಹಸ್ತಾಂತರಿಸಿದರು.
ಮುಂದಿನ ವರ್ಷ ಅಕ್ಟೋಬರ್ 9 ರಿಂದ ಅ.23 ರವರೆಗೆ ಹಾಸನಾಂಬ ದೇಗುಲ ಬಾಗಿಲು ತೆರೆಯಲಿದ್ದು, ಭಕ್ತರಿಗೆ ದರ್ಶನ ಲಭ್ಯವಾಗಲಿದೆ.
ಈ ಬಾರಿ ಸುಮಾರು 20 ಲಕ್ಷ ಭಕ್ತರು ದರ್ಶನ ಪಡೆದಿದ್ದು, ಟಿಕೆಟ್, ಲಾಡು ಮಾರಾಟದಿಂದ ರೂ.9 ಕೋಟಿ ಆದಾಯ ಸಂಗ್ರಹವಾಗಿದೆ ಎನ್ನಲಾಗಿದೆ.