ಬೆಂಗಳೂರು: ವಕ್ಫ್ ವಿಚಾರವಾಗಿ ಬಿಜೆಪಿಯವರು ಪ್ರತಿಭಟನೆ ಮಾಡ್ತಾ ಇಲ್ಲ ರಾಜಕಾರಣ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DKShivakumar) ಹೇಳಿದರು.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿ ವಕ್ಫ್ ನೋಟಿಸ್ ವಿರೋಧಿಸಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ವಕ್ಫ್ ವಿಚಾರವಾಗಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಅದು ಪ್ರತಿಭಟನೆ ಅಲ್ಲ ರಾಜಕಾರಣ ಎಂದರು.
ಚನ್ನಪಟ್ಟಣ ಉಪಚುನಾವಣೆ ಕುರಿತು ಮಾತನಾಡಿ, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕನಾದವನು ಏನು ಕೊಡುತ್ತಾನೆ. ಯಾವ ರೀತಿ ಸಹಾಯ ಮಾಡುತ್ತಾನೆ. ಅವರ ಬದುಕನ್ನು ಹೇಗೆ ಬದಲಾವಣೆ ಮಾಡುತ್ತಾನೆ. ಅದು ಬಹಳ ಮುಖ್ಯ” ಎಂದರು.
ಯಾರು ಯಾರು ಏನೇನು ಮಾಡಿದ್ದಾರೆ ಎಂಬ ಪಟ್ಟಿಯನ್ನು ಈ ಚುನಾವಣೆಯ ಹಬ್ಬದಂದು ಲೆಕ್ಕಕ್ಕೆ ಬರುತ್ತದೆ. ಅದರಂತೆ ಜನ ತೀರ್ಮಾನ ಮಾಡುತ್ತಾರೆ. ಡಿಕೆ ಶಿವಕುಮಾರ್ ಏನು ಕೊಡುಗೆ ಕೊಟ್ಟಿದ್ದಾರೆ. ಡಿಕೆ ಸುರೇಶ್ ಏನು ಕೊಡುಗೆ ಕೊಟ್ಟಿದ್ದಾರೆ. ಯೋಗೇಶ್ವರ್ ಏನು ಕೊಡುಗೆ ಕೊಟ್ಟಿದ್ದಾರೆ. ಕುಮಾರಸ್ವಾಮಿ ಏನು ಕೊಡುಗೆ ಕೊಟ್ಟಿದ್ದಾರೆ. ಈ ಎಲ್ಲಾ ಪಟ್ಟಿ ಆಗುತ್ತಿದೆ. ಅದಕ್ಕೆ ಜನ ಮಾರ್ಕ್ಸ್ ಕೊಡ್ತಾರೆ. ಅದು ಬಿಟ್ಟರೆ ಯಾವ ರಣನೂ ಇಲ್ಲ. ರಂಗನೂ ಇಲ್ಲ ಎಂದರು.
ಚನ್ನಪಟ್ಟಣದಲ್ಲಿ ನಿನ್ನೆ ಆರ್.ಅಶೋಕ್, ಸಿ.ಟಿ. ರವಿ ಒಗ್ಗಟ್ಟು ಪ್ರದರ್ಶನ ಮಾಡಿ ಕುಮಾರಸ್ವಾಮಿಗೆ ಸಾಥ್ ಕೊಟ್ಟಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ ಮಾಡಲಿ ಒಳ್ಳೆಯದು. ಜೆಡಿಎಸ್ನವರಂತೂ ಇವರಿಗೆ ಸಾಥ್ ಕೊಡಲಿಲ್ಲ. ಇವರಾದರೂ ಕೊಡಬೇಕಲ್ಲ. ಜೆಡಿಎಸ್ ಅವರು ಪಾದಯಾತ್ರೆ ವೇಳೆ ಸಾಥ್ ಕೊಟ್ಟಿಲ್ವಲ್ಲಾ ಎಂದು ಲೇವಡಿ ಮಾಡಿದರು.