ಬೆಂಗಳೂರು: ರೈತರಿಗೆ ವಕ್ಫ್ ನೋಟೀಸ್ (waqf board land issue) ನೀಡಲು ಬಿಜೆಪಿಯೇ ಕಾರಣ. ಮಗುವನ್ನು ಚಿವುಟೋದು ಅವರೇ, ಮತ್ತೆ ತೊಟ್ಟಿಲನ್ನು ತೂಗೋದು ಅವರೇ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವಧಿಯಲ್ಲಿ (waqf board land issue) ನೋಟಿಸ್ ನೀಡಿದ್ದು ಇದೇ ಬಿಜೆಪಿಯವರು. ಅದನ್ನು ನಮ್ಮ ಸರ್ಕಾರದ ಅದನ್ನು ಸರಿ ಪಡಿಸುತ್ತಿದೆ. ಈ ಕುರಿತು ಸಿಎಂ ಆದಿಯಾಗಿ ಸಚಿವರು ಸ್ಪಷ್ಟನೆ ನೀಡಿದ್ದು, ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ.
ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ. ಅದಕ್ಕಾಗಿ ಪ್ರತಿಭಟನೆ ಮಾಡ್ತಾ ಇದ್ದಾರೆ. ಮುಂದಿನ ಅವಧಿಯಲ್ಲಿಯೂ ಕೆಲಸ ಇರಲ್ಲ.. ಮಾಡ್ತಾ ಇರಲಿ ಎಂದು ರಾಮಲಿಂಗಾ ರೆಡ್ಡಿ ಅವರು ಲೇವಡಿ ಮಾಡಿದರು.