ತಿರುವನಂತಪುರಂ: ಶಬರಿಮಲೆ (Sabarimala) ಅಯ್ಯಪ್ಪ ದೇಗುಲದ ಪವಿತ್ರ 18 ಮೆಟ್ಟಿಲುಗಳ (ಪತಿನೆಟ್ಟಂಪಾಡಿ) ಮೇಲೆ ಗರ್ಭಗುಡಿಗೆ ಬೆನ್ನುಹಾಕಿ ಪೋಟೋ ತೆಗೆಸಿಕೊಂಡ 28 ಪೊಲೀಸರನ್ನು, ದೇಗುಲದ ಭದ್ರತೆಯ ಹೊಣೆಯಿಂದ ಹಿಂದಕ್ಕೆ ಪಡೆಯಲಾಗಿದೆ.
ಜೊತೆಗೆ ಭವಿಷ್ಯದಲ್ಲಿ ಶಿಷ್ಟಾಚಾರ ಕಾಪಾಡುವ ಮತ್ತು ಉತ್ತಮ ನಡತೆ ತೋರಿಸಲು ಅಗತ್ಯ ತರಬೇತಿಗೆ ಹಾಜರಾಗುವಂತೆ 28ಪೊಲೀಸರಿಗೆ ಸೂಚಿಸಲಾಗಿದೆ.
ಪೊಲೀಸರ ತಂಡ ಮೆಟ್ಟಿಲು ಮೇಲೆ ತೆಗೆಸಿಕೊಂಡ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗಿ ವಿವಾದಕ್ಕೀಡಾಗಿತ್ತು. ವಿಎಚ್ಪಿ ಕೇರಳ ಘಟಕ ಘಟನೆ ಖಂಡಿಸಿ ಪೊಲೀಸರು ದೇಗುಲದ ಸಂಪ್ರದಾಯವನ್ನು ಉಲ್ಲಂಘಿಸಿದ್ದಾರೆ ಎಂದು ಕಟುವಾಗಿ ಟೀಕಿಸಿತ್ತು.